ಮೇಷ: ಕಾರ್ಯ ರಂಗದಲ್ಲಿ ಸಮಾಧಾನವಿಲ್ಲದಿದ್ದರೂ ನಿಮ್ಮ ಕಾರ್ಯಕ್ಕೆ ನೀವೇ ಸಮಾಧಾನ ಪಡಬೇಕಾದೀತು. ಆರ್ಥಿಕವಾಗಿ ನಾನಾ ರೀತಿಯಿಂದ ಕಷ್ಟ ನಷ್ಟಗಳು ಅಧಿಕವಾದೀತು. ಯೋಗ್ಯ ವಯಸ್ಕರ ವೈವಾಹಿಕ ಸಂಬಂಧ ತಂದೀತು.

ವೃಷಭ: ಕೌಟುಂಬಿಕ ವ್ಯವಹಾರಗಳು ಸಮಾಧಾನವಾಗಿ ತೋರಿಬರಲಿದೆ. ಸಾಂಸಾರಿಕವಾಗಿ ಮಹಿಳೆಯರು ತಮ್ಮ ಭಾವನೆಗಳ ಮೇಲೆ ಪೂರ್ತಿ ನಿಯಂತ್ರಣ ಸಾಧಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಶುಭ ಫಲವಿದೆ.
ಮಿಥುನ: ವೈಯಕ್ತಿಕವಾಗಿ ಕೆಲಸದ ವಿಚಾರದಲ್ಲಿ ಬದುಕನ್ನು ನಿರ್ಲಕ್ಷಿಸದಿರಿ. ಸಾಂಸಾರಿಕವಾಗಿ ಹಿರಿಯರ ಸಹಕಾರ ನಿಮಗೆ ಆಸರೆಯಾದೀತು. ವ್ಯಾಪಾರ ವ್ಯವಹಾರಗಳು ನಿರೀಕ್ಷಿತ ಮಟ್ಟವನ್ನು ಕಾಯ್ದುಕೊಳ್ಳಲಿದೆ ಜಾಗೃತೆ.
ಕರ್ಕಾಟಕ: ಆರ್ಥಿಕವಾಗಿ ಸಂಪತ್ತಿನ ಗಳಿಕೆ ಉತ್ತಮವಿದ್ದರೂ ಖರ್ಚು ವೆಚ್ಚಗಳು ಅದೇ ರೀತಿಯಲ್ಲಿ ಅಧಿಕವಾದಾವು. ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸವನ್ನು ಪರಿವರ್ತಿಸಿಕೊಳ್ಳಲು ಸಕಾಲವಿದು. ವಾಹನ ಸಂಚಾರ, ಚಾಲನೆಯಲ್ಲಿ ಗಮನವಿರಲಿ.
ಸಿಂಹ: ಕಾರ್ಯರಂಗದಲ್ಲಿ ಛಲ ಬಿಡದೇ ಪಟ್ಟುಹಿಡಿದು ದುಡಿಯಿರಿ. ನಿಶ್ಚಿತವಾಗಿ ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. ಕುಜಬಲದಿಂದ ವೈವಾಹಿಕ ಸಂಬಂಧಗಳು ತಪ್ಪಿಹೋದಾವು. ನೀವು ಗಳಿಸಿದ ಆರ್ಥಿಕತೆ ಜಾಗೃತೆ ಮಾಡಿಕೊಂಡಿರಿ.
ಕನ್ಯಾ : ಅವಿವಾಹಿತರಿಗೆ ನಿಂತು ಹೋದ ಅವಕಾಶವು ಪುನಃ ದೊರಕಲಿದೆ. ನಿರುದ್ಯೋಗಿಗಳು ಬಂದ ಅವಕಾಶವನ್ನು ಸರಿಯಾಗಿ ವಿಮರ್ಷಿಸಿ ನಡೆಯಿರಿ. ಕಾರ್ಯಕ್ಷೇತ್ರದಲ್ಲಿ ಹೊಸ ಚಿಂತನೆಗಳು ಮೂಡಿ ಬರಲಿದೆ.
