ಮೇಷ: ನಿಮ್ಮ ಮನೋಬಲವು ನಿಮ್ಮನ್ನು ಎಲ್ಲಾ ರೀತಿಯಲ್ಲಿ ಮುನ್ನಡೆಸಲಿದೆ. ಕಾರ್ಯಕ್ಷೇತ್ರದಲ್ಲಿ ಕಾರ್ಯದ ಒತ್ತಡದಿಂದ ಕೋಪತಾಪಗಳು ಹೆಚ್ಚಲಿದೆ. ಕೌಟುಂಬಿಕವಾಗಿ ಅಸಮಾಧಾನದ ವಾತಾವರಣದಿಂದ ಬೇಸರವಾಗಲಿದೆ.
ವೃಷಭ: ವೈವಾಹಿಕ ಪ್ರಸ್ತಾಪಗಳು ಕಂಕಣಕ್ಕೆ ಪೂರಕವಾಗಲಿದೆ. ವೃಥಾ ಮಾನಾಪಮಾನಗಳಿಗೆ ಬಲಿಯಾಗದಂತೆ ಜಾಗೃತೆವಹಿಸಿ. ರಾಜಕೀಯ ಕ್ಷೇತ್ರದವರಿಗೆ ಮುನ್ನಡೆ ಇರುತ್ತದೆ. ವಿದ್ಯಾರ್ಥಿಗಳು ಆಗಾಗ ಉದಾಸೀನತೆ ಮಾಡಿಯಾರು.
ಮಿಥುನ : ಆರ್ಥಿಕವಾಗಿ ಅತೀ ಹೆಚ್ಚಿನ ಜಾಗೃತೆ ವಹಿಸಬೇಕಾಗುತ್ತದೆ. ವೈವಾಹಿಕ ಪ್ರಸ್ತಾಪಗಳಿಗೆ ಆಗಾಗ ಅಡಚಣೆ ತೋರಿ ಬಂದು ನಿರಾಸೆಯಾಗಲಿದೆ. ದಾಂಪತ್ಯದಲ್ಲಿ ಅನಾವಶ್ಯಕ ಕಲಹಕ್ಕೆ ಕಾರಣರಾಗದಂತೆ ಕಾಳಜಿ ವಹಿಸಿರಿ.
ಕರ್ಕಾಟಕ: ದೂರಸಂಚಾರದಲ್ಲಿ ಕಾರ್ಯಸಿದ್ಧಿಯಿರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಗಮನ ಹರಿಸಬೇಕಾದೀತು. ಸಾಂಸಾರಿಕವಾಗಿ ಮಡದಿ ಮಕ್ಕಳ ಸಹಕಾರವು ಸಮಾಧಾನ ತರಲಿದೆ. ಅನಿರಿಕ್ಷಿತವಾಗಿ ದೂರ ಸಂಚಾರವಿದೆ.
ಸಿಂಹ: ಶನಿಗ್ರಹದ ದೈವಾನುಗ್ರಹದಿಂದ ಆರ್ಥಿಕ ರೀತಿಯಲ್ಲಿ ನಾನಾರೀತಿಯಾಗಿ ಧನ ಸಂಚಯವಾದೀತು. ನಿರುದ್ಯೋಗಿಗಳಿಗೆ ನಿರಿಕ್ಷಿತ ಉದ್ಯೋಗ ಲಾಭವಿದೆ. ಆತ್ಮ ವಿಶ್ವಾಸದಿಂದ ಮುನ್ನಡೆದರೆ ನಿಮ್ಮ ಮನೋಕಾಮನೆಗಳು ನಡೆಯಲಿದೆ.
ಕನ್ಯಾ: ವೈಯಕ್ತಿಕವಾಗಿ ಮಾಡಿದ ತಪ್ಪುಗಳ ಬಗ್ಗೆ ವಿಮರ್ಶೆ ಮಾಡಬೇಕಾಯಿತು. ಗ್ರಹಗಳ ಪ್ರತಿಕೂಲದಂತೆ ಆಗಾಗಾ ಹೆಚ್ಚಿನ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ತೋರಿಬರಲಿದೆ. ಗುರು ಬಲದಿಂದ ಕಾರ್ಯಸಾಧನೆ ಕಂಡು ಬಂದೀತು.
