Kannada Podcast : ಕನ್ನಡ ನಟಿ ತನೀಷಾ ಕುಪ್ಪಂಡ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಅವರ ತಾಯಿಯಿಂದಲೇ ಅವರು ಬಿರಿಯಾನಿ ತಿನ್ನೋದು, ತಾನು ದುಡಿದ ದುಡ್ಡಿನಲ್ಲಿ 1 ಭಾಗ ಆಹಾರಕ್ಕಾಗಿಯೇ ಮೀಸಲಿಡೋದು ಕಲಿತಿದ್ದಾರಂತೆ.
ತನೀಷಾ ಅವರು ಮುಂಚೆ ದಿನಕ್ಕೆ 1ಸಾವಿರದ 200 ರೂಪಾಯಿ ದುಡಿಯುತ್ತಿದ್ದರಂತೆ. ಆಗ ಅವರ ತಾಯಿ, ನೀನು ದಿನಕ್ಕೆ ಸಾವಿರ ರೂಪಾಯಿ ದುಡಿಯುತ್ತಿದ್ದರೆ, ನೂರು ರೂಪಾಯಿಯ ಬಿರಿಯಾನಿ ತಿನ್ನೋದರಲ್ಲಿ ಏನೂ ತಪ್ಪಿಲ್ಲ ಅಂತಾ ಹೇಳಿದ್ರಂತೆ. ಅವತ್ತಿಂದ ತನೀಷಾ ಬಿರಿಯಾನಿ ತಿನ್ನೋದನ್ನ ಪ್ರಾಕ್ಟೀಸ್ ಮಾಡಿದ್ದಲ್ಲದೇ, ತನ್ನ ದುಡಿಮೆಯಲ್ಲಿ 1 ಭಾಗ ಆಹಾರಕ್ಕಾಗಿಯೇ ಮೀಸಲಿಡುತ್ತಿದ್ದಾರಂತೆ.
ತಂದೆ ಆದರೆ 1 ಸಲ ಯಾವುದಾದರೂ ವಿಷಯಕ್ಕೆ ಓಕೆ ಎಂದರೆ, ಆ ಕೆಲಸ ಅವರು ಮಾಡುತ್ತಾರೆ ಎಂದರ್ಥ. ಆದರೆ ನೋ ಅಂದ್ರೆ ಅವರ ಬಳಿ ಆ ವಿಷಯ ಮಾತನಾಡುವ ಹಾಗೇ ಇಲ್ಲ. ಅಷ್ಟು ಸ್ಟ್ರಿಕ್ಟ್. ಆದರೆ ಅಮ್ಮ ಹಾಗಲ್ಲ. ಅಮ್ಮ ನಗು ನಗುತ್ತಲೇ ಮಾತನಾಡುತ್ತಾರೆ. ಆದರೆ, ಆ ಮಾತಿನಲ್ಲೇ 1 ಸೂಕ್ಷ್ಮ ಮಾತು ಅಡಗಿರುತ್ತೆ ಅಂತಾರೆ ತನೀಷಾ.
ಇನ್ನು ತನೀಷಾ ಮತ್ತು ಅವರ ಅಮ್ಮನ ಬಾಂಡಿಂಗ್ ತುಂಬಾ ಚೆನ್ನಾಗಿದ್ದು, ಏಕವಚನದಲ್ಲಿ ನಾವಿಬ್ಬರೂ ಮಾತನಾಡುತ್ತೇವೆ. ನಾನು ನನ್ನ ತಾಯಿಯನ್ನು ಲೀಲೂ ಎಂದು ಕರೆಯುತ್ತೇನೆ. ಕೆಲವು ಬಾರಿ ಲೀಲಾವತಿ ಅಂತಲೂ ತಮಾಷೆ ಮಾಡುತ್ತೇನೆ. ಆದರೆ ನಮ್ಮಿಬ್ಬರ ನಡುವಿನ ಪ್ರೀತಿ, ಕಾಳಜಿ ಸದಾ ಇದ್ದೇ ಇರುತ್ತದೆ ಅಂತಾರೆ ತನೀಷಾ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

