Technology News:
ಗೌರಿಕುಂಡ ಹಾಗು ಕೇದಾರನಾಥ ನಡುವೆ ಐದು ಟವರ್‌ಗಳನ್ನು ಸ್ಥಾಪಿಸುವ ಯೋಜನೆಗೆ ಅನುಗುಣವಾಗಿ ಸೋನ್‍ಪ್ರಯಾಗದಲ್ಲಿ ದೊಡ್ಡ ಟವರ್ ಸ್ಥಾಪಿಸಲಾಗಿದೆ ಎಂದು ರಿಲಯನ್ಸ್ ಜಿಯೋ ಸಂಸ್ಥೆ ಹೇಳಿಕೊಂಡಿದೆ.
ಛೋಟಿ ಲಿಂಚೋಲಿ, ಲಿಂಚೋಲಿ ಮತ್ತು ರುದ್ರಪಾಯಿಂಟ್‍ನಲ್ಲಿ ಮೂರು ಟವರ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ಉಳಿದ ಎರಡನ್ನು ಶೀಘ್ರದಲ್ಲೇ ನಿರ್ಮಿಸಲಾಗುತ್ತದೆ ಎಂದು ತಿಳಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಗದಲ್ಲಿ ಯಾತ್ರಾರ್ಥಿಗಳಿಗೆ ತಡೆರಹಿತ ಸಂಪರ್ಕಕ್ಕಾಗಿ ಮೊಬೈಲ್ ನೆಟ್‌ವರ್ಕ್ ಫೈಬರ್ ಲಿಂಕ್ ನೀಡಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಜಿಯೋ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ತನ್ನ 4ಜಿ ಸೇವೆಯನ್ನು ಪ್ರಾರಂಭಿಸಿದೆ ಎಂದು ತಿಳಿಸಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಸಮರ್ಪಕ ಮೊಬೈಲ್ ನೆಟ್ ವರ್ಕ್ ಸಂಪರ್ಕ ಇರಲಿಲ್ಲವಾದ್ದರಿಂದ ಸ್ಥಳೀಯ ಜನರಿಗೆ ಮಾತ್ರವಲ್ಲ, ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ದೂರವಾಣಿ ಸಂವಹನಕ್ಕೆ ಬಹಳ ತೊಂದರೆಯಾಗಿತ್ತು. ಇದನ್ನರಿತ ಜಿಯೋ 4ಜಿ ಡಿಜಿಟಲ್ ಸೇವೆಯನ್ನು ಮಲೆ ಮಹದೇಶ್ವರ ಬೆಟ್ಟದಲ್ಲಿ ಆರಂಭಿಸಿದೆ ಎನ್ನಲಾಗಿದೆ.
‘ಟ್ವಿಟ್ಟರ್ ಬಳಕೆದಾರ’ರಿಗೆ ಭರ್ಜರಿ ಗುಡ್ ನ್ಯೂಸ್: ಈಗ ‘ಪೋಸ್ಟ್ ಎಡಿಟ್’ ಮಾಡಲು ಅವಕಾಶ
ಸ್ಮಾರ್ಟ್ ಮಾರುಕಟ್ಟೆಯಲ್ಲಿ ಶವೋಮಿ ಹೊಸ ಅಲೆ…! ಟಿ.ವಿ ಮಾರುಕಟ್ಟೆಯಲ್ಲಿ ಇನ್ನು ಶವೋಮಿ ಹವಾ..!