ಬೆಂಗಳೂರು: ಜೋಗಿಪಾಳ್ಯದಲ್ಲಿ ದಿವ್ಯಾ ಎನ್ನುವ ಟೆಕ್ಕಿ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಕ್ಷಣೆ ಕಿರುಕುಳ ನೀಡುತ್ತಿದ್ದ ಎಂದು ಪತಿ ಅರವಿಂದ್ ಥಾಣಿಕ್ ವಿರುದ್ದ ದಿವ್ಯಾ ಪೋಷಕರು ಆರೋಪ ಮಾಡಿದ್ದಾರೆ,
ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಲಹದಿಂದ ಪ್ರತಿದಿನವೂ ಆತ್ಮಹತ್ಯೆ, ಕೊಲೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನಲೆಯಲ್ಲಿ ನಗರದ ಜೋಗಿಪಾಳ್ಯದಲ್ಲಿ ವಾಸವಾಗಿದ್ದ ದಂಪತಿ ಅರವಿಂದ್ ಥಾಣಿಕ್ ಮತ್ತು ದಿವ್ಯಾ 2014 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಇವರಿಗೆ ಎರಡು ಮಕ್ಕಳಿದ್ದಾರೆ.
ಇನ್ನು ಸಾಪ್ಟ್ ವೇರ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುವ ದಿವ್ಯಾ ಪತಿ ಅರವಿಂದ್ ಥಾಣಿಕ್ ವರದಕ್ಷಣೆ ಕಿರುಕುಳ ನೀಡುತ್ತಿದ್ದ ಎನ್ನುವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ದಿವ್ಯಾ ಪೋಷಕರು ತಿಳಿಸಿದ್ದಾರೆ.
ಸೋಮವಾರ ದಿವ್ಯಾ ತನ್ನ ಕೋಣೆಯಿಂದ ಲಾಕ್ ಮಾಡಿಕೊಂಡಿದ್ದಾಳೆ ಎಂದು ಅರವಿಂದ್ ಪತ್ನಿಯ ಪೋಷಕರಿಗೆ ಮಾಹಿತಿ ನೀಡಿದ್ದಾನೆ .ಪೋಷಕರು ಬಂದು ನೋಡಿದಾಗ ದಿವ್ಯಾ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ.
ಅರವಿಂದ್ ಇದನ್ನು ಆತ್ಮಹತ್ಯೆ ಎಂದು ಹೇಳುತಿದ್ದರೆ ದಿವ್ಯಾ ಪೋಷಕರು ಕೊಲೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.ದಿವ್ಯಾ ಪೋಷಕರ ಆರೋಪದ ಹಿನ್ನಲೆ ಪೋಲಿಸರು ಮನೆಯನ್ನು ಪರಿಶೀಲನೆ ನಡೆಸುತಿದ್ದಾರೆ.
Sandalwood : ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಶುರುವಾಗಿದೆ ಫ್ಯಾನ್ಸ್ ವಾರ್..!