ತುಲಾ: ಕೌಟುಂಬಿಕವಾಗಿ ಖರ್ಚುವೆಚ್ಚಗಳು ಆಗಾಗ ಅಧಿಕವಾದಾವು. ನಿಮ್ಮ ವೈಯಕ್ತಿಕ ವಿಚಾರದಲ್ಲಿ ಇತರರ ಪ್ರವೇಶ ಗೊಂದಲಕ್ಕೆ ಕಾರಣವಾದೀತು. ವಿದ್ಯಾರ್ಥಿಗಳಿಗೆ ನಿರಿಕ್ಷಿತ ಫಲಿತಾಂಶವು ದೊರಕಲಿದೆ. ಮುನ್ನಡೆಯಿರಿ.
ವೃಶ್ಚಿಕ: ಕಾರ್ಯಸಾಧನೆಯಲ್ಲಿ ಸಾವಧಾನವಾಗಿ ಮುಂದುವರೆಯಿರಿ. ಬಂಧು ಮಿತ್ರರು ನಿಮ್ಮ ಕೆಲಸ ಕಾರಯಗಳಿಗೆ ಸಹಕಾರ ನೀಡಲಿದ್ದಾರೆ. ಆರ್ಥಿಕ ಪರಿಸ್ಥಿತಿಯು ಉತ್ತಮಗೊಳ್ಳಲಿದೆ. ಸಾಮಾಜಿಕ ಕಾರ್ಯದಲ್ಲಿ ಪ್ರಶಂಸೆ.
ಧನು: ಆರ್ಥಿಕವಾಗಿ ಅತೀ ಹೆಚ್ಚಿನ ಜಾಗೃತೆ ವಹಿಸಿರಿ . ವಿದ್ಯಾರ್ಥಿಗಳಿಗೆ ಆಗಾಗ ಉದಾಸೀನತೆ ಕಂಡು ಬಂದಿತು. ಕಾರ್ಯಕ್ಷೇತ್ರದಲ್ಲಿ ಜನರೊಳಗೆ ಅನಾವಶ್ಯಕವಾಗಿ ಮನಸ್ತಾಪವಾದೀತು. ಬಂಧು ಮಿತ್ರರ ಸಹಕಾರದಿಂದ ಕಾರ್ಯಸಾಧನೆ.
ಮಕರ: ಸಾಂಸಾರಿಕವಾಗಿ ಮಡದಿ ಮಕ್ಕಳ ಸಹಕಾರದಿಂದ ನೆಮ್ಮದಿ ಸಿಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಗಮನ ಹರಿಸುವುದು ಉತ್ತಮ. ದೂರ ಸಂಚಾರದಲ್ಲಿ ಅನಿರೀಕ್ಷಿತ ಕಾರ್ಯಸಿದ್ಧಿಯಾಗಿ ಸಂತೋಷ.
ಕುಂಭ: ಆತ್ಮವಿಶ್ವಾಸದಿಂದ ಮುಂದುವರೆಯಿರಿ. ನಿಮ್ಮ ವೈಯಕ್ತಿಕ ವಿಚಾರದಲ್ಲಿ ಯಾರನ್ನೂ ನಂಬದಂತಹ ಪರಿಸ್ಥಿತಿ ಇರುತ್ತದೆ. ಮಡದಿಯ ಸಹಕಾರದಿಂದ ನೆಮ್ಮದಿ ತೋರಿಬರುವುದು. ನಿರುದ್ಯೋಗಿಗಳಿಗೆ ಅವಕಾಶವಿದೆ.
ಮೀನ: ಆರ್ಥಿಕವಾಗಿ ಋಣಭಾರ ನಿವಾರಣೆಯಾಗಲಿದೆ. ಶುಭಮಂಗಲ ಕಾರ್ಯಗಳಿಗೆ ಇದು ಉತ್ತಮ ಕಾಲ. ಒಮ್ಮೊಮ್ಮೆ ಹಿತಶತ್ರುಗಳಿಂದ ಅಭಿಮಾನಕ್ಕೆ ಭಂಗವಾದಿತ್ತು. ಆದಾಯದ ಮಟ್ಟ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ತರಲಿದೆ.