Finance knowledge: ಹಣಕಾಸು ತಜ್ಞ ಹೇಮಂತ್ ಕುಮಾರ್ ಅವರು ಉದ್ಯಮ ಮತ್ತು ಉದ್ಯೋಗದ ಬಗ್ಗೆ ಮಾತನಾಡಿದ್ದಾರೆ. ನಮ್ಮ ದೇಶದಲ್ಲಿ ಕೇವಲ 3ರಿಂದ 4 ಪರ್ಸೆಂಟ್ ಜನ ಮಾತ್ರ ಹಣಕಾಸನ್ನು ಸರಿಯಾಗಿ ಹೂಡಿಕೆ ಮಾಡುತ್ತಿದ್ದಾರೆಂದು ಅವರು ಹೇಳಿದ್ದಾರೆ.
ಹಿಂದಿನ ಕಾಲದವರಿಗೆ ಉಳಿಸುವುದು ತಿಳಿದಿತ್ತು. ಬೆಳೆಸುವುದು ತಿಳಿದಿರಲಿಲ್ಲ. ಆದರೆ ಈಗ ಹಲವು ದಾರಿಗಳಿದೆ. ಆದರೂ ಕೂಡ ನಮ್ಮ ದೇಶದಲ್ಲಿ 10 ಪರ್ಸೆಂಟ್ ಆಸ್ತಿ 90 ಪರ್ಸೆಂಟ್ ಜನರ ಬಳಿ ಇದೆ. ಉಳಿದ 90 ಪರ್ಸೆಂಟ್ ಆಸ್ತಿ 10 ಪರ್ಸೆಂಟ್ ಜನರ ಬಳಿ ಇದೆ. ಏಕೆಂದರೆ, ಜನರಿಗೆ ಕಾಯುವ ತಾಳ್ಮೆ ಇಲ್ಲದೇ ಈ ಪರಿಸ್ಥಿತಿ ಬಂದಿದೆ ಅಂತಾರೆ ಹೇಮಂತ್.
ಹೇಮಂತ್ ಹೇಳುವ ಪ್ರಕಾರ, ಉದ್ಯೋಗ ಮಾಡೋದು ಅಂದರೆ ಮುಂಚೆಯಿಂದಲೂ ಇಷ್ಟವಿರಲಿಲ್ಲ. ಏಕೆಂದರೆ, ಅವರಿಗೆ ಉದ್ಯಮಿಯಾಗುವ ಆಸೆ ಇತ್ತು. ಹಾಗಾಗಿ ನಾನು ಕಾಲೇಜ್ ಮುಗಿಸಿದ ಬಳಿಕ ಎಲ್ಲಿಯೂ ಕೆಲಸಕ್ಕೆ ಹೋಗಲಿಲ್ಲ. ನನಗೆ ಜಾಬ್ ಆಫರ್ ಬಂದರೂ ನಾನು ಹೋಗಲಿಲ್ಲ. ಅದರ ಬದಲು ಪಾರ್ಟ್ನರ್ ಶಿಪ್ ಬ್ಯುಸಿನೆಸ್ ಮಾಡಿದೆ. ಇದರಲ್ಲಿ ನನಗೆ ಸಾಕಷ್ು ನಷ್ಟ , ಅನುಭವ ಆಯಿತು ಎಂದು ಹೇಳ್ತಾರೆ ಹೇಮಂತ್.
50 ಪೈಸೆಯಿಂದಲೇ ಸೇವ್ ಮಾಡಲು ಕಲಿತಿದ್ದ ಹೇಮಂತ್ ಸಾವಿರ ಸಾವಿರ ಸೇವಿಂಗ್ಸ್ ಮಾಡಿದ್ದರು. ಬಳಿಕ ಉದ್ಯಮ ಮಾಡುವಾಗ ಲಕ್ಷ ಲಕ್ಷ ಕೂಡಿರಿಸಿದ್ದರು. ಅದನ್ನೇ ಉದ್ಯಮಕ್ಕೆ ಹಾಕಿದ್ದರು. ಆದರೆ ಲಾಸ್ ಆಗಿ ಅದರಿಂದ ನಾಾನು ಪಾಠ ಕಲಿತೆ ಅಂತಾರೆ ಹೇಮಂತ್. ಸಂಪೂರ್ಣ ಸಂದರ್ಶನಕ್ಕಾಗಿ ಈ ವೀಡಿಯೋ ನೋಡಿ.