20 ವರ್ಷಗಳ ಕಾಲ ಕಾಗವಾಡ ಶಾಸಕರಾಗಿದ್ದ ರಾಜು ಕಾಗೆ ಕೈಕೊಟ್ಟ ಕಮಲ.. ಕೈಬಿಟ್ಟು ಕಮಲ ಹಿಡಿದು ಉಪಚುನಾವಣೆಗೆ ಕಾರಣರಾದ ಶ್ರೀಮಂತ ಪಾಟೀಲ.. ಇಬ್ಬರಲ್ಲಿ ಈ ಬಾರಿ ಕಾಗವಾಡ ಗದ್ದುಗೆ ಏರೋದ್ಯಾರು..? ಇದೆಲ್ಲಾದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ..
ಕಾಗವಾಡದಲ್ಲಿ ರಾಜು ಕಾಗೆ ವರ್ಸಸ್ ಶ್ರೀಮಂತ ಪಾಟೀಲ್
ಬೆಳಗಾವಿ ಜಿಲ್ಲೆಯ ರಾಜಕಾರಣ ಒಂದು ರೀತಿಯ ವಿಭಿನ್ನ ಹಾಗೂ ವಿಚಿತ್ರ.. ಇಲ್ಲಿ ರಾಜಕಾರಣಕ್ಕೆ ಬರೋದು ಕಷ್ಟ.. ಬಂದಮೇಲೆ ಕರೆಕ್ಟಾಗಿ ಇದ್ರೆ ಜನ ನಿರಂತರವಾಗಿ ಗೆಲ್ಲಿಸ್ತಾರೆ.. ಹೀಗಾಗಿಯೇ 18 ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡ ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರು ಹಾಗೂ ಉಮೇಶ್ ಕತ್ತಿ ಸೇರಿದಂತೆ ಲಕ್ಷ್ಮಣ ಸವದಿ, ದುರ್ಯೋಧನ ಹೊಳೆ, ಹಾಗೂ ರಾಜು ಕಾಗೆ ಜೊತೆಗೆ ಪ್ರಕಾಶ್ ಹುಕ್ಕೇರಿ ಕುಟುಂಬಸ್ಥರು ಸೇರಿ 8-10 ಶಾಸಕರು ನಿರಂತರವಾಗಿ ಗೆಲುವು ಸಾಧಿಸುತ್ತಲೇ ಬಂದಿದ್ದಾರೆ.. ಅದರಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಹಾಗೂ ಲಕ್ಷ್ಮಣ ಸವದಿಯ ನಿರಂತರ ಗೆಲುವಿಗೆ ಕಳೆದ ಬಾರಿ ಜನ ಬ್ರೇಕ್ ಹಾಕಿದ್ರು.. ರಾಜು ಕಾಗೆ ವಿರುದ್ಧ ಗೆಲುವು ಸಾಧಿಸಿದ್ದ ಶ್ರೀಮಂತ್ ಪಾಟೀಲ್ ಇದೀಗ ಬಿಜೆಪಿ ಸೇರ್ಪಡೆಯಾಗಿದ್ದಾರೆ ಅಲ್ಲದೇ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.. ಹೀಗಾಗಿ 20 ವರ್ಷಗಳ ಕಾಲ ಬಿಜೆಪಿಯಲ್ಲಿದ್ದ ರಾಜು ಕಾಗೆ ಕಮಲ ಪಕ್ಷಕ್ಕೆ ಗುಡ್ ಬೈ ಹೇಳಿ ಕೈ ಪಕ್ಷದಿಂದ ಕಾಗವಾಡದಲ್ಲಿ ಕಾದಾಟಕ್ಕಿಳಿದಿದ್ದಾರೆ..
ರಾಜು ಕಾಗೆ ಪ್ಲಸ್ & ಮೈನಸ್ ಪಾಯಿಂಟ್ ಏನು..?
