Wednesday, October 22, 2025

Latest Posts

ಕೆ.ಎನ್. ರಾಜಣ್ಣ ಪರ ಬೃಹತ್ ಜನಸಾಗರ, ಸಚಿವ ಸ್ಥಾನಕ್ಕೆ ಮರುಸೇರ್ಪಡೆಗೆ ಒತ್ತಾಯ!

- Advertisement -

ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಸಚಿವರನ್ನಾಗಿ ಮುಂದುವರೆಸುವಂತೆ ಸರ್ಕಾರವನ್ನು ಮತ್ತು ಕಾಂಗ್ರೆಸ್ ಹೈಕಮಾಂಡನ್ನು ಒತ್ತಾಯಿಸಿ ಶಿರಾ ನಗರದಲ್ಲಿ ಸಾಹಸ್ರಾರು K.N.R. ಅಭಿಮಾನಿ ಬಳಗ ಹಾಗೂ ಅನುಯಾಯಿಗಳು ಸಮುದಾಯದ ಮುಖಂಡರು ಸೇರಿ ಬೃಹತ್ ಪ್ರತಿಭಟನೆ ನಡೆಸಿದರು.

ಕೆ. ಎನ್. ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದನ್ನು ಖಂಡಿಸಿ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ಪ್ರತಿಭಟನೆ ಮಾಡಿದ್ದಾರೆ. ದಲಿತ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕ್ರಿಯಾ ಸಮಿತಿ ಹಾಗು K.N.R. ಮತ್ತು R.R. ಅಭಿಮಾನಿ ಬಳಗ ವತಿಯಿಂದ ಮಂಗಳವಾರ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು. ಬೆಳಿಗ್ಗೆ 10-30 ಘಂಟೆಗೆ ನಗರದ ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರಾರಂಭಗೊಂಡು ನಗರದ ಮುಖ್ಯ ರಸ್ತೆ ಮೂಲಕ ಸಾಗಿ KSRTC ಬಸ್ ನಿಲ್ದಾಣ ತಲುಪಿ ಪುನಃ IB ವೃತ್ತದಲ್ಲಿ ಕೊನೆಗೊಂಡಿದೆ.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಜನ ಕೆ.ಎನ್.ರಾಜಣ್ಣ ಪರ ಜೈಘೋಷಗಳನ್ನು ಕೂಗುತ್ತಾ ಪುನಃ ರಾಜಣ್ಣನವರಿಗೆ ಸರ್ಕಾರ ಸಚಿವ ಸಂಪುಟದಲ್ಲಿ ಸ್ಥಾನ ನೀಡುಬೇಕು ಎಂದು ಆಗ್ರಹಿಸುತ್ತ ಸಾಗಿದರು. ನಗರದ ಅಂಬೇಡ್ಕರ್ ವೃತ್ತದಲ್ಲಿ ಸರ್ಕಾರದ ಪರವಾಗಿ ಗ್ರೇಡ್ 2 ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.

ಕೆ. ಎನ್. ರಾಜಣ್ಣ ಅಭಿಮಾನಿ ಬಳಗ ಪ್ರಮುಖರೊಬ್ಬರು ಮಾತನಾಡಿದ್ದಾರೆ.
ಅವಕಾಶ ವಂಚಿತ ಜನಸಮುದಾಯದ ನಾಯಕರಾಗಿದ್ದ ಕೆ. ಎನ್. ರಾಜಣ್ಣ ಅವರನ್ನ ಸಚಿವ ಸ್ಥಾನದಿಂದ ತೆರೆವುಗೊಳಿಸಿದ್ದಾರೆ. ಆ ಮೂಲಕ ಇಡೀ ಅಹಿಂದ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಅವರಿಗೆ ನೋಟಿಸ್ ಕೊಟ್ಟು, ವಿವರಣೆ ಕೊಡೋದಕ್ಕೆ ಕಾಲಾವಕಾಶವನ್ನ ಕೊಟ್ಟಿಲ್ಲ ಎಂದಿದ್ದಾರೆ.

ಅಹಿಂದ ಸಮುದಾಯಕ್ಕೆ ಅಧಿಕಾರ ನೀಡಲು ಯಾವ ಬಲಡ್ಯಾ ಸಮುದಾಯದವರು ಒಪ್ಪೋದಿಲ್ಲ. ಇಡೀ ಜಿಲ್ಲೆಯಲ್ಲಿ ರಾಜಣ್ಣನವರ ಶಕ್ತಿ ಏನೆಂಬುವುದು ಜನರಿಗೆ ಗೊತ್ತಿದೆ. ಅವರಿಗೆ ಅಪಾರ ಅಭಿಮಾನಿಗಳು, ಸಂಘಟನೆಗಳು, ಅನುಯಾಯಿಗಳು ಬಹಳಷ್ಟು ಜನರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕೂಡಲೇ ಪಕ್ಷದ ಹೈಕಮಾಂಡ್ ಗಮನಕ್ಕೆ ತಂದು ಮನವರಿಗೆ ಮಾಡಿಕೊಟ್ಟು ಪುನಃ ಸಚಿವ ಸಂಪುಟಕ್ಕೆ ಪುನಃ ಸೇರ್ಪಡೆ ಮಾಡಿಕೊಳ್ಳುವಂತೆ ಒತ್ತಾಯಿಸಬೇಕು ಎಂದಿದ್ದಾರೆ.

ಪ್ರತಿಯೊಬ್ಬ ಜನಸಾಮಾನ್ಯರ ಪ್ರಶ್ನೆ ಒಂದೇ ಏಕಾಏಕಿ ರಾಜಣ್ಣ ನವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿದ್ದು ಯಾಕೆ ಅನ್ನೋದು. ರಾಜ್ಯದಲ್ಲಿ ಶೋಷಿತರ, ದೀನದಲಿತರ, ಎಲ್ಲಾ ಹಿಂದುಳಿದ ವರ್ಗಗಳ ಜನಾಂಗಗಳ, ಬಡವರ, ರೈತರ ಪರವಾಗಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕೆ.ಎನ್. ರಾಜಣ್ಣ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ 10 ತಾಲ್ಲೂಕಿನಲ್ಲಿ ಚುನಾವಣಾ ಫಲಿತಾಂಶ ಏರು ಪೆರು ಮಾಡುವ ಶಕ್ತಿಯಿದೆ ಎಂದಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss