Technno News:
ಕರ್ನಾಟಕದ ನಾಲ್ಕು ನಗರಗಳಲ್ಲಿ ಮತ್ತೆ ಜಿಯೋ ಸಂಸ್ಥೆಯು ಸೇವೆಗಳನ್ನು ಆರಂಭಿಸಲು ಸಜ್ಜಾಗಿದೆ. ಹೌದು ಭಾರತದ ನಂ.1 ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಕರ್ನಾಟಕದಲ್ಲಿ ಮತ್ತೆ ನಾಲ್ಕು ನಗರಗಳಲ್ಲಿ ‘ಜಿಯೋ ಟ್ರೂ 5ಜಿ’ ಸೇವೆಗಳನ್ನು ಆರಂಭಿಸುವ ಮೂಲಕ ರಾಜ್ಯದ ಜನತೆಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಬೆಂಗಳೂರಿನ ನಂತರ ಇತ್ತೀಚಿಗಷ್ಟೇ ಮೈಸೂರಿನಲ್ಲಿಯೂ ಟ್ರೂ 5ಜಿ ಸೇವೆಗಳನ್ನು ಆರಂಭಿಸಿದ್ದ ಜಿಯೋ ಇದೀಗ ರಾಜ್ಯದ ಪ್ರಮುಖ ನಗರಗಳಾದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರಿನಲ್ಲಿ 5ಜಿ ಸೇವೆಗಳನ್ನು ಆರಂಭಿಸಿರುವುದಾಗಿ ತಿಳಿಸಿರುತ್ತದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರಿನ ಗ್ರಾಹಕರು ಇಂದಿನಿಂದ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಬಳಸಬಹುದು. 2023ರ ಪ್ರಾರಂಭದೊಂದಿಗೆ ಜಿಯೋ ಟ್ರೂ 5ಜಿ ತಂತ್ರಜ್ಞಾನವನ್ನು ಆನಂದಿಸಬಹುದು ಎಂದು ಜಿಯೋ ಸಂಸ್ಥೆ ಹೇಳಿದೆ ಎನ್ನಲಾಗಿದೆ.
ಸರ್ವೇ ಪ್ರಕಾರವಾಗಿ ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ ಕೇಂದ್ರ ಮತ್ತು ಪ್ರಮುಖ ಶಿಕ್ಷಣ ಕೇಂದ್ರವಾಗಿದೆ. ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ, ಈ ಪ್ರದೇಶದ ಗ್ರಾಹಕರು ಕೇವಲ ಉತ್ತಮ ದೂರಸಂಪರ್ಕ ಜಾಲವನ್ನು ಪಡೆಯುತ್ತಾರಷ್ಟೇ ಅಲ್ಲದೇ, ಜತೆಗೆ ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಎಸ್ಎಂಇಗಳು ಅನಂತ ಬೆಳವಣಿಗೆಯ ಅವಕಾಶಗಳನ್ನು ಪಡೆಯುತ್ತವೆ. ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ನಗರದಲ್ಲಿ 5ಜಿ ಹೊರತರಲು ನಾವು ಹೆಮ್ಮೆಪಡುತ್ತೇವೆ. 5ಜಿ ಸೇವೆಗಳನ್ನು ಹೊರತರಲು ಪ್ರಾರಂಭಿಸಿದ ನಂತರ ನಮ್ಮ ಅತಿದೊಡ್ಡ ಅನಾವರಣದಲ್ಲಿ ಇದೂ ಒಂದಾಗಿದೆ ಎಂದು ಜಿಯೋ ವಕ್ತಾರರು ಹೇಳಿರುತ್ತಾರೆ.
ಮಂಗಳೂರು: ಗಾಂಜಾ ದಂಧೆಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳು ಅರೆಸ್ಟ್..?!