ಕಲಬುರಗಿ:ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ಬಂದು ಬಸ್ಸಿಗಾಗಿ ತಾಸುಗಟ್ಟಲೆ ನೀಂತರೂ ಬಸ್ಸು ಬರುವುದಿಲ್ಲ ಕೊನೆಯಲ್ಲಿ ಬಂದಿರುವ ಬಸ್ಸನ್ನು ನಿಲ್ಲಿಸಿಲ್ಲ ಎಂದು ರೊಚ್ಚಿಗೆದ್ದ ಗ್ರಾಮಸ್ಥರು ಬಸ್ಸಿಗೆ ಕಲ್ಲು ತೂರಿರುವ ಘಟನೆ ಕಮಲಾಪುರ ತಾಲೂಕಿನ ಕಾಳಮಂದಿರ ಸಮೀಪದ ಗುತ್ತಿ ತಾಂಡದಲ್ಲಿ ನಡೆದಿದೆ.
ಬಸವಕಲ್ಯಾಣದಿಂದ ಕಮಲಾಪುರ ಮಾರ್ಗವಾಗಿ ಸಂಚರಿಸುವ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ಬಸ್ಸು ತಾಂಡದಿಂದ ಹಾದುಹೋಗುವಾಗ ಬಸ್ಸು ತುಂಬಿರುವ ಕಾರಣ ತಾಂಡಾದ ನಿಲ್ದಾಣದಲ್ಲಿ ಬಸ್ಸನ್ನು ನಿಲ್ಲಿಸದೆ ಮುಂದೆ ನಡೆದ ಕಾರಣ ಬಸ್ಸಿಗಾಗಿ ಕಾಯುತ್ತಿರುವ ತಾಂಡಾದವರು ಬಸ್ಸಿನ ಹಿಂಬದಿ ಗಾಜಿಗೆ ಕಲ್ಲನ್ನು ಎಸೆದಿದ್ದಾರೆ.
ಇದರ ಪರಿಣಾಮ ಬಸ್ಸಿನ ಹಿಂದಿ ಗಾಜು ಹೊಡೆದು ಹೋಗಿದೆ. ನಂತರ ಬಸ್ ಚಾಲಕ ಬಸ್ಸನ್ನು ನಿಲ್ಲಿಸಿ ಕೆಳಗಿಳಿದು ಬಂದು ಯಾರು ಕಲ್ಲೆಸೆದಿದ್ದು ಎಂದು ಕೇಳಿದಾಗ ಯಾರು ಸಹ ಮಾತನಾಡಲಿಲ್ಲ ನಂತರ ಸ್ವಲ್ಪ ಸಮಯದ ನಂತರ ಚಾಲಕ ಬಸ್ಸನ್ನು ಚಲಾಯಿಸಿಕೊಂಡು ಹೋಗಿದ್ದಾರೆ.