1999ರಲ್ಲಿ ಕಾಗವಾಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ರಾಜು ಕಾಗೆ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋಲುಕಂಡಿದ್ರು.. ನಂತರ 2000ದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಪಕ್ಷವಾಗಿದ್ದ ಜೆಡಿಯು ಪಕ್ಷದಿಂದ ರಾಜು ಕಾಗೆ ಮೊದಲ ಬಾರಿ ವಿಧಾನಸಭೆ ಪ್ರವೇಶ ಮಾಡಿದ್ರು.. ನಂತರ 2004ರಲ್ಲಿ ಬಿಜೆಪಿ ಚಿಹ್ನೆಯಡಿ ಸ್ಪರ್ಧೇ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಿ ಎರಡನೇ ಬಾರಿ ವಿಧಾನಸಭೆ ಪ್ರವೇಶ ಮಾಡಿದ್ರು.. 2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಿ ಮೂರನೇ ಬಾರಿಗೆ ಕಾಗೆ ವಿಧಾನಸಭೆಗೆ ರೀ ಎಂಟ್ರಿ ಕೊಟ್ರು.. 2014ರ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ, ಬಿಜೆಪಿ, ಬಿಎಸ್ ಆರ್ ಕಿತ್ತಾಟದಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು.. ಆದರೂ ಕಾಗವಾಡದಲ್ಲಿ ಮಾತ್ರ ಜೆಡಿಎಸ್ ಅಭ್ಯರ್ಥಿಯಾಗಿದ್ದ ಶ್ರೀಮಂತ ಪಾಟೀಲ್ ವಿರುದ್ಧ ಕಾಗೆ ಕಮಲ ಪಕ್ಷದ ಗೆಲುವಿನ ಬಾವುಟ ಹಾರಿಸಿ ನಾಲ್ಕನೇ ಬಾರಿ ಸತತವಾಗಿ ವಿಧಾನಸಭೆ ಪ್ರವೇಶ ಮಾಡಿದ್ರು.. ಆದ್ರೆ, ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಕ್ಷೇತ್ರದಲ್ಲಿ ಕಾಗೆ ಕುಟುಂಬದ ಬೀದಿ ಕಾಳಗದಿಂದಾಗ ಜನ ಜೆಡಿಎಸ್ ನಿಂದ ಪಕ್ಷಾಂತರ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮಂತ್ ಪಾಟೀಲ್ ಕೈಹಿಡಿದ್ರು.. ಆದ್ರೀಗಾ ಕೊಟ್ಟ ಮಾತನ್ನ ತಪ್ಪಿ ನಡೆದರೆ ನೆಚ್ಚನಾ ಪರಮಾತ್ಮನು ಅಂತ ಸಿಎಂ ಯಡಿಯೂರಪ್ಪ ತನ್ನ ಸರ್ಕಾರ ಬರಲು ಕಾರಣರಾದವರಿಗೆ ಟಿಕೆಟ್ ಕೊಡ್ತಿದ್ದಾರೆ.. ಹೀಗಾಗಿ ರಾಜು ಕಾಗೆ ಕಮಲ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಹಾರಿದ್ದಾರೆ.. ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಹಿಡಿತ ಹೊಂದಿರುವ ರಾಜು ಕಾಗೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೂಲಕ ಮತ್ತೆ ವಿಧಾನಸಭೆ ಪ್ರವೇಶ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.. ಆದ್ರೆ, ಕಾಗವಾಡ ಕ್ಷೇತ್ರದಲ್ಲಿ ಉಮೇಶ್ ಕತ್ತಿ ಹಾಗೂ ಜಾರಕಿಹೊಳಿ, ಸವದಿ ಪ್ರಭಾವವಿರುವ ಕಾರಣ ಕಾಗೆ ಗೆಲುವಿನ ಬಾವುಟ ಹಾರಿಸೋದು ಅಷ್ಟು ಸಲಭವಲ್ಲ..
ಕಾಗವಾಡ ಮತ್ತೆ ಶ್ರೀಮಂತ ಪಾಟೀಲ್ ಕೈಹಿಡಿಯುತ್ತಾ..?
ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಮೂರು ಚುನಾವಣೆಗಳಲ್ಲಿ ಮೂರು ಪಕ್ಷಗಳಿಂದ ಸ್ಪರ್ಧೇ ಮಾಡಿದಂತಾಗಿದೆ.. ಯಾಕಂದ್ರೆ 2014ರಲ್ಲಿ ಜೆಡಿಎಸ್ ಮೂಲಕ ಸ್ಪರ್ಧೆ ಮಾಡಿ ಸೋತಿದ್ದ ಪಾಟೀಲ್ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೇ ಮಾಡಿ ಗೆಲುವು ಸಾಧಿಸಿದ್ರು.. ಇದೀಗ ಅನರ್ಹರಾದ ಕಾರಣದ ಬಿಜೆಪಿಗೆ ಪಕ್ಷಾಂತರ ಮಾಡಿ ಚುನಾವಣೆಗೆ ಸ್ಪರ್ಧೇ ಮಾಡಿದ್ದಾರೆ.. ಬೆಳಗಾವಿಯ ಬಿಜೆಪಿಯ ಘಟಾನುಘಟಿ ನಾಯಕರು ಪಾಟೀಲ್ ಬೆನ್ನಿಗೆ ನಿಂತಿರೋದು, ಜೊತೆಗೆ ಲಿಂಗಾಯತ ಸಮುದಾಯದ ಯಡಿಯೂರಪ್ಪ ಮುಖ್ಯಂತ್ರಿಯಾಗಿರೋದು ಕಾಗವಾಡದಲ್ಲಿ ಕಮಲ ಅರಳಲು ಅನುಕೂಲವಾಗಲಿದೆ ಅನ್ನೋದು ಶ್ರೀಮಂತ್ ಪಾಟೀಲ್ ಲೆಕ್ಕಾಚಾರ.. ಆದ್ರೆ, ಕ್ಷೇತ್ರದ ಜನ ಮತ್ತೆ ರಾಜು ಕಾಗೆ ಪರ ಅನುಕಂಪ ತೋರಿಸಿದ್ರೆ ಕಮಲ ಕಮರಿ ಕಾಂಗ್ರೆಸ್ ಗೆಲುವಿನ ಕೇಕೆ ಹಾಕಬಹುದು..
ಯಸ್ ವೀಕ್ಷಕರೇ ನಿಮ್ಮ ಪ್ರಕಾರ ಕಾಗವಾಡ ಕ್ಷೇತ್ರದಲ್ಲಿ ಗೆಲ್ಲೋದು ಯಾರು..? ಬಿಜೆಪಿಯ ಶ್ರೀಮಂತ್ ಪಾಟೀಲರಾ..? ಅಥವಾ ಕಾಂಗ್ರೆಸ್ ನಾ ರಾಜು ಕಾಗೆನಾ..? ಈ ಬಗ್ಗೆ ನಿಮ್ಮಅಭಿಪ್ರಾಯ ಕಾಮೆಂಟ್ ಮಾಡಿ..