JPC ರೈತರಿಂದ ಅರ್ಜಿ ತೆಗೆದುಕೊಂಡು ನಾಟಕ ಮಾಡ್ತಿದೆ; ಡಿಸಿಎಂ ಡಿ.ಕೆ ಶಿವಕುಮಾರ

Hubli News: ಹುಬ್ಬಳ್ಳಿ: ಜಂಟಿ ಸಂಸದೀಯ ಕಮಿಟಿ ಅಂದ್ರೆ ಅದಕ್ಕೆ ಒಂದು ಬದ್ಧತೆಯಿದೆ. ಇದು ಒಂದು ನಾಟಕ ಕಂಪನಿ, ಕಮೀಟಿ ರಾಜ್ಯಕ್ಕೆ ಭೇಟಿ ನೀಡಬೇಕು ಅಂದ್ರೆ ಸರ್ಕಾರಕ್ಕೆ, ಅಧಿಕಾರಿಗಳಿ, ಸದಸ್ಯರಿಗೆ ತಿಳಿಸಬೇಕು. ಜಂಟಿ ಸಂಸದೀಯ ಕಮಿಟಿ ಅಧ್ಯಕ್ಷ ಪಾರ್ಟಿ ಕೆಲಸಕ್ಕೆ ಬಂದು ರೈತರಿಂದ ಅಹವಾಲು ‌ಸ್ವೀಕಾರ ಮಾಡುತ್ತಿದ್ದಾರೆಂದು ಹುಬ್ಬಳ್ಳಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಇನ್ನು ಬೊಮ್ಮಾಯಿ‌, ಸೋಮಣ್ಣ ಏನು ಕಮೀಟಿ ಸದಸ್ಯರಾ?. ರೈತರಿಂದ ಅರ್ಜಿ ತೆಗೆದುಕೊಂಡು ರಾಜಕೀಯ ಮಾಡಿ ಅದನ್ನು ಜನರಿಗೆ ಪ್ರಚಾರ ಮಾಡಬೇಕು ಎನ್ನುವುದು ಇದರ ಉದ್ದೇಶ. ಬಿಜೆಪಿ ಅಧಿಕಾರದಲ್ಲಿಯೇ ವಕ್ಪ್ ಬೋರ್ಡ್ ನೋಟಿಸ್ ಕೊಟ್ಟು ದಾಖಲೆ ತಿದ್ದುಪಡಿ ಮಾಡಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ದಾಖಲೆ ಬಿಡುಗಡೆ ಮಾಡತ್ತಾರೆ. ಯಾವುದೇ ರೈತನ ಜಮೀನು ಕಿತ್ತುಕೊಳ್ಳುವುದಿಲ್ಲ. ರೈತರ ಜಮೀನು ‌ಉಳಿಸು ಕೆಲಸ‌ ಮಾಡುತ್ತೆವೆ. ಏನೋ‌ ತಾಂತ್ರಿಕವಾಗಿ ಅಧಿಕಾರಿಗಳು ಮಾಡಿರಬಹುದು ಅದನ್ನು ಸರಿ ಮಾಡತ್ತೆವೆ. ಎಲ್ಲಾ ರೈತರ ರಕ್ಷಣೆ ಮಾಡಲು ‌ನಮ್ಮ‌ ಸರ್ಕಾರ ಸಿದ್ಧತೆ ಇದೆ ಎಂದರು.

About The Author