Film News: ಹುಟ್ಟುಹಬ್ಬ ಸಂಭ್ರಮ ಮುಗಿಸಿ ಇದೀಗ ರಿಷಭ್ ಶೆಟ್ಟಿ ಭರ್ಜರಿ ಅಪ್ಡೇಟ್ ಒಂದನ್ನು ನೀಡಿದ್ದಾರೆ.
ಸಿನಿಮಾದ ಬರವಣಿಗೆಯ ಕೆಲಸವನ್ನು ಮುಗಿಸಿರುವೆ. ಲೋಕೇಶನ್ ಹುಡುಕಾಟ ನಡೆದಿದೆ. ಕಲಾವಿದರ ಆಯ್ಕೆಯಾಗಬೇಕಿದೆ. ಈ ಸಿನಿಮಾದ ಪಾತ್ರಕ್ಕಾಗಿ ಮತ್ತಷ್ಟು ಉದ್ದದ ಗಡ್ಡ ಬಿಡಬೇಕು. ಮಳೆಯಲ್ಲೇ ಚಿತ್ರೀಕರಣ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇನೆ. ಮುಹೂರ್ತ, ಶೂಟಿಂಗ್ ಮತ್ತಿತರ ಬಗ್ಗೆ ನಿರ್ಮಾಣ ಸಂಸ್ಥೆಯೇ ಮಾಹಿತಿ ನೀಡಲಿದೆ ಎಂದಿದ್ದಾರೆ ರಿಷಬ್ ಶೆಟ್ಟಿ.
ಸಿನಿಮಾಗಳ ಜೊತೆಗೆ ಸಮಾಜ ಸೇವೆಗೂ ರಿಷಬ್ ಅಂಡ್ ಟೀಮ್ ರೆಡಿಯಾಗಿದೆ. ಈ ಕುರಿತು ರಿಷಬ್ ಶೆಟ್ಟಿ ಸ್ನೇಹಿತ ಪ್ರಮೋದ್ ಶೆಟ್ಟಿ ಮಾತನಾಡುತ್ತಾ, ಹಲವಾರು ವರ್ಷಗಳಿಂದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅದರ ಜವಾಬ್ದಾರಿಯನ್ನು ರಿಷಬ್ ವಹಿಸುತ್ತಿದ್ದರು, ಆದರೆ ಯಾರಿಗೂ ಬಹಿರಂಗ ಪಡಿಸಿರಲಿಲ್ಲ’ ಎಂದು ರಿಷಬ್ ಶೆಟ್ಟಿ ಅವರ ಸಮಾಜಮುಖಿ ಕಾರ್ಯಗಳ ಬಗ್ಗೆ ವಿವರಣೆ ನೀಡಿದ್ದಾರೆ.
Love story : ಹೊಸ ದಾಖಲೆ ನಿರ್ಮಿಸಲು ಹೊರಟ ಸಂಜು: 55 ನಿಮಿಷದ ಒಂದು ಪ್ರೇಮಕಥೆ
Dhananjay: ‘ಅಪರೂಪ’ ಸಿನಿಮಾದ ಟ್ರೇಲರ್ ರಿಲೀಸ್..ಹೊಸಬರಿಗೆ ಡಾಲಿ ಧನಂಜಯ್ ಸಾಥ್..