Saturday, November 8, 2025

Latest Posts

ಮೋದಿಗೆ ಕರೆ ಮಾಡಿದ ಟ್ರಂಪ್‌ ದೀಪಾವಳಿ ಜೊತೆ ಸಿಹಿ ಸಂದೇಶ

- Advertisement -

ಅಮೆರಿಕಾದ ಶ್ವೇತಭವನದಲ್ಲಿ ದೀಪ ಬೆಳಗುವ ಮೂಲಕ, ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ದೀಪಾವಳಿ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯನ್ನು ಹೊಗಳಿರುವ ಟ್ರಂಪ್, ಮಹಾನ್ ವ್ಯಕ್ತಿ ಎಂದು ಕರೆದಿದ್ದಾರೆ.

ಈ ಕಾರ್ಯಕ್ರಮದಲ್ಲಿ ಅಮೆರಿಕಕ್ಕೆ ಭಾರತೀಯ ರಾಯಭಾರಿ ವಿನಯ್ ಕ್ವಾತ್ರಾ, ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್, ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಮತ್ತು ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಭಾಗವಹಿಸಿದ್ದರು.

ನಾನು ಇಂದು ನಿಮ್ಮ ಪ್ರಧಾನಿಯೊಂದಿಗೆ ಮಾತನಾಡಿದೆ. ನಾವು ಉತ್ತಮ ಸಂಭಾಷಣೆ ನಡೆಸಿದ್ದೇವೆ. ವ್ಯಾಪಾರ ಸೇರಿದಂತೆ ನಾವು ಬಹಳಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದೇವೆ. ಭಾರತವು ರಷ್ಯಾದಿಂದ ಹೆಚ್ಚಿನ ತೈಲವನ್ನು ಖರೀದಿಸುವುದಿಲ್ಲ ಎಂದು ತಮಗೆ ಭರವಸೆ ನೀಡಿದ್ದಾರೆಂದು, ಟ್ರಂಪ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕರೆ ಮಾಡಿ ಶುಭಾಶಯ ತಿಳಿಸಿದ್ದನ್ನು, ಪ್ರಧಾನಿ ಮೋದಿ ಟ್ವಿಟ್ಟರ್‌ನಲ್ಲಿ ಪೋಸ್ಟ್​ ಮಾಡಿದ್ದು, ಟ್ರಂಪ್‌ಗೆ ಧನ್ಯವಾದ ತಿಳಿಸಿದ್ದಾರೆ. ಮತ್ತು ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನಿಂದ ನಿಲ್ಲಲಿ ಎಂದು ಸಂದೇಶ ರವಾನಿಸಿದರು.

 

ಜೊತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟ್ಯಾಗ್ ಮಾಡಿ, ನಿಮ್ಮ ಫೋನ್ ಕರೆ ಮತ್ತು ದೀಪಾವಳಿ ಹಬ್ಬದ ಶುಭಾಶಯಕ್ಕೆ ಧನ್ಯವಾದಗಳೆಂದು ಪೋಸ್ಟ್‌ ಮಾಡಿದ್ದಾರೆ.

- Advertisement -

Latest Posts

Don't Miss