Gadag News: ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಿಂದ ಸಂಕ್ಲಿಪೂರಗೆ ಹೋಗುತ್ತಿದ್ದ ಬಸ್ಸ್ ಫುಲ್ ರಶ್ ಆಗಿ ಶಿಗ್ಲಿ ನಾಕಾದ ಬೃಹತ್ ಗುಂಡಿ ವೊಂದರಲ್ಲಿ ಸಿಲುಕಿ ಬಸ್ಸಿನ ಬಾಗಿಲಿಗೆ ನೇತಾಡಿದ ವಿದ್ಯಾರ್ಥಿಗಳು ಭಯದಿಂದಲ್ಲೇ ಕೆಳಗಡೆ ಜಿಗಿದು ನಿಟ್ಟುಸಿರು ಬಿಟ್ಟ ಘಟನೆ ಜರುಗಿದೆ.
ಹೌದು , ಲಕ್ಷ್ಮೇಶ್ವರ ಪಟ್ಟಣದಿಂದ ಸಂಕ್ಲಿಪೂರಗೆ ಹೋಗುವ ಬಸ್ಸಗಳು ದಿನನಿತ್ಯವೂ ಫುಲ್ ರಶ್ ಆಗಿ ಹೋಗುವುದರಿಂದ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದೆ. ಇನ್ನೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಬಸ್ಸಿನ ಬಾಗಿಲಿಗೆ ನೆತಾಡುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ಸಿನ ಬಾಗಿಲಿನಲ್ಲಿ ನೆತಾಡುಕೊಂಡು ಹೋಗುತ್ತಿರುವಾಗ ಸ್ವಲ್ಪ ಹೆಚ್ಚುಕಡಿಮೆ ಬಸ್ಸಿನ ಗಾಲಿ ಗುಂಡಿಗೆ ಜಾರಿದರೆ ವಿದ್ಯಾರ್ಥಿಗಳ ಪ್ರಾಣಕ್ಕೆ ಅಪಾಯವಿದೆ ಪ್ರಾಣಹಾನಿ ಆಗುವುದರ ಒಳಗೆ ಸಂಬಂಧಿಸಿದ ಅಧಿಕಾರಿಗಳು ಇಥ ಕಡೆ ಸ್ವಲ್ಪ ಗಮನ ಹರಿಸಿ ಎಚ್ಚೆತ್ತುಕೊಳ್ಳಬೇಕಿದೆ.
ಲಕ್ಷ್ಮೇಶ್ವರ ಪಟ್ಟಣಕ್ಕೆ ಸುತ್ತಮುತ್ತಲಿನ ಗ್ರಾಮದ ಜನರು ವಿದ್ಯಾರ್ಥಿಗಳು ಬರುತ್ತಾರೆ ಆದರೆ ಲಕ್ಷ್ಮೇಶ್ವರ ಪಟ್ಟಣದಿಂದ ತಮ್ಮ ಗ್ರಾಮಕ್ಕೆ ತೆರಳಲು ಸಮಯಕ್ಕೆ ಸರಿಯಾಗಿ ಬಸ್ಸಿ ವ್ಯವಸ್ಥೆ ಇಲ್ಲದಿದ್ದರಿಂದ ಇರುವ ಬಸ್ಸಿನಲ್ಲಿಯೇ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾ ಇದ್ದರೂ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ತೋರುತ್ತಿದ್ದಾರೆ.