ತುಲಾ: ಹಣಕಾಸಿನ ವಿಚಾರದಲ್ಲಿ ವಿವಾದಗಳು ಸಮಸ್ಯೆಯನ್ನು ಹುಟ್ಟು ಹಾಕಲಿದೆ. ಕಾರ್ಯಕ್ಷೇತ್ರದಲ್ಲಿ ಮುನ್ನಡೆ ನಿಮ್ಮ ಬುದ್ಧಿವಂತಿಕೆಯಲ್ಲಿ ಅಡಗಿದೆ ಎಂಬುದು ಮರೆಯದಿರಿ. ಖರ್ಚು ವೆಚ್ಚದ ಲೆಕ್ಕಾಚಾರವು ಸರಿಯಾಗಿ ಇಟ್ಟುಕೊಳ್ಳಿ.
ವೃಶ್ಚಿಕ: ನಿರುದ್ಯೋಗಿಗಳಿಗೆ ಅನಿರೀಕ್ಷಿತ ರೂಪದಲ್ಲಿ ಅನೇಕ ಅವಕಾಶಗಳು ದೊರಕಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಪ್ರಯತ್ನ ಬಲಕ್ಕೆ ನಿಶ್ಚಿತ ರೂಪದಲ್ಲಿ ಫಲ ಸಿಗಲಿದೆ. ವ್ಯಾಪಾರ ವ್ಯವಹಾರಗಳು ಆದಾಯ ವೃದ್ಧಿಗೆ ಸಹಕಾರವಾಗಲಿದೆ.
ಧನು : ಸಂಸಾರಿಕವಾಗಿ ತಾಯಿ ತಂದೆ ಸಹಕಾರ, ಪ್ರೀತಿ ವಿಶ್ವಾಸಗಳು ಮುನ್ನಡೆಗೆ ಪೂರಕವಾಗಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನ ಬಲದಲ್ಲಿ ವಿಶ್ವಾಸವಿರಲಿ. ನಿರುದ್ಯೋಗಿಗಳಿಗೆ ತಾತ್ಕಾಲಿಕವಾಗಿ ಅವಕಾಶಗಳು ದೊರಕಲಿದೆ.
ಮಕರ: ಸರ್ಕಾರಿ ಅಧಿಕಾರಿಗಳಿಗೆ ತಮ್ಮ ಕೆಲಸಗಳಿಗಾಗಿ ಓಡಾಟವಿರುತ್ತದೆ. ಆರ್ಥಿಕವಾಗಿ ತುಸು ಸಮಾಧಾನ ಸಿಗಲಿದೆ. ಯೋಗ್ಯ ವಯಸ್ಕರು ವೈವಾಹಿಕ ಭಾಗ್ಯಕ್ಕಾಗಿ ಹೆಚ್ಚಿನ ಪ್ರಯತ್ನ ಪಡಬೇಕಾಗಬಹುದು. ಮುಂದಡಿ ಇಡಿರಿ.
ಕುಂಭ : ನ್ಯಾಯಾಲಯದ ಕೆಲಸ ಕಾರ್ಯಗಳು ವಿಳಂಬವಾದಾವು. ಮಾನಸಿಕ ಸಮಾಧಾನವನ್ನ ಸರಿಯಾಗಿ ಇಟ್ಟುಕೊಳ್ಳಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಿದೆ. ಸರಕಾರಿ ಅಧಿಕಾರಗಳಿಗೆ ಬದಲಾವಣೆ ತಂದೀತು.
ಮೀನ: ನಿಶ್ಚಿತ ರೂಪದಲ್ಲಿ ನಿಮ್ಮ ಮನೋಕಾಮನೆಗಳು ಹಂತ ಹಂತವಾಗಿ ಚೇತರಿಕೆ ಪಡೆಯಲಿದೆ. ಸಾಂಸಾರಿಕವಾಗಿ ಬಂಧುಬಗಳದವರ ಸಹಾಯದಿಂದ ಕಾರ್ಯಸಿದ್ಧಿಯಾಗಲಿದೆ. ಪ್ರತಿಷ್ಠಿತರ ಸಂಪರ್ಕ ಮುನ್ನಡೆ ತಂದೀತು.
