Dharwad News: ಧಾರವಾಡದಲ್ಲಿ ಮಾತನಾಡಿದ ವಿರೋಧ ಪಕ್ಷದ ಉಪನಾಯಕ ಶಾಸಕ ಅರವಿಂದ್ ಬೆಲ್ಲದೇ, ರಮೇಶ ಜಾರಕಿಹೊಳಿ ಬಸನಗೌಡ ಪಾಟೀಲ ಬೆಳಗಾವಿಯಲ್ಲಿ ಸಭೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಓಪನ್ ಆಗಿ ಸಭೆ ಮಾಡಿದ್ದಾರೆ, ಈ ವಿಚಾರವಾಗಿ ಪಕ್ಷದಲ್ಲಿ ಒಳಗಡೆ ಕುಳಿತು ಮಾತನಾಡುವ ಅವಶ್ಯಕತೆ ಇದೆ. ಯತ್ನಾಳ್, ರಮೇಶ ಜಾರಕಿಹೋಳಿ, ಸಿದ್ದೇಶ್ವರ ಅವರ ಇಶ್ಯೂಗಳು ಇವೆ. ಪಕ್ಷದ ಆಂತರಿಕವಾಗಿ ಚರ್ಚೆ ಮಾಡುವ ಅವಶ್ಯಕತೆ ಇದೆ. ಮಾಧ್ಯಮಗಳ ಮುಂದೆ ಎನೂ ಹೇಳಲ್ಲ ಚರ್ಚೆ ಮಾಡುತ್ತೇವೆ. ಪಕ್ಷದಲ್ಲಿ ಬೇರೆ ಬೇರೆ ವಿಚಾರಗಳು ಇರ್ತಾವೆ. ಓಪನ್ ಆಗಿ ಎಲ್ಲವನ್ನು ಹೇಳಲು ಆಗಲ್ಲ. ಬಿಜೆಪಿಯ ಎರಡು ಗುಂಪುಗಳ ಬಗ್ಗೆ ನಾನು ಮಾತನಾಡಲ್ಲ. ಪಕ್ಷದ ಏನೇ ವಿಷಯ ಇದ್ರು ನಾವೇ ಚರ್ಚೆ ಮಾಡಿಕ್ಕೊಳ್ಳುತ್ತೇವೆ. ಇವೆಲ್ಲ ನಾವೇ ನಮ್ಮಪಕ್ಷದ ಆಂತರಿಕ ವಿಚಾರ ನಾನೆ ತಿರ್ಮಾಣ ಮಾಡಿಕ್ಕೊಳ್ಳುತ್ತೇವೆ ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ನಾನೆ ಸಿಎಂ ಅಂತಾರೆ ಮತ್ತೊಂದು ದಿನ ಡಿಕೆ ಶಿವಕುಮಾರ, ಪರಮೇಶ್ವರ ಸಿಎಂ ಆಗಬೇಕು ಅಂತಾರೆ. ಮುಡಾ ವಿರುದ್ದ ಇಗಾಗಲೆ ಮೊದಲನೆಯ ಹಂತದ ಹೋರಾಟ ನಡೆದಿದೆ. ಎರಡನೇಯ ಹಂತದ ಹೋರಾಟ ರಾಜ್ಯಪಾಲರ ಅಂಗಳದಲ್ಲಿದೆ. ಕಾನೂನು ಪ್ರಕಾರ ಅವರು ಸರಿಯಾಗಿ ಕ್ರಮ ಕೈಗೊಳ್ತಾರೆ ಅನ್ನೋ ನಂಬಿಕೆ ಇದೆ. ಹಿಂದೆ ಹಂಸರಾಜ ಭಾರದ್ವಾಜ ಅವರು ಯಡಿಯೂರಪ್ಪ ವಿರುದ್ದ ದೂರು ಬಂದಾಗ ಪ್ರಾಶೂಕ್ಯೂಶನ್ ಮಾಡಿಸಿದ್ರು. ಇಗಿನ ರಾಜ್ಯಪಾಲರು ಕೇಸ್ ಬಗ್ಗೆ ವಿವರಣೆ ಕೇಳಿದ್ದಾರೆ ಸಿದ್ದರಾಮಯ್ಯ ಅವರು ವಿವರಣೆ ಕೊಟ್ಟಿದ್ದಾರೆ. ವಿವರಣೆ ಸರಿಯಾಗಿ ಇರದಿದ್ದರೆ ಕಾನೂನಾತ್ಮವಾಗಿ ಕ್ರಮ ಕೈಗೊಳ್ತಾರೆ ಎಂದು ಬೆಲ್ಲದ್ ಹೇಳಿದ್ದಾರೆ.
ಧಾರವಾಡದಲ್ಲಿ ಕೈ ಮುಖಂಡ ಇಸ್ಮಾಯಿಲ್ ತಮಾಟಗಾರಗೆ ಹತ್ಯೆ ವಿಚಾರದ ಬಗ್ಗೆ ಮಾತನಾಡಿರುವ ಬೆಲ್ಲದ್, ಇಸ್ಮಾಯಿಲ್ ತಮಾಟಗಾರ ಗೆ ಪೋಲಿಸ್ ಇಲಾಖೆ ರಕ್ಷಣೆ ನೀಡಬೇಕು. ಬಹಳ ಡಿಸ್ಟರ್ಬ ವಾದ ಘಟನೆ ಧಾರವಾಡದಲ್ಲಿ. ಧಾರವಾಡ ಶಾಂತಿ ಪ್ರಿಯರ ನಾಡು. ಇಲ್ಲಿ ಈ ರೀತಿ ಡೆವೆಲಪ್ಮೆಂಟ್ ಆಗಿದೆ ಅಂದರೆ ವಿಚಾರ ಮಾಡಲೇಬೇಕು. ಯಾವುದೆ ಮುಲಾಜಿಲ್ಲದೆ ತಪ್ಪಿತಸ್ಥರ ವಿರುದ್ದ ಪೋಲಿಸ್ ಇಲಾಖೆ ಕ್ರಮ ಕೈ ಗೊಳ್ಳಬೇಕು. ಯಾವುದೆ ಪಾರ್ಟಿಯಲ್ಲಿರಲಿ, ಎಲ್ಲರಿಗೂ ರಕ್ಷಣೆ ಕೊಡಬೇಕು. ಕೊಲೆ ಮಾಡಲಿಕ್ಕೆ ಪ್ರಯತ್ನ ಮಾಡಿದ್ದಾರೆ ಅನ್ನೋದು ಗಂಭಿರವಾದ ವಿಚಾರ. ನಾನು ಕೂಡಾ ಪೋಲಿಸ್ ಕಮಿಷನರ್ ಗೆ ಮಾತನಾಡುವೆ ಎಂದು ಅರವಿಂದ್ ಬೆಲ್ಲದ್ ಹೇಳಿಕೆ ನೀಡಿದ್ದಾರೆ.