- Advertisement -
ಮಂಡ್ಯ: ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ನಿಮಿಷಾಂಭ ಆಟೋ ನಿಲ್ದಾಣದ ವತಿಯಿಂದ ಕನ್ನಡರಾಜ್ಯೋತ್ಸವ ಹಾಗೂ ಪುನೀತ್ ನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೆರಿಸಿ ಮಾತನಾಡಿದ ಸಮಾಜ ಸೇವಕ,ಮಂಡ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಮನ್ಮುಲ್ ನಿರ್ದೇಶಕ ಉಮ್ಮಡಳ್ಳಿ ಶಿವಪ್ಪ ಕನ್ನಡ ರಾಜ್ಯೋತ್ಸವ ಆಚರಿಸಲು ಹಾಗೂ ಪುನೀತ್ ನಮನ ಸಲ್ಲಿಸಲು ಯಾವುದೇ ತಿಂಗಳ, ಕಾಲದ ಅವಶ್ಯಕತೆ ಇಲ್ಲ ವರ್ಷದ ಯಾವುದೇ ಸಮಯದಲ್ಲಿ ನೇರವೆರಿಸಬಹುದು ಎಂದು ಹೇಳಿದರು. ಆಟೋ ಚಾಲಕರು ಹೆಚ್ಚಿನ ಪ್ರಮಾಣದಲ್ಲಿ ರಾಜ್ಯೋತ್ಸವವನ್ನು ಆಚರಿಸುತ್ತಿದ್ದು ಅವರಲ್ಲಿರುವ ಕನ್ನಡ ಅಭಿಮಾನವು ಇತರರಿಗೆ ಮಾದರಿಯಾಗಲಿ ಎಂದು ತಿಳಿಸಿದರು.
ಇಂದೂ ಕೂಡ ಬೆಂಗಳೂರಿನಲ್ಲಿ ಮಳೆ, ನಾಳೆಯಿಂದ ಕಡಿಮೆಯಾಗಲಿದೆ ವರುಣನ ಅಬ್ಬರ : ಹವಾಮಾನ ಇಲಾಖೆ
- Advertisement -