Wednesday, July 2, 2025

Latest Posts

ಜುಲೈ 11, 2020ರ ರಾಶಿ ಭವಿಷ್ಯ

- Advertisement -

ಮೇಷ: ನೆರೆ ಹೊರೆಯವರಿಂದ ಅನಾವಶ್ಯಕವಾಗಿ ನಿಷ್ಠುರಕ್ಕೆ ಕಾರಣರಾಗದಿರಿ. ಹಿರಿಯರ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ. ವಿದ್ಯಾರ್ಥಿಗಳು ತಮ್ಮ ಪ್ರಯತ್ನ ಬಲಕ್ಕೆ ಒತ್ತು ನೀಡುವುದು ಅಗತ್ಯವಿರುತ್ತದೆ.

ವೃಷಭ: ಆಗಾಗ ವೃತ್ತಿರಂಗದಲ್ಲಿ ಅಡಚಣೆ ಕಂಡುಬಂದರೂ ಕಾರ್ಯಸಾಧನೆ ನಿಶ್ಚಿತ. ದಾಯಾದಿಗಳ ಸಹಕಾರದ ಅಚ್ಚರಿ ತಂದೀತು. ಸರ್ಕಾರಿ ಅಧಿಕಾರಿ ವರ್ಗದವರಿಗೆ ಶುಭ ಸಮಾಚಾರವಿದೆ. ದೇಹಾರೋಗ್ಯದಲ್ಲಿ ಜಾಗೃತೆ.

ಮಿಥುನ : ಮಿತ್ರ ವರ್ಗದವರಿಗೆ ವಂಚನೆಯ ಸಾಧ್ಯತೆ ತೋರಿ ಬಂದೀತು. ಕಮಿಶನ್ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ತರಲಿದೆ. ಹಿರಿಯರಿಗೆ ದೇವತಾ ದರ್ಶನ ಭಾಗ್ಯಕ್ಕಾಗಿ ಸಂಚಾರ ವದಗಿ ಬರಲಿದೆ. ಆರೋಗ್ಯದಲ್ಲಿ ಜಾಗೃತೆ ಇರಲಿ.

ಕರ್ಕಾಟಕ: ಪ್ರವಾಸಕ್ಕಾಗಿ ಸಂಚಾರವಿರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ನಿರಿಕ್ಷಿತ ಲಾಭವಿಲ್ಲದಿದ್ದರೂ ನಷ್ಟವಾಗಲಾರದು. ದೇಹಾರೋಗ್ಯದ ಬಗ್ಗೆ ವೈದ್ಯರಲ್ಲಿ ತಪಾಸಣೆ ಮಾಡಿಸಿರಿ. ದೈವಾನುಗ್ರಹವಿದ್ದ ನೀವು ಭಾಗ್ಯಶಾಲಿಗಳಾಗಲಿದ್ದೀರಿ.

ಸಿಂಹ: ಆರ್ಥಿಕವಾಗಿ ನಾನಾ ರೀತಿಯಲ್ಲಿ ಸಂಪನ್ನತೆ. ಗೃಹನಿರ್ಮಾಣ ಕಾರ್ಯಕ್ಕೆ ಭೂ ಖರೀದಿ, ಶುಭಮಂಗಲ ಕಾರ್ಯಕ್ಕೆ ಸಂಭ್ರಮದ ಓಡಾಟವಿರುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕಾಗಿ ಉತ್ತಮ ಅವಕಾಶಗಳು ಒದಗಿಬರಲಿದೆ.

ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಗಮನ ಹರಿಸಿ. ಕೌಟುಂಬಿಕವಾಗಿ ಹಿರಿಯರ ಕೊಂಕು ನುಡಿಗೆ ತಲೆಕೆಟ್ಟು ಹೋದೀತು. ಅನಿರೀಕ್ಷಿತ ಖರ್ಚುವೆಚ್ಚದಿಂದ ಚಿಂತೆಗೀಡಾಗುವಿರಿ. ವೈಯಕ್ತಿಕ ಆರೋಗ್ಯದ ಬಗ್ಗೆ ಜಾಗೃತರಾಗಿರಿ.

