ಗ್ರಾಮದ ಓರ್ವ ವ್ಯಕ್ತಿಯ ಬಗ್ಗೆ ಸತ್ಯಸಂಗತಿ ಬಯಲು ಮಾಡಿದ್ದಕ್ಕೆ, ಪತ್ರಕರ್ತನನ್ನು ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್ ಬಳಸಿ, ಬೆಂಕಿ ಹಾಕಿ ಸುಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಉತ್ತರಪ್ರದೇಶದ ಬಲ್ರಾಂಪುರ್ ಎಂಬಲ್ಲಿ ಈ ಘಟನೆ ನಡೆದಿದ್ದು, ಪತ್ರಕರ್ತ ರಾಕೇಶ್ ಸಿಂಗ್ ನಿರ್ಭಿಕ್ ಮತ್ತು ಆತನ ಗೆಳೆಯ ಪಿಂಟು ಸಾಹು ಎಂಬಾತನನ್ನು ಕ್ರೂರಿಗಳು ಸುಟ್ಟು ಸಾಯಿಸಿದ್ದಾರೆ. ಲಖನೌನ ರಾಷ್ಟ್ರೀಯ ಸ್ವರೂಪ ಪತ್ರಿಕೆಯಲ್ಲಿ ರಾಕೇಶ್ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಬಲ್ರಾಮ್‌ಪುರದ ಮುಖಂಡರೊಬ್ಬರ ಬಗ್ಗೆ ಸತ್ಯ ಸಂಗತಿಯನ್ನ ಆ ಪತ್ರಿಕೆಯಲ್ಲಿ ಛಾಪಿಸಿದ್ದ.
ಇದೇ ದ್ವೇಷಕ್ಕೆ, ಮುಖಂಡನ ಕಡೆಯವರು ರಾಕೇಶ್ ಮತ್ತು ಪಿಂಟು ಸಾಹುನನ್ನ ಸುಟ್ಟು ಸಾಯಿಸಿದ್ದಾರೆ. ಘಟನೆ ನಡೆದಾಗ, ಪಿಂಟು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಾಕೇಶ್‌ನನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಯಿತಾದರೂ, ಆತ ಬದುಕುಳಿಯಲಿಲ್ಲ. ಆದ್ರೆ ಸಾವಿಗೂ ಮುನ್ನ ಪೊಲೀಸರಿಗೆ ಹೇಳಿಕೆ ಕೊಟ್ಟಿರುವ ರಾಕೇಶ್, ನಾನು ಯಾವ ಮುಖಂಡನ ಸತ್ಯಸಂಗತಿಯನ್ನ ಬಯಲಿಗೆಳೆದಿದ್ದೇನೋ, ಆತನ ಕಡೆಯವರೇ, ನಮಗೆ ಈ ಗತಿ ತಂದಿದ್ದು, ಅವರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಹೇಳಿದ್ದ.
ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳಾದ ಲಲಿತ್ ಮಿಶ್ರಾ, ರಿಂಕು ಮಿಶ್ರಾ, ಅಕ್ರಮ್ ಎಂಬುವವರನ್ನ ಬಂಧಿಸಿದ್ದಾರೆ.