Political news:
Feb:26: ಮೊಣಕಾಲ್ಮೂರು ಮಾಜಿ ಶಾಸಕ ಕ ಎಸ್.ತಿಪ್ಪೇಸ್ವಾಮಿಕಾಂಗ್ರೆಸ್ ತೊರೆದು ವಾಪಸ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಫೆಬ್ರುವರಿ 26 ರಂದು ಚಿತ್ರದುರ್ಗ ಶಾಸಕ ಜಿಹೆಚ್ ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಕೆಎಸ್ ನವೀನ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಳಿಕ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ತಿಪ್ಪೇರುದ್ರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಮೂಲಕ ದ್ವೇಷ ಮರೆತು ಶ್ರೀರಾಮುಲು ಜೊತೆ ಕೈಜೋಡಿಸಿದರು ತಿಪ್ಪೆಸ್ವಾಮಿ ಅನ್ನೋ ಮಾತುಗಳು ಕೇಳಿ ಬರುತ್ತಿದೆ. 2018ರ ವಿಧಾಸಭೆ ಚುನಾವಣೆಯಲ್ಲಿ ಮೊಣಕಾಲ್ಮೂರಿಗೆ ವಲಸೆ ಬಂದು ತಮ್ಮ ಟಿಕೆಟ್ ಕೈತಪ್ಪಿಸಿದ್ದ ಶ್ರೀರಾಮುಲು ವಿರುದ್ಧ ತಿಪ್ಪೇಸ್ವಾಮಿ ಸಮರ ಸಾರಿದ್ದರು ಆ ಸಂದರ್ಭದಲ್ಲಿ ಕಲ್ಲು ತೂರಾಟದ ಗಲಾಟೆ ಕೂಡಾ ನಡೆದಿತ್ತು. ಅಲ್ಲದೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಆದ್ರೆ, ಇದೀಗ ತಿಪ್ಪೇಸ್ವಾಮಿ ಮರಳಿ ಗೂಡಿಗೆ ಸೇರಿಕೊಂಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ಶ್ರೀರಾಮುಲು ಮುಂದಿನ ರಾಜಕೀಯ ನಡೆ ಸಂಚಲನ ಮೂಡಿಸಿರುವುದಂತೂ ಸುಳ್ಳಲ್ಲ.
ಜೊತೆಗೆ ಈ ವೇಳೆ ಮಾತನಾಡಿದ ಸಚಿವ ಶ್ರೀರಾಮುಲು ನನ್ನ ಸಹೋದರ ಆದ ತಿಪ್ಪೇಸ್ವಾಮಿ ನನ್ನ ಮೇಲಿನ ಅಭಿಮಾನದಿಂದ ಬಂದಿದ್ದಾರೆ, ಕಾಂಗ್ರೆಸ್ ಪಕ್ಷದ ವಿರೋಧ ನೀತಿ ನೋಡಿ ಮರಳಿ ಬಿಜೆಪಿಗೆ ಬಂದಿದ್ದಾರೆ, ಸಿಎಂ ಮತ್ತು ರಾಜ್ಯ ಅಧ್ಯಕ್ಷ ಗಮನ ಸೆಳೆದು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆಬಿಜಿಪಿಗೆ ಎಸ್ ತಿಪ್ಪೇಸ್ವಾಮಿ ಬಂದಿರುವುದು ಒಂದು ದೊಡ್ಡ ಶಕ್ತಿ ಎಂಬುವುದಾಗಿ ಬಿಂಬಿಸಿದ್ದಾರೆ. ಹೀಗೆ ತಿಪ್ಪೆಸ್ವಾಮಿಗೆ ಅಭಿನಂದನೆ ಸಲ್ಲಿಸಿದ ಶ್ರೀರಾಮುಲು ಮತ್ತೆ 2018 ರ ಸಮರ ನೆನೆದು 2018 ರ ಚುನಾವಣಾ ಸಮಯದಲ್ಲಿ ಪರಿಸ್ಥಿತಿ ಆಗಿತ್ತು ಅದನ್ನೆಲ್ಲ ಮರೆತು ಮತ್ತೆ ಬಿಜೆಪಿ ಬಂದಿರುವುದು ಸ್ವಾಗತ ಅವೇಶದಲ್ಲಿ ಬೇರೆ ಬೇರೆ ಹೋಗಿದ್ದವೋ.ಆಗ ಎಸ್ ತಿಪ್ಪೇಸ್ವಾಮಿ ಅವರಿಗೆ ನೋವಾಗಿರಬಹುದು ಆ ನಾಯಕನಹಟ್ಟಿ ಗುರುತಿಪ್ಪೇಸ್ವಾಮಿ ಆಶಿರ್ವಾದ ನಮ್ಮ ಮೇಲೆ ಇದೆ ಎಂಬುವುದಾಗಿ ಹೇಳಿದರು.

