Y ಶ್ರೇಣಿ ಭದ್ರತೆಯೊಂದಿಗೆ ಮುಂಬೈಗಿಂದು ಕಂಗನಾ

ಮುಂಬೈಯನ್ನ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದಿದ್ದ ಬಾಲಿವುಡ್​ ನಟಿ ಕಂಗನಾ ರಣಾವತ್​ ಇಂದು ಮುಂಬೈಗೆ ವಾಪಸ್ಸಾಗಲಿದ್ದಾರೆ. ತಾಯ್ನಾಡು ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ತಮ್ಮ ನಿವಾಸದಿಂದ ಕಂಗನಾ ವೈ ಕೆಟಗರಿ ಭದ್ರತೆ ಸಮೇತ ಮುಂಬೈಗೆ ಮರಳಲಿದ್ದಾರೆ.

Karnataka TV Contact


ಶಿವಸೇನೆ ಮುಖಂಡ ಸಂಜಯ್​ ರಾವತ್​ರಿಂದ ನನಗೆ ಜೀವ ಬೆದರಿಕೆ ಇದೆ ಎಂದಿದ್ದ ನಟಿ ತಮಗೆ ಭದ್ರತೆ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ ಹಿಮಾಚಲ ಸರ್ಕಾರ ನಟಿ ನಿವಾಸಕ್ಕೆ ಭದ್ರತೆ ನೀಡಿದ್ದರೆ ಮುಂಬೈನಲ್ಲಿ ವೈ ಕೆಟಗರಿ ಭದ್ರತೆ ನೀಡಲು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿತ್ತು.


ಇಂದು ಮುಂಬೈಗೆ ತೆರಳಲಿರೋ ನಟಿ ಕಂಗನಾಗೆ 11 ಮಂದಿ ಸಿಆರ್​ಪಿಎಫ್​​ ಸಿಬ್ಬಂದಿ ಭದ್ರತೆ ನೀಡಲಿದ್ದಾರೆ. ಇನ್ನು ಈ ಸಂಬಂಧ ಪ್ರತಿಕ್ರಿಯೆ ನೀಡಿರೋ ಬಿಎಂಸಿ, ಕಂಗನಾ ರಣಾವತ್​ ಕರೊನಾ ವರದಿ ನೆಗೆಟಿವ್​ ಬಂದಿರೋದ್ರಿಂದ ಅವರಿಗೆ ಮುಂಬೈ ಪ್ರಯಾಣಕ್ಕೆ ಅನುವು ಮಾಡಲಾಗಿದೆ. ಮುಂಬೈಗೆ ವಾಪಸ್ಸಾದ ಬಳಿಕ ಕಂಗನಾ ಒಂದು ವಾರಗಳ ಕಾಲ ಹೋಂ ಕ್ವಾರಂಟೈನ್​ ಆಗಲಿದ್ದಾರೆ ಅಂತಾ ಹೇಳಿದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466

About The Author