Wednesday, April 23, 2025

Latest Posts

“K.G.F” ತಾತ ಈಗ ಹೀರೋ..!

- Advertisement -

ಕೆಜಿಎಫ್ ಚಾಫ್ಟರ್ 2′ ಸಿನಿಮಾದಲ್ಲಿ ವಯೋವೃದ್ಧ ಅಂದನ ಪಾತ್ರ ಮಾಡಿ ಗಮನಸೆಳೆದಿದ್ದ ಕೃಷ್ಣ ರಾವ್ ಅವರು ಈಗ ಹೊಸ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅವರು ನಟಿಸುತ್ತಿರುವ ಈ ಸಿನಿಮಾಕ್ಕೆ ‘ನ್ಯಾನೋ ನಾರಾಯಣಪ್ಪ’ ಎಂದು ಹೆಸರು ಇಡಲಾಗಿದೆ. ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಶೀಘ್ರದಲ್ಲೇ ಸಿನಿಮಾ ತೆರೆಕಾಣಲಿದೆ.

ನಿಮಗೊಂದು ಸಲಹೆ ಕೊಡ್ತೀನಿ, ನೀವು ಮಾತ್ರ ಅವನಿಗೆ ಅಡ್ಡ ನಿಲ್ಲೋದಕ್ಕೆ ಹೋಗ್ಬೇಡಿ ಸಾರ್‌.. ‘- ಇದು ‘ಕೆಜಿಎಫ್ – 2’ ಸಿನಿಮಾದಲ್ಲಿ ತಾತ ಹೇಳುವ ಡೈಲಾಗ್. ಪಾರ್ಟ್ 1 ಮತ್ತು ಪಾರ್ಟ್ 2ರಲ್ಲಿಯೂ ಕಾಣಿಸಿಕೊಂಡಿರುವ ತಾತಾನ ಹೆಸರು ಕೃಷ್ಣ ರಾವ್ . ‘ಕೆಜಿಎಫ್’ ಸಿನಿಮಾ ಬಂದಮೇಲೆ ಇವರು ‘ಕೆಜಿಎಫ್’ ತಾತ ಅಂತಲೇ ಫೇಮಸ್. ಸದ್ಯದ ಬ್ರೇಕಿಂಗ್ ನ್ಯೂಸ್ ಏನಪ್ಪ ಅಂದ್ರೆ, ಕೃಷ್ಣ ಜಿ. ರಾವ್ ಈಗ ಹೀರೋ ಆಗಿದ್ದಾರೆ. ಅವರು ಹೀರೋ ಆಗಿರುವ ಸಿನಿಮಾಕ್ಕೆ ‘ನ್ಯಾನೋ ನಾರಾಯಣಪ್ಪ’ ಎಂದು ಟೈಟಲ್ ಇಡಲಾಗಿದೆ

ಕೆಮಿಸ್ಟ್ರೀ ಆಫ್ ಕರಿಯಪ್ಪ’ , ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾಗಳಿಂದ ಖ್ಯಾತಿ ಪಡೆದಿರುವ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಆಗಲೇ ಶೂಟಿಂಗ್ ಕೂಡ ಮುಕ್ತಾಯಗೊಂಡಿದೆ. ಸದ್ಯ ಫಸ್ಟ್ ಲುಕ್ ರಿಲೀಸ್ ಆಗಿದೆ. ಹತ್ತು ತಲೆಯುಳ್ಳ ರಾವಣನ ಅವತಾರದಲ್ಲಿ ರಿಲೀಸ್ ಆಗಿರುವ ಫಸ್ಟ್ ಲುಕ್‌ನಲ್ಲಿ ಕೃಷ್ಣ ಜಿ. ರಾವ್ ಕಿರೀಟ, ಗ್ಲಾಸ್ ಹಾಕಿ ಫೋಸ್ ಕೊಟ್ಟಿದ್ದಾರೆ. ಜೊತೆಗೆ ನ್ಯಾನೋ ಕಾರು ಕೂಡ ಹೈಲೈಟ್ ಆಗಿದೆ. ಕಾಕ್ರೋಚ್ ಸುಧಿ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ದಿ, ಆನಂತು, ಅಪೂರ್ವಾ ಸೇರಿದಂತೆ ಒಂದಷ್ಟು ಪ್ರತಿಭಾನ್ವಿತ ಕಲಾವಿದರು ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

- Advertisement -

Latest Posts

Don't Miss