Sunday, September 8, 2024

Latest Posts

ಕಾಂತಾರ ಸಿನಿಮಾದ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿದ ಯುವತಿಯಿಂದ ತಪ್ಪೊಪ್ಪಿಗೆ

- Advertisement -

movie

ಕಾಂತಾರ ಸಿನಿಮಾದ ಕ್ರೇಜ್ ಹೆಚ್ಚುತ್ತಿದ್ದು, ಸಮಾಜಿಕ ಜಾಲತಾಣಗಳಲ್ಲಿ ಕಾಂತಾರ ಹಾಡಿನ ರೀಲ್ಸ್ ಗಳದ್ದೆ ಹವಾ ಶುರುವಾಗಿದೆ. ಇವರ ಈ ಹುಚ್ಚುತನ ಕೆಲವೊಮ್ಮೆ ಮತ್ತೊಬ್ಬರ ನಂಬಿಕೆಗೆ ಘಾಸಿ ಉಂಟು ಮಾಡುತ್ತದೆ. ಅದರಂತೆ ಯುವತಿಯೊಬ್ಬಳು ಕಾಂತಾರ ಸಿನಿಮಾ ನೋಡಿದ ನಂತರ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಳು, ಇದು ದೈವ ಭಕ್ತರನ್ನು ಕೆರಳಿಸಿತ್ತ. ನಂತರ ಯುವತಿಗೆ ತನ್ನ ತಪ್ಪಿನ ಅರಿವಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿ, ತೀರ್ಥಸ್ನಾನ ಮಾಡಿ ಮಂಜುನಾಥನ ಸನ್ನಿಧಿಯಲ್ಲಿ ತಪ್ಪೊಪ್ಪಿಗೆ ಕಾಣಿಕೆ ಹಾಕಿದ್ದಾಳೆ.

ಬೆಂಗಳೂರು ಮೂಲದ ಶ್ವೇತಾ ರೆಡ್ಡಿ ಎಂಬ ಯುವತಿ  ಮೇಕಪ್ ಆರ್ಟಿಸ್ಟ್ ಕೆಲಸ ಮಾಡಿಕೊಂಡಿದ್ದು, ಕಾಂತಾರ ಸಿನಿಮಾ ನೋಡಿದ ಮೇಲೆ ಪಂಜುರ್ಲಿ ದೈವದ ವೇಷಭೂಷಣ ಹಾಕಿ ಸಿನಿಮಾದ ವರಹಾ ರೂಪಂ ಹಾಡಿಗೆ ರೀಲ್ಸ್ ಮಾಡಿದ್ದಳು. ನಂತರ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಳು. ವಿಡಿಯೋ ನೋಡಿದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಶ್ವೇತಾ ಟಿಕೇಗೆ ಗುರಿಯಾಗಿ ವಿಡಿಯೋ ಡಿಲಿಟ್ ಮಾಡಿದ್ದಳು. ಪಂಜುರ್ಲಿ ದೈವದ ರಿಲ್ಸ್ ಮಾಡಿದ್ದಕ್ಕೆ ಕ್ಷಮೆಕೋರಿ ಮುಂದೆ ಯಾವುದೇ ತೊಂದರೆ ಆಗದಿರಲಿ ಎಂದು ತಪ್ಪು ಕಾಣಿಕೆ ಹಾಕಿದ್ದಾಳೆ. ಯಕ್ಷಗಾನ ಇದೆಲ್ಲವೂ ಒಂದೇ ಎಂದು ಅಂದುಕೊಂಡು ತನ್ನಿಂದ ತಪ್ಪಾಯಿತೆಂದು ಕ್ಷಮೆಯಾಚಿಸಿದ್ದಾಳೆ.

- Advertisement -

Latest Posts

Don't Miss