ಮೇಷ: ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ, ಅವಿವಾಹಿತರಿಗೆ ಶುಭ ಸುದ್ದಿ ಇದೆ. ಆರ್ಥಿಕವಾಗಿ ಆಗಾಗ ಸಮಸ್ಯೆಗಳು ಕಂಡುಬಂದರೂ, ಸುಧಾರಿಸಿಕೊಂಡು ಹೋಗಬಹುದಾಗಿದೆ. ಆರೋಗ್ಯದಲ್ಲಿ ಜಾಗೃತೆ ಇರಲಿ.
ವೃಷಭ : ಕಾರ್ಯರಂಗದಲ್ಲಿ ದುಡಿಮೆ ಹೆಚ್ಚಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿರಿ. ದೈವಾನುಗ್ರಹದಿಂದ ನಿಮ್ಮ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಕೌಟುಂಬಿಕ ಹೊಂದಾಣಿಕೆ ಮುನ್ನಡೆಗೆ ಸಾಧಕವಾದೀತು.

ಮಿಥುನ : ಉದ್ಯೋಗಿಗಳಿಗೆ ವರ್ಗಾವಣೆಯ ಸೂಚನೆ ಗೋಚರಕ್ಕೆ ಬರಲಿದೆ. ಎಲ್ಲಾ ರೀತಿಯ ಕಷ್ಟವನ್ನ ಎದುರಿಸುವ ಎದೆಗಾರಿಕೆ ನಿಮ್ಮಲ್ಲಿರಲಿ. ಹಳೆಯ ಬಂದುಗಳೊಡನೆ ಹೊಸ ಸಂಬಂಧವು ಬೆಳೆಯಲಿದೆ.
ಕರ್ಕ: ಜಲವೃತ್ತಿಯವರಿಗೆ ಉತ್ತಮ ಲಾಭದಾಯಕ ಆದಾಯ ತಂದುಕೊಡಲಿದೆ. ರಾಜಕೀಯ ವರ್ಗದವರಿಗೆ ತಮ್ಮ ಕ್ಷೇತ್ರದಲ್ಲಿ ವಿರೋಧವನ್ನು ಎದುರಿಸುವಂತಾದಿತು. ಪತ್ನಿಯ ಪ್ರಸನ್ನತೆಗಾಗಿ ಆಭರಣ ಖರೀದಿ ಇದೆ.
ಸಿಂಹ: ನಾನಾ ರೀತಿಯಲ್ಲಿ ಧನ ಸಂಗ್ರಹವಾಗಿ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಹೊಸ ದಂಪತಿಗಳಿಗೆ ಸಂತಾನಭಾಗ್ಯದ ಸೂಚನೆ ತಂದೀತು. ಹಿರಿಯರಿಗೆ ಆದ್ಯಾತ್ಮಿಕ ವಿಚಾರದಲ್ಲಿ ಆಸಕ್ತಿಯನ್ನು ಮೂಡಿಸಲಿದೆ.
ಕನ್ಯಾ: ಅನಾವಶ್ಯಕ ಮಾತಿನಿಂದ ಜಾಗೃತೆ ವಹಿಸಬೇಕಾದಿತು. ದಾಂಪತ್ಯ ಜೀವನಕ್ಕೆ ನಾನಾ ರೀತಿಯ ಅಡಚಣೆಗಳು ಕಂಡುಬಂದಾವು. ಕುಟುಂಬ ವರ್ಗದವರಿಂದ ನೆಮ್ಮದಿಯನ್ನು ನಿರೀಕ್ಷಿಸುವಂತಿಲ್ಲ. ದಿನಾಂತ್ಯ ಕಿರು ಸಂಚಾರ.
ತುಲಾ : ಯಾತ್ರೆ ಪ್ರವಾಸಗಳು ತಕ್ಕಮಟ್ಟಿಗೆ ಮುದವನ್ನ ನೀಡಲಿದೆ. ವ್ಯಾಪಾರ ವ್ಯವಹಾರದಲ್ಲಿ ಭಾಗಶಃ ಪಾಲುದಾರರ ವಂಚನೆ ಬಯಲಿಗೆ ಬಂದೀತು. ದೇಹಾರೋಗ್ಯದಲ್ಲಿ ಆಗಾಗ ಸುಸ್ತು ನಿಶ್ಶಕ್ತಿ ಕಾಣಿಸಲಿದೆ.
ವೃಶ್ಚಿಕ: ನೂತನ ಗೃಹ ನಿರ್ಮಾಣ ಕಾರ್ಯಗಳಿಗೆ ಅನುಕೂಲ ಸಮಯವಿದು. ಸರಕಾರಿ ಅಧಿಕಾರಿಗಳಿಗೆ ತೆರಿಗೆ ಅಧಿಕಾರಿಗಳಿಂದ ತೊಂದರೆ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದ ಫಲ ಸಿಗಲಿದೆ.
ಧನು: ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದೀತು. ಕಾರ್ಯಗಳಲ್ಲಿ ಸಮಸ್ಯೆಗಳನ್ನು ಎದುರಿಸುವಂತಹ ಆತ್ಮಸ್ಥೈರ್ಯ ನಿಮ್ಮಲ್ಲಿರುತ್ತದೆ. ಸಾಮಾಜಿಕ ಕ್ಷೇತ್ರಗಳಲ್ಲಿ ಘನತೆ ಗೌರವವನ್ನು ಕಾಪಾಡಿಕೊಳ್ಳಬಹುದು.
ಮಕರ : ಬಂದ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳಿರಿ. ಆರೋಗ್ಯವು ಆಶಾದಾಯಕವಾಗಿದ್ದು ಮುನ್ನಡೆಗೆ ಸಾಧಕವಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಹಿಂದಿನ ಸಮಸ್ಯೆಗಳು ಕಡಿಮೆಯಾಗಲಿದೆ. ಶುಭವಾರ್ತೆ ಇದೆ.
ಕುಂಭ: ಕೆಲವೊಂದು ವಿಚಾರದಲ್ಲಿ ಕೋಪತಾಪಗಳು ಹೆಚ್ಚಿ ದುಡುಕಿನ ನಿರ್ಧಾರದಿಂದ ಸಮಸ್ಯೆಗಳು ಎದುರಿಸುವಂತಾದಿತು. ಅನಾವಶ್ಯಕ ಸಂಚಾರವು ಧನವ್ಯಯಕ್ಕೆ ಕಾರಣವಾದೀತು ಜಾಗೃತೆ ಇರಲಿ.
ಮೀನ: ಕೆಲಸ ಕಾರ್ಯಗಳ ನಿಮಿತ್ತ ಅನಾವಶ್ಯಕ ಸಂಚಾರಗಳು ಒದಗಿ ಬರಲಿದೆ. ಲಾಭದಾಯಕನಾದ ಶನಿ ಉತ್ತಮ ಫಲವನ್ನು ಆರ್ಥಿಕ ರೂಪದಲ್ಲಿ ನೀಡಿಯಾನು. ಕೃಷಿಕ ವರ್ಗದವರಿಗೆ ಉತ್ಸಾಹದಾಯಕ ದಿನವಿದು.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.