ಸಾಗರದ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ: ಆಸ್ಪತ್ರೆಗೆ ದಾಖಲು

Uttara Kannada News: ಇಂದಿನಿಂದ ಸಾಗರದ ಮಾರಿಕಾಂಬಾ ಜಾತ್ರೆ ಶುರುವಾಗಿದ್ದು, ಈ ವೇಳೆ ದೇವಿಯ ದರ್ಶನಕ್ಕಾಗಿ ತೆರಳಿದ್ದ ಹಿರಿಯ ರಾಜಕೀಯ ನಾಯಕ ಕಾಗೋಡು ತಿಮ್ಮಪ್ಪ ಕುಸಿದು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಿಮ್ಮಪ್ಪ ಅವರಿಗೆ ಈಗಾಗಲೇ ಉಸಿರಾಟದ ಸಮಸ್ಯೆ ಮತ್ತು ಶುಗರ್ ಸಮಸ್ಯೆ ಇದ್ದು, ದೇಹದಲ್ಲಿ ಶುಗರ್ ಪ್ರಮಾಣ ಏರುಪೇರಾಗಿ, ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದ“ಯ್ದು ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ.

ಸಾಗರ ಮಾರಿಕಾಂಬಾ ಜಾತ್ರೆ ಅಂದ್ರೆ, ಅಲ್ಲಿ ರಾಜ್ಯದ ಹಲವು ಭಾಗಗಳಿಂದ ಜನ ಬರುತ್ತಾರೆ. ಹಾಗಾಗಿ ಜನಸಂದಣಿ ಇರುವ ಕಾರಣಕ್ಕೆ, ಕಾಗೋಡು ತಿಮ್ಮಪ್ಪ ಅವರಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗಿದೆ.

About The Author