Dharwad News: ಧಾರವಾಡ: ಧಾರವಾಡದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಎನ್.ಎಚ್.ಕೋನರೆಡ್ಡಿ, ಯತ್ನಾಳ್ ಮತ್ತಿತರರ ಸಭೆ ವಿಚಾರವಾಗಿ ಮಾತನಾಡಿದ್ದಾರೆ.
ಬಿಜೆಪಿಯಲ್ಲಿ ಮೂರು ಭಾಗ ಇವೆ. ಓರಿಜನಲ್ ಬಿಜೆಪಿ, ಸೇರ್ಪಡೆಯಾದ ಬಿಜೆಪಿ, ಇಬ್ಬರೂ ಬೇಡ ಎಂಬ ತಟಸ್ಥ ಬಣ ಒಂದಿದೆ. ಒಂದು ಬಿಎಸ್‌ವೈ ಬಣ, ಕೇಂದ್ರದಲ್ಲಿ ಮಂತ್ರಿಯಾಗದವರ ಬಣ, ಯತ್ನಾಳ ಮತ್ತಿತರ ಬಣ ಆಗಿದೆ. ಉತ್ತರ ಕರ್ನಾಟಕದವರನ್ನು ಕೇಳುತ್ತಿಲ್ಲವೆಂದು ಯತ್ನಾಳ ಮತ್ತಿತರರ ಆರೋಪ ಆಗಿದೆ. ಕೇವಲ ಕಾಂಗ್ರೆಸ್ ನವರ ವಿರುದ್ಧ ಹೋರಾಟ ಮಾಡೊದಲ್ಲ. ನಮ್ಮಲ್ಲಿ ಹೆಗ್ಗಣ ಸತ್ತು ಬಿದ್ದಿದೆ ಅಂತಾ ಯತ್ನಾಳ ಹೇಳಿದ್ದಾರೆ. ಆ ಹೆಗ್ಗಣ ಯಾವುದು ಅಂತಾ ಅವರೇ ಹೇಳಬೇಕು ಎಂದು ಕೋನರೆಡ್ಡಿ ಹೇಳಿದ್ದಾರೆ.
ಸಿದ್ದರಾಮಯ್ಯ 15 ಬಜೆಟ್ ಕೊಟ್ಟವರು. ಎಲ್ಲಿಯಾದರೂ ಕಪ್ಪುಚುಕ್ಕೆ ಇದೆಯಾ? ಎಸ್.ಆರ್. ಬೊಮ್ಮಾಯಿ ಸಿಎಂ ಆಗಿದ್ದಾಗ ರಾಜ್ಯಪಾಲರು ನೋಟೀಸ್ ಕೊಟ್ಟಿದ್ದರು. ಆಗ ನ್ಯಾಯಾಲಯಕ್ಕೆ ಹೋಗಿದ್ದರು. ಆಗ ಆಗಿರುವ ತೀರ್ಪು ಸಂವಿಧಾನಕ್ಕೆ ಬೈಬಲ್ ಇದ್ದಂತೆ. ಅದರ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ. ಆ ಬಳಿಕ ಯಾವ ರಾಜ್ಯಪಾಲರು ಸಿಎಂಗಳಿಗೆ ನೋಟೀಸ್ ಕೊಡುವ ಕೆಲಸ ಮಾಡಿಲ್ಲ. ಬಹುಮತ ಇದ್ದಾಗ ಓರ್ವ ಗ್ರಾಪಂ ಅಧ್ಯಕ್ಷನನ್ನೆ ಇಳಿಸಲು ಆಗುವುದಿಲ್ಲ. ನಗರಸಭೆ, ಪುರಸಭೆ ಅಧ್ಯಕ್ಷರನ್ನೂ ಇಳಿಸಲು ಆಗುವುದಿಲ್ಲ. ಇನ್ನು ಓರ್ವ ಸಿಎಂ ಹಾಗೇ ಸರಳ ರಾಜೀನಾಮೆ ಕೊಡಲು ಆಗುತ್ತದಾ?
136 ಸ್ಥಾನ ಗೆದ್ದಿದ್ದೇವೆ. ಅವರಿಗೆ ಆಪರೇಷನ್ ಕಮಲ ಮಾಡುವುದಕ್ಕೆ ಆಗಲಿಲ್ಲ. ಹೀಗಾಗಿ ಈಗ ಕೆಟ್ಟ ಹೆಸರು ತರಲು ಮುಂದಾಗಿದ್ದಾರೆ. ನಮ್ಮದು ಸುಭದ್ರ ಸರ್ಕಾರವಿದೆ. ತುಂಗಭದ್ರಾ ಡ್ಯಾಮ್ ಗೇಟ್ ಚೈನ್ ಕಟ್ ಆಗಿದೆ. ಡ್ಯಾಮ್ ಗಳ ಬಗ್ಗೆ ನಮಗೆ ಚಿಂತೆ ಶುರುವಾಗಿದೆ. ನೀರು ಹೋದರೆ ಹೇಗೆ ಎಂಬ ನೋವು ಕಾಡುತ್ತಿದೆ. ಆದರೆ ಬಿಜೆಪಿಯವರು ಕೇವಲ ರಾಜಕೀಯ ಮಾಡುತ್ತಿದ್ದಾರೆ. 24×7 ರಾಜಕಾರಣ ಮಾಡುವುದಲ್ಲ. ಸರ್ಕಾರಕ್ಕೆ ವಿರೋಧ ಪಕ್ಷವಾಗಿ ಸಲಹೆ ಕೊಡಬೇಕು. ಚುನಾವಣೆ ಬಂದಾಗ ಮಾತ್ರ ರಾಜಕಾರಣ ಮಾಡಲಿ ಎಂದು ಕೋನರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.