ಕನ್ನಡ ಫೇಮಸ್ ಆ್ಯಂಕರ್.. ಚಟಪಟ ಮಾತಿನ ಮೂಲಕವೇ ಲಕ್ಷಾಂತರ ಅಭಿಮಾನಿಗಳ ಹೃದಯ ಕದ್ದ ನಗುಮೊಗದ ಚೆಲುವೆ ಅನುಶ್ರೀ.. ಈ ನಿರೂಪಕಿಯ ರೇಂಜ್ ಯಾವ ಸಿನಿಮಾ ನಟಿಯರಿಗೂ ಕಮ್ಮಿಯಿಲ್ಲ. ಇದೀಗ ಈ ಮಂಗಳೂರು ಚೆಲುವೆಯ ಮದುವೆ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ..
ಅನುಶ್ರೀ ಅವರ ಮದುವೆ ಫಿಕ್ಸ್ ಆಗಿದೆ. ಆಗಸ್ಟ್ ತಿಂಗಳಲ್ಲಿ ಅವರ ವಿವಾಹ ನಡೆಯಲಿದೆ ಎಂದು ವರದಿಗಳಿವೆ. ಬೆಂಗಳೂರಿನ ಕಾರ್ಪೋರೇಟ್ ಉದ್ಯೋಗಿಯೊಂದಿಗೆ ಅವರ ವಿವಾಹ ನಡೆಯುವ ಸಾಧ್ಯತೆ ಇದೆ.
ಆಗಸ್ಟ್ 28ಕ್ಕೆ ಅನುಶ್ರೀ ಮದುವೆ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ. ಬೆಂಗಳೂರು ಮೂಲದ ಕಾರ್ಪೋರೇಟ್ ಉದ್ಯೋಗಿ ಜೊತೆ ಅವರು ವಿವಾಹ ಆಗುತ್ತಿದ್ದಾರೆ. ಹಾಗಾದರೆ ಇದು ಲವ್ ಮ್ಯಾರೇಜಾ? ಅಲ್ಲಾ ಪಕ್ಕಾ ಅರೇಂಜ್ ಮ್ಯಾರೇಜ್ ಎನ್ನುತ್ತಿವೆ ಮೂಲಗಳು. ಕುಟುಂಬದವರು ನೋಡಿದ ಹುಡುಗನ ಜೊತೆ ಅನುಶ್ರೀ ವಿವಾಹ ಆಗುತ್ತಿದ್ದಾರಂತೆ. ಬೆಂಗಳೂರಿನಲ್ಲೇ ಈ ವಿವಾಹ ಗ್ರಾಂಡ್ಆಗಿ ನೆರವೇರಲಿದೆ ಎನ್ನಲಾಗುತ್ತಿದೆ.
ಅಚ್ಚಕನ್ನಡದಲ್ಲಿ ಸ್ವಚ್ಚವಾಗಿ ಮಾತನಾಡುತ್ತಾ ಕನ್ನಡಿಗರ ಮನದಲ್ಲಿ ಅಚ್ಚಳಿಯಲಾಗದ ಛಾಪು ಮೂಡಿಸಿರುವ ಅನುಶ್ರೀ ಅವರಿಗೆ ಸಿನಿಮಾ ಸ್ಟಾರ್‌ಗಳಷ್ಟೇ ಕ್ರೇಜ್ ಇದೆ ಎಂದರೇ ತಪ್ಪಾಗುವುದಿಲ್ಲ.. ಇವರು ತೆರೆಮೇಲೆ ಬಂದ್ರೆ ಟಿವಿ ಬಿಟ್ಟು ಅಲ್ಲಾಡದೇ ಇರೋವಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ ಈ ಮಂಗಳೂರು ಚೆಲುವೆ..
ನಟಿ ಆಂಕರ್ ಆಗಿ ಗುರುತಿಸಿಕೊಳ್ಳುತ್ತಿರುವ ಅನುಶ್ರೀ ತಮ್ಮ ಆರಂಭಿಕ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿ ಈ ಮಟ್ಟಕ್ಕೆ ಬೆಳದಿದ್ದಾರೆ.. ಇವರ ನಿರೂಪಣೆ ಇಲ್ಲವಾದರೇ ಆ ಕಾರ್ಯಕ್ರಮವೇ ಅಪೂರ್ಣ ಎನ್ನಿಸುವಷ್ಟರ ಮಟ್ಟಿಗೆ ತಮ್ಮ ಕ್ರೇಜ್ ಬೆಳೆಸಿಕೊಂಡಿದ್ದಾರೆ.
ನಗು ಮೊಗದಿಂದಲೇ ಜನಮನದಲ್ಲಿ ಉಳಿದ ಅನುಶ್ರೀ ಅವರಿಗೆ ಇನ್ನೂ ಯಾಕೆ ಮದುವೆಯಾಗಿಲ್ಲ ಅನ್ನೋದು ಅವರ ಫ್ಯಾನ್ಸ್‌ಗೆ ಕಾಡುತ್ತಿರುವ ಪ್ರಶ್ನೆಯಾಗಿತ್ತು.. ಆದರೆ ಇದೀಗ ಅವರ ಮದುವೆ ಕುರಿತಾದ ನಿಖರ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.
ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಆಗಸ್ಟ್ 28ಕ್ಕೆ ಮದುವೆ ಆಗಲಿದ್ದಾರೆ. ಕೊಡಗು ಮೂಲದ ಕಾರ್ಪೋರೇಟ್ ಉದ್ಯಮಿ ರೋಶನ್ ಜೊತೆ ಅನುಶ್ರೀ ಮದುವೆ ನಡೆಯಲಿದೆ. ಅನುಶ್ರೀ ಅವರು ಫ್ಯಾಮಿಲಿ ನೋಡಿದ ಹುಡುಗನನ್ನೇ ಮದುವೆ ಆಗುತ್ತಿದ್ದಾರೆ. ಬೆಂಗಳೂರಿನಲ್ಲಿ ಗ್ರಾಂಡ್ ಆಗಿ ನಡೆಯಲಿದೆ ಮದುವೆ ನಡೆಯಲಿದೆ.