Sunday, October 5, 2025

Latest Posts

UKನಲ್ಲಿ ಕಾಂತಾರ 1 ಸಿನೆಮಾ ರಿಲೀಸ್ – ಪ್ರೀಮಿಯರ್ ಶೋ ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಜರ್ !

- Advertisement -

ರಿಷಬ್‌ ಶೆಟ್ಟಿ ನಿರ್ದೇಶನದ ʻಕಾಂತಾರ: ಚಾಪ್ಟರ್‌ 1ʼ ರಿಲೀಸ್ ಗೆ ಸಜ್ಜಾಗಿದೆ.
ದೇಶ ವಿದೇಶಗಳಲ್ಲಿಯೂ ಈ ಸಿನಿಮಾ ಸಾವಿರಾರು ಸ್ಕ್ರೀನ್‌ಗಳ ಮೇಲೆ ಅಬ್ಬರಿಸಲಿದೆ. ರಿಷಬ್‌ ಶೆಟ್ಟಿ ನಿರ್ದೇಶನದ ʻಕಾಂತಾರ ಚಾಪ್ಟರ್‌ 1ʼ ಚಿತ್ರತಂಡ, ಭರ್ಜರಿ ಪ್ರಚಾರ ಕೆಲಸದಲ್ಲಿಯೂ ತೊಡಗಿಸಿಕೊಂಡಿದೆ. ವಿದೇಶಗಳಲ್ಲಿಯೂ ಈ ಸಿನಿಮಾಕ್ಕೆ ಕ್ರೇಜ್‌ ಹೆಚ್ಚಾಗಿದೆ. ಆ ಕ್ರೇಜ್‌ಗೆ ತಕ್ಕಂತೆ, ದೂರದ ಇಂಗ್ಲೆಂಡ್‌ನಲ್ಲಿ ಇದೇ ʻಕಾಂತಾರ; ಚಾಪ್ಟರ್‌ 1ʼ ಇದೀಗ ಕಹಳೆ ಮೊಳಗಿಸಲು ಸಿದ್ಧವಾಗಿದೆ.

ಕಾಂತಾರ ಚಾಪ್ಟರ್ 1 ಚಿತ್ರದ ಪ್ರೀಮಿಯರ್ ಹಲವು ಕಡೆ ಇದೆ. ಆದರೆ, ಯುಕೆ ಅಲ್ಲಿ ಈ ಚಿತ್ರದ ಪ್ರೀಮಿಯರ್ ಸಂಜೆ 7 ಗಂಟೆಗೆ ಇದೆ.ವಿಶೇಷವೆಂದ್ರೆ ಯುಕೆ ಅಲ್ಲಿ ನಡೆಯುತ್ತಿರೋ ಪ್ರೀಮಿಯರ್ ಶೋಗೆ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೋಗುತ್ತಿದ್ದಾರೆ. ಅಲ್ಲಿಯೇ ಚಿತ್ರವನ್ನ ನೋಡಲಿದ್ದಾರೆ. ಹೀಗಂತ ಯುಕೆ ಅಲ್ಲಿ ವಿತರಿಸ್ತಿರೋ Laughing Water Entertainment ಈ ಒಂದು ವಿಷಯವನ್ನ ಅಧಿಕೃತವಾದ ತಮ್ಮ ಪೇಜ್ ಅಲ್ಲಿಯೇ ಹೇಳಿಕೊಂಡಿದೆ.

ಇನ್ನುಳಿದಂತೆ ಅಕ್ಟೋಬರ್ 2ರಂದು ಕಾಂತಾರ ಸಿನಿಮಾ ಇಡೀ ಭಾರತದಲ್ಲಿಯೂ ಸೇರಿದಂತೆ, ಅನೇಕ ದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಮಾತ್ರವಲ್ಲದೇ, ಸ್ಪ್ಯಾನಿಷ್ ಭಾಷೆಯಲ್ಲಿಯೂ ಬಿಡುಗಡೆಯಾಗುತ್ತಿದೆ ಎಂಬುದು ವಿಶೇಷ.

ಭಾರತದಲ್ಲಿ ಸಿನಿಮಾ ಪ್ರಚಾರಗಳು ಹೇಗಿರುತ್ತವೆ ಎಂಬುದು ಬಹುತೇಕರಿಗೆ ತಿಳಿದ ವಿಷಯ. ಅದೇ ರೀತಿ ವಿದೇಶದಲ್ಲಿ ಹೇಗಿರಲಿದೆ ಎಂಬ ಕೌತುಕ ಎಲ್ಲರಿಗೂ ಇರುತ್ತೆ. ಅದರಂತೆ, ಇಂಗ್ಲೆಂಡ್‌ನಲ್ಲಿ ʻಲಾಫಿಂಗ್‌ ವಾಟರ್‌ ಎಂಟರ್‌ಟೈನ್‌ಮೆಂಟ್‌ʼ ಸಂಸ್ಥೆ ಅಷ್ಟೇ ಭರ್ಜರಿಯಾಗಿಯೇ ಪ್ರಚಾರ ಮಾಡುತ್ತಿದೆ. ಅಲ್ಲಿನ ಡಬಲ್‌ ಡೆಕ್ಕರ್‌ ಬಸ್‌ಗಳ ಮೇಲೆ ʻಕಾಂತಾರ ಚಾಪ್ಟರ್‌ 1ʼ ಚಿತ್ರದ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಅಷ್ಟೇ ಅಲ್ಲ, ಟ್ಯಾಕ್ಸಿಗಳ ಮೇಲೆಯೂ ಸ್ಟಿಕ್ಕರ್‌ಗಳು ಮಿಂಚುತ್ತಿವೆ. ಈ ಮೂಲಕ ಇಂಗ್ಲೆಂಡ್‌ ನೆಲದಲ್ಲಿಯೂ ಕನ್ನಡದ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

‘ಕಾಂತಾರ ಚಾಪ್ಟರ್ 1’ ಪ್ರೀಮಿಯರ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾಗವಹಿಸಿರುವುದು ಚಿತ್ರತಂಡಕ್ಕೆ ಮತ್ತು ಕನ್ನಡ ಪ್ರೇಕ್ಷಕರಿಗೆ ಖುಷಿಯ ವಿಚಾರ. ಈ ಮೂಲಕ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಾಂತಾರ ಚಾಪ್ಟರ್‌ 1 ಸಿನಿಮಾ ನೋಡಲು ಬರುವ ಅಲ್ಲಿನ ಕನ್ನಡಿಗರಿಗೆ ಚಿಯರ್ಸ್‌ ಹೇಳಲಿದ್ದಾರೆ. ಅಕ್ಟೋಬರ್ 2ರಂದು ಬಹುಭಾಷಾ ಬಿಡುಗಡೆಯಾಗಲಿರುವ ಈ ಸಿನಿಮಾ ಭಾರತೀಯ ಚಲನಚಿತ್ರರಂಗದಲ್ಲಿ ಮತ್ತೊಂದು ಮೈಲಿಗಲ್ಲಾಗುವ ನಿರೀಕ್ಷೆಯಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss