ಮೇಷ: ಹೊಸ ಸಾಮಗ್ರಿಗಳು ಮನೆಗೆ ಬಂದಾವು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಅನಗತ್ಯವಾದೀತು. ಕೃಷಿಕರಿಗೆ ತಮ್ಮ ಪರಿಶ್ರಮದ ಬೆಲೆ ಸಿಗಲಿದೆ. ದಿನಾಂತ್ಯ ಕೊಂಚ ಪರಿಶ್ರಮವಿದೆ.

ವೃಷಭ: ನಿರುದ್ಯೋಗಿಗಳಿಗೆ ತಾತ್ಕಾಲಿಕ ವೃತ್ತಿ ಸಿಗಲಿದೆ. ಆರೋಗ್ಯ ಭಾಗ್ಯವು ಸುಧಾರಿಸುತ್ತಾ ಹೋಗಲಿದೆ. ಶುಭಮಂಗಲ ಕಾರ್ಯಗಳಿಗೆ ಅಡಚಣೆಗಳು ತೋರಿಬಂದರೂ ಹಿರಿಯರ ಸಹಕಾರದಿಂದ ಕಾರ್ಯಸಾಧನೆಯಾದೀತು.
ಮಿಥುನ: ವೃತ್ತಿರಂಗದಲ್ಲಿ ದುಡುಕಿನ ನಿರ್ಧಾರಗಳು ಸಮಸ್ಯೆಗೆ ಕಾರಣವಾದಾವು. ಉದ್ದಿಮೆಗಳಲ್ಲಿ ಸೋಲನ್ನು ಅರಿಯದ ಛಲವಾದಿಗಳಿಗೆ ಆತಂಕ ತರಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯ. ಸಂಚಾರದ ಬಗ್ಗೆ ಜಾಗೃತೆ.
ಕರ್ಕ: ಹೊಸ ವ್ಯಾಪಾರ ವ್ಯವಹಾರಗಳು ನಿರೀಕ್ಷೆಯ ಮಟ್ಟದಲ್ಲಿ ಆದಾಯವನ್ನು ತರಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ತಲೆ ಬಿಸಿಯಾದೀತು. ಎಲ್ಲ ವಿಚಾರದಲ್ಲಿ ಸಾಧನೆಗಳು ಹಂತ ಹಂತವಾಗಿ ನೆರವೇರಲಿದೆ.
ಸಿಂಹ: ಸಾಂಸಾರಿಕವಾಗಿ ಗೃಹಿಣಿಗೂ ಮಕ್ಕಳಿಗೂ ಇಷ್ಟಾರ್ಥ ಸಿದ್ದಿಯಿಂದ ತೃಪ್ತಿ ತರಲಿದೆ. ಆರ್ಥಿಕ ಸ್ಥಿತಿಯು ಖರ್ಚುವೆಚ್ಚಗಳಿಗೆ ಕಾರಣವಾದರೂ ಧನಾದಾಯವು ಉತ್ತಮವಿರುತ್ತದೆ. ಹೊಸ ಮಿತ್ರರ ಸಹಕಾರ ಸಿಗಲಿದೆ.
ಕನ್ಯಾ: ಕಷ್ಟದ ರೀತಿಯಲ್ಲೇ ಕಾರ್ಯಸಾಧನೆಯಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಗೊಂದಲಗಳು ಕಂಡುಬರಲಿದೆ. ವೃತ್ತಿರಂಗದಲ್ಲಿ ಸಾವಧಾನವಾಗಿ ಮುಂದುವರೆಯಿರಿ. ನ್ಯಾಯಾಲಯದ ಕೆಲಸದಲ್ಲಿ ಸಮಸ್ಯೆಗಳು ಕಂಡುಬಂದಾವು.
ತುಲಾ : ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಪ್ರಗತಿ ತರುತ್ತದೆ. ಹಿರಿಯರಿಗೆ ಪ್ರವಾಸದಲ್ಲಿ ಸಂತಸ ತರಲಿದೆ. ಸಕಾಲಿಕ ಯೋಜನೆಗಳು ಕಾರ್ಯಗತವಾಗಲಿದೆ. ಗೃಹ ಕಲಹಕ್ಕೆ ಕಾರಣರಾಗದಂತೆ ಹೆಚ್ಚಿನ ತಾಳ್ಮೆ ಇರಲಿ.
ವೃಶ್ಚಿಕ: ಶುಭ ಕಾರ್ಯಗಳಿಗೆ ಇದು ಸಕಾಲ. ಅನಾವಶ್ಯಕ ವಾದ ವಿವಾದಗಳಿಗೆ ಕಾರಣರಾಗದಂತೆ ಜಾಗೃತೆ ವಹಿಸಿ. ಆಗಾಗ ಖರ್ಚು ವೆಚ್ಚಗಳು ಅಧಿಕ ರೂಪದಲ್ಲಿ ಕಂಡು ಬರಲಿದೆ. ಗೊಂದಲವಿರುತ್ತದೆ.
ಧನು: ಮಿತ್ರರ ಪ್ರೇರಣೆಯಿಂದ ಹೊಸ ಯೋಜನೆ ಚಾಲನೆಗೆ ಬರಲಿದೆ. ಆಗಾಗ ಕೌಟುಂಬಿಕ ಗೊಂದಲಗಳು ಕಂಡುಬಾರದಂತೆ ಜಾಗೃತೆ ಇರಲಿ. ವಾಹನ ಖರೀದಿಗಾಗಿ ರಿಪೇರಿಗಾಗಿ ಖರ್ಚು ಬಂದೀತು. ಜಾಗೃತೆ.
ಮಕರ:ಅನಿರೀಕ್ಷಿತವಾಗಿ ಕಾರ್ಯಕ್ಷೇತ್ರದಲ್ಲಿ ಪರಿವರ್ತನೆ ಹಂತ ಹಂತವಾಗಿ ಗೋಚರಿಸಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಗಾಗ ಗೊಂದಲಗಳು ತೋರಿಬಂದಾವು. ರಾಜಕೀಯದವರಿಗೆ ತಟಸ್ಥ ಧೋರಣೆ ಉತ್ತಮ.
ಕುಂಭ: ವೃತ್ತಿರಂಗದಲ್ಲಿ ಉದ್ಯೋಗಿಗಳಿಗೆ ಸ್ವಾಭಿಮಾನಕ್ಕೆ ಧಕ್ಕೆ ತಂದೀತು. ಗೃಹದಲ್ಲಿ ಮನಸ್ತಾಪದಿಂದ ಅಸಮಾಧಾನಕರ ವಾತಾವರಣ ಕಂಡು ಬರಲಿದೆ. ಉಷ್ಣಪೀಡೆಯು ಕಂಡುಬಂದು ಕಿರಿಕಿರಿ ಎನ್ನಿಸಲಿದೆ.
ಮೀನ: ಬಹುವಾಗಿ ನೀವು ಸುಖಿಗಳು ಎನ್ನಬಹುದಾಗಿದೆ. ಮಿತ್ರರ ಪ್ರೇರಣೆಯಿಂದ ಹೊಸ ಯೋಜನೆ ಚಾಲನೆಗೆ ಬರಲಿದೆ. ಸರ್ಕಾರಿ ವೃತ್ತಿಯವರಿಗೆ ಗಿಂಬಳದಿಂದ ಧನಾನುಕೂಲ ಹೆಚ್ಚಲಿದೆ. ಶುಭವಿದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.