ತುಲಾ: ಕಾರ್ಯಕ್ಷೇತ್ರದಲ್ಲಿ ಒತ್ತಡಗಳು ದೇಹಾರೋಗ್ಯವನ್ನು ಏರುಪೇರು ಮಾಡಲಿದೆ. ಸಾಂಸಾರಿಕವಾಗಿ ಅಸಮಾಧಾನವಿರುತ್ತದೆ. ನ್ಯಾಯಾಲಯದ ವಿಚಾರದಲ್ಲಿ ಮಧ್ಯಸ್ಥಿಕೆ ರಾಜಿ ಮನೋಬಾವನೆಗಳು ಕಾರ್ಯಾನುಕೂಲವಾದೀತು.

ವೃಶ್ಚಿಕ: ಅವಿವಾಹಿತರಿಗೆ ಯೋಗ್ಯ ಸಂಬಂಧದಿಂದ ಕಂಕಣ ಭಾಗ್ಯ ಕೂಡಿ ಬರಲಿದೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಹೂಡಿಕೆ ಲಾಭಕರವಾಗಲಿದೆ. ಆದಾಯ ಮೀರಿ ಅನಿರೀಕ್ಷಿತ ರೂಪದಲ್ಲಿ ಖರ್ಚುವೆಚ್ಚಗಳು ಅಧಿಕವಾದೀತು.

ಧನು: ವೃತ್ತಿರಂಗದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಅನುಭವಕ್ಕೆ ಬರಲಿದೆ. ಸಾಂಸಾರಿಕವಾಗಿ ಸ್ವಯಂ ಕಾಲೋಚಿತ ವರ್ತನೆ ಸಮಸ್ಯೆಗಳ ಜಂಜಾಟದಿಂದ ಪಾರು ಮಾಡಲಿದೆ. ರಾಜಕೀಯ ಮುನ್ನಡೆ ಇದೆ .

ಮಕರ: ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ. ಕೃಷಿ ಕೈಗಾರಿಕೆಗಳಲ್ಲಿ ನಾನಾ ರೀತಿಯ ಅನುಕೂಲವಾಗಲಿದೆ. ಸಂಪಾದನೆಯನ್ನು ವರ್ಧಿಸಿಕೊಂಡಲ್ಲಿ ಕಾರ್ಯಾನುಕೂಲವಾಗಲಿದೆ. ವೃತ್ತಿ ನಿರತರಿಗೆ ಮುನ್ನಡೆ ಇದೆ.

ಕುಂಭ: ಧನಾಗಮನ ಒಂದಲ್ಲ ಒಂದು ರೀತಿಯಲ್ಲಿ ಅನುಕೂಲವಾಗಲಿದೆ. ತಾಳ್ಮೆ ಸಮಾಧಾನದಿಂದ ಮುನ್ನಡೆಯಿರಿ. ಆರೋಗ್ಯಭಾಗ್ಯವನ್ನು ಕಾಪಾಡಿಕೊಳ್ಳುವ ಹೊಣೆ ನಿಮ್ಮದಾಗಲಿ. ಅಲೆದಾಟ ಹೆಚ್ಚಲಿದೆ.

ಮೀನ: ಧನಾಗಮನ ಒಂದಲ್ಲ ಒಂದು ರೀತಿಯಲ್ಲಿ ಉತ್ತಮವಿದ್ದು ಅನುಕೂಲವಾಗಲಿದೆ. ವೈದ್ಯಕೀಯ ವೃತ್ತಿಯವರು ಮುನ್ನಡೆಯನ್ನು ಸಾಧಿಸಲಿದ್ದಾರೆ. ಭೂ, ವಾಹನ ಖರೀದಿಗೆ ಅನುಕೂಲವಾದ ದಿನಗಳಿವು.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

- Advertisement -

Latest Posts

Don't Miss