Sunday, July 6, 2025

Latest Posts

ಕೆ.ಎಸ್. ಈಶ್ವರಪ್ಪ ಘರ್ ವಾಪ್ಸಿ!? – ಷರತ್ತುಗಳಿಗೆ ಒಪ್ಪುತ್ತಾ ಹೈಕಮಾಂಡ್?

- Advertisement -

2024ರ ಲೋಕಸಭೆ ಚುನಾವಣೆಯಲ್ಲಿ, ಪುತ್ರ ಕಾಂತೇಶ್​​ ಗೆ ಹಾವೇರಿ ಸೀಟ್ ಸಿಗುತ್ತದೆ ಅನ್ನೋ ವಿಶ್ವಾಸದಲ್ಲಿ ಈಶ್ವರಪ್ಪ ಇದ್ರು. ಎಲ್ಲೇ ಹೋದ್ರೂ ಈ ಬಗ್ಗೆ ಹೇಳಿಕೊಳ್ತಿದ್ರು. ಆದರೆ ಕೊನೆ ಗಳಿಗೆಯಲ್ಲಿ ಬಸವರಾಜ ಬೊಮ್ಮಾಯಿಗೆ ಟಿಕೆಟ್ ಕೊಡಲಾಯ್ತು. ಇದರಿಂದ ಸಿಡಿದೆದ್ದಿದ್ದ ಈಶ್ವರಪ್ಪ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕುಟುಂಬದ ವಿರುದ್ಧ ಬಹಿರಂಗ ಹೇಳಿಕೆ ಕೊಡುತ್ತಲೇ ಇದ್ರು. ಸ್ವತಂ ಶಿವಮೊಗ್ಗದಿಂದ ಸ್ವತಂತ್ರವಾಗಿ ಸ್ಪರ್ಧಿಸಿ, ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ರು.

ಈಶ್ವರಪ್ಪ ಸಿಟ್ಟು ಶಮನಕ್ಕೆ ಹಲವು ಬಾರಿ ಯತ್ನಿಸಿದ್ರೂ ಸಾಧ್ಯವಾಗಿರಲಿಲ್ಲ. ಈಗ ಈಶ್ವರಪ್ಪರನ್ನು ಮತ್ತೆ ಬಿಜೆಪಿಗೆ ಕರೆತರುವ ಪ್ರಯತ್ನ ವೇಗ ಪಡೆದುಕೊಂಡಿದೆ. ಈ ಅವಕಾಶವನ್ನೇ ಬಳಸಿಕೊಂಡಿರುವ ಈಶ್ವರಪ್ಪ, ಹೈಕಮಾಂಡಿಗೇ 3 ಕಂಡಿಷನ್ ಹಾಕಿದ್ದಾರೆ. ಇದಕ್ಕೆ ಒಪ್ಪಿದರಷ್ಟೇ ಮತ್ತೆ ಕಮಲ ಹಿಡಿಯುತ್ತೇನೆ ಅಂತಾ ಕಡ್ಡಿ ಮುರಿದಂತೆ ಹೇಳಿದ್ದಾರೆ.

ನನ್ನ ಹಿಡಿತಕ್ಕೆ ಶಿವಮೊಗ್ಗ ಜಿಲ್ಲೆಯನ್ನು ನೀಡಲೇಬೇಕು.  ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಮಕ್ಕಳ ಮಾತೇ ಅಂತಿಮ ಆಗಬಾರದು.  ಮುಂದಿನ ಚುನಾವಣೆಯಲ್ಲಿ ನನ್ನ ಕುಟುಂಬಕ್ಕೂ ಪ್ರಾಮುಖ್ಯತೆ ಕೊಡಲೇಬೇಕು ಅಂತಾ, ವರಿಷ್ಠರಿಗೇ ಷರತ್ತು ಹಾಕಿದ್ದಾರಂತೆ.

ಈಶ್ವರಪ್ಪ ಅವರ ಈ ಮೂರು ಷರತ್ತುಗಳಿಗೆ ಹೈಕಮಾಂಡ್ ಒಪ್ಪುತ್ತಾ ಅನ್ನೋದೆ ಕುತೂಹಲ. ಯಾಕಂದ್ರೆ, ಬಿಎಸ್.ವೈ. ಶಿವಮೊಗ್ಗ ಬಿಟ್ಟು ಕೊಡುವ ಮಾತೇ ಇಲ್ಲ. ಇನ್ನು, ಬಿಎಸ್​​ವೈ ಕಡೆಗಣಿಸಿದ್ರೆ ಮತ್ತು ಈಶ್ವರಪ್ಪ ಕುಟುಂಬಕ್ಕೇ ಪ್ರಾಮುಖ್ಯತೆ ಕೊಟ್ಟರೆ, ಬೇರೆ ನಾಯಕರ ಅಸಮಾಧಾನಕ್ಕೆ ಕಾರಣವಾಗಬಹುದು.

- Advertisement -

Latest Posts

Don't Miss