ಮೇಷ: ಸಮಸ್ಯೆಗಳು ತೋರಿಬಂದರೂ ತಕ್ಕ ಮಟ್ಟಿಗೆ ನಿವಾರಣೆಯಾಗಲಿದೆ. ಆರ್ಥಿಕವಾಗಿ ಹೆಚ್ಚಿನ ಜಾಗೃತೆ ವಹಿಸಬೇಕಾದಿತು. ಅನಿರೀಕ್ಷಿತ ದೂರ ಸಂಚಾರ ಒದಗಿ ಬಂದೀತು. ವಿದ್ಯಾರ್ಥಿಗಳು ಉತ್ಸಾಹ ಹೀನರಾದಾರು.

ವೃಷಭ: ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟವಿರುತ್ತದೆ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಲಿದೆ. ದಾಯಾದಿಗಳ ಬಗ್ಗೆ ಜಾಗೃತೆ ವಹಿಸಿರಿ. ಆಗಾಗ ಕೆಲಸ ಕಾರ್ಯಗಳಲ್ಲಿ ಅಡಚಣೆಗಳಿದ್ದರೂ ಕಾರ್ಯಸಾಧನೆಯಾಗಲಿದೆ.
ಮಿಥುನ: ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಸಂಚಾರದಲ್ಲಿ ಕಾರ್ಯ ಸಿದ್ಧಿ ಇದೆ. ಹಿರಿಯರ ಸಹಕಾರ ಕಾರ್ಯಸಾಧನೆಗೆ ಸಹಕಾರವಾಗಲಿದೆ. ದಾಯಾದಿಗಳು ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಹೊಂದುವರು.
ಕರ್ಕ: ಜಲ ಸಂಬಂಧಿ ವೃತ್ತಿಯವರಿಗೆ ಲಾಭವಿದೆ. ಉದ್ಯೋಗಿಗಳು ಇದ್ದ ಕೆಲಸದಲ್ಲೇ ತೃಪ್ತಿ ಪಡಬೇಕು. ಮಿತ್ರರ ಸಹಕಾರದಿಂದ ಕಾರ್ಯಸಾಧನೆಯಾಗಲಿದೆ. ಕೋರ್ಟು ಕಚೇರಿಯ ಕಾರ್ಯಭಾಗದಲ್ಲಿ ಮುನ್ನಡೆ ಇದೆ.
ಸಿಂಹ: ಮಿತ್ರರ ಸಹಕಾರದಿಂದ ಕಾರ್ಯಸಾಧನೆಯಾಗಿ ಸಮಾಧಾನ ತರಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ಒದಗಿ ಬರಲಿದೆ. ದಿನಾಂತ್ಯ ಶುಭವಿದೆ.
ಕನ್ಯಾ: ಪಾಲು ಬಂಡವಾಳದಲ್ಲಿ ಅನಾವಶ್ಯಕ ತಪ್ಪು ಅಭಿಪ್ರಾಯದಿಂದ ಬಿಕ್ಕಟ್ಟು ತರಲಿದೆ. ನಿರುದ್ಯೋಗಿಗಳಿಗೆ ನಿರಾಸೆ ತಂದೀತು. ಸಾಂಸಾರಿಕವಾಗಿ ಹೊಂದಾಣಿಕೆ ಪರಿಸ್ಥಿತಿ ಅಗತ್ಯ. ವಿದ್ಯಾಭ್ಯಾಸದಲ್ಲಿ ಹಿನ್ನಡೆ ತಂದೀತು.
ತುಲಾ: ಎಲ್ಲವನ್ನೂ ಸಮತೋಲನ ರೀತಿಯಲ್ಲಿ ಮಾಡಿಕೊಂಡು ಹೋದಲ್ಲಿ ಯಶಸ್ಸು ದೊರಕಿತು. ವ್ಯಾಪಾರ ವ್ಯವಹಾರಗಳು ಯಥಾ ರೀತಿಯಲ್ಲಿ ನಡೆಯಲಿದೆ ನಿರುದ್ಯೋಗಿಗಳಿಗೆ ಬೇಸರವಾದೀತು.
ವೃಶ್ಚಿಕ: ಕಾಂಟ್ರಾಕ್ಟ್ ವೃತ್ತಿಯವರಿಗೆ ಉತ್ತಮ ಆದಾಯ ಕಾರ್ಯಸಾಧನೆಗೆ ಸಾಧಕವಾಗಲಿದೆ. ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತಾ ಹೋಗಲಿದೆ. ಶುಭಮಂಗಲ ಕಾರ್ಯದ ತಯಾರಿ ನಡೆಯಲಿದೆ. ವಿದ್ಯಾರ್ಥಿಗಳು ಉತ್ತಮ ಅವಕಾಶ ಹೊಂದಲಿದ್ದಾರೆ.
ಧನು: ಸಾಂಸಾರಿಕವಾಗಿ ಮುನ್ನಡೆ ತೋರಿಬಂದರೂ ಕಿರಿ ಕಿರಿ ತಪ್ಪಲಾರದು. ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನ ಬಲದ ಪ್ರತಿಫಲ ಸಿಗಲಿದೆ. ಸಣ್ಣಪುಟ್ಟ ವಿಚಾರದಲ್ಲಿ ಅಭಿಪ್ರಾಯ ಬೇಧದಿಂದ ಕಲಹ ತೋರಿಬಂದೀತು.
ಮಕರ: ಅನಿರೀಕ್ಷಿತ ರೂಪದಲ್ಲಿ ನಿಮ್ಮ ನಿರೀಕ್ಷಿತ ಕಾರ್ಯಗಳು ನೆರವೇರಲಿದೆ. ಕೋರ್ಟು ಕಚೇರಿ ಕೆಲಸಗಳು ನಿಮ್ಮ ಪರವಾಗಿ ವಾಲಲಿದೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನ ಬಲದಿಂದ ಫಲ ಪಡೆಯಲಿದ್ದಾರೆ.
ಕುಂಭ: ಹಲವಾರು ಸಮಸ್ಯೆಗಳು ನಿಮ್ಮನ್ನು ಸುತ್ತಿಕೊಳ್ಳಲಿದೆ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ. ಕೆಲಸ ಕಾರ್ಯಗಳು ಅಡೆತಡೆಯಿಂದಲೇ ಮುನ್ನಡೆಯಲಿದೆ. ಕೋರ್ಟು ಕಚೇರಿಯ ಕಾರ್ಯದಲ್ಲಿ ಹಿನ್ನೆಡೆ ಇದೆ.
ಮೀನ: ಋಣಾತ್ಮಕ ಚಿಂತನೆಗಳು ನಿಮ್ಮನ್ನು ಕಂಗೆಡಿಸಲಿದೆ. ದಾಯಾದಿಗಳಿಂದ ಕೆಟ್ಟ ಮಾತುಗಳನ್ನು ಕೇಳಲಿದ್ದೀರಿ. ಶುಭ ಮಂಗಳ ಕಾರ್ಯಗಳಿಗೆ ಅಢ್ಡಿ ತರಲಿದೆ. ನಿಮ್ಮ ವೃತ್ತಿಯಲ್ಲಿ ನೀವು ಯಶಸ್ಸು ಸಂಪಾದಿಸುವಿರಿ ಶುಭವಿದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.