Film News : ಕಾಂತಾರ ಸಿನಿಮಾ ಶೆಟ್ರಿಗೆ ಜಗದಗಲ ಭರ್ಜರಿ ಸಕ್ಸಸ್ ಕೊಟ್ಟ ಸಿನಿಮಾವದು ಈಗ ಅದರ ಮುಂದುವರೆದ ಭಾಗವಾಗಿ ಕಾಂತಾರ 2 ಕೂಡಾ ಬರ್ತಾ ಇದೆ ಅನ್ನೋ ವಿಚಾರ ಗೊತ್ತಿರೋದೆ. ಆದ್ರೆ ಎಲ್ಲಾ ತಯಾರಿಯಲ್ಲಿರೋ ಚಿತ್ರ ತಂಡ ಇದೀಗ ಮತ್ತೆ ಸಿನಿಮಾ ನಾಯಕಿ ಹುಡುಕೋ ತರಾತುರಿಯಲ್ಲಿದೆ. ಹಾಗಿದ್ರೆ ಕಾಂತಾರಾ 2 ನಲ್ಲಿ ಸಪ್ತಮಿ ಗೌಡ ಇರಲ್ವಾ? ಯಾರಾಗ್ತಾರೆ ಹೀರೋಯಿನ್ ಹೇಳ್ತೀವಿ ನೋಡಿ….!
ಕಾಂತಾರ ಸಿನಿಮಾ ಜಗತ್ತಿನಾದ್ಯಂತ ಪ್ರತಸಿದ್ದಿ ಪಡೆದ ಸಿನಿಮಾವಿದು. ಅಭಿಮಾನಿಗಳಂತೂ ಕಾಂತಾರ 2 ಯಾವಾಗ ಬರುತ್ತೆ ಅನ್ನೋ ಕಾತರದಲ್ಲಿ ಕಾಯ್ತಾ ಇದ್ದಾರೆ . ಇನ್ನೇನು ಕಾಂತಾರ 2 ಕಥೆ ಕೂಡಾ ಸಿದ್ದವಾಗಿದೆ. ಆದ್ರೆ ಇದೀಗ ಚಿತ್ರ ತಂಡಕ್ಕೆ ತಲೆನೋವಾಗಿರೋ ವಿಚಾರವೇ ಹೀರೋಯಿನ್ ಹುಡುಕಾಟ.
ಕಾಂತಾರ 2 ಸಾಹಸಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿರೋ ಶೆಟ್ರು ಈಗ ತನ್ನ ಸಿನಿಮಾದ ನಾಯಕಿ ಆಯ್ಕೆ ಕಸರತ್ತಿನಲ್ಲಿದ್ದಾರೆ. ಎಂದು ಚಿತ್ರ ತಂಡ ಹೇಳಿದೆ. ಕಾಂತಾರ 2 ಸಿನಿಮಾ ಪ್ರೀಕ್ವೆಲ್ ಕತೆ ಇರುತ್ತೆ. ಈ ಸಿನಿಮಾದಲ್ಲಿ ಕಾಡು ಬೆಟ್ಟ ಶಿವನ ತಂದೆಯ ಸುತ್ತ ಕಥೆ ಹೆಣೆಯಲಾಗ್ತಿದೆ ಎಂಬುವುದು ವಿಶೇಷ.
ಹೀಗಾಗಿ ಈ ಸಿಂಗಾರ ಸಿರಿ ಸಪ್ತಮಿ ಗೌಡ ಕಾಂತಾರ 2 ಚಿತ್ರದಲ್ಲಿ ಇರೋದಿಲ್ವಂತೆ. ಹಾಗಾದ್ರೆ ಕಾಡು ಬೆಟ್ಟ ಶಿವನ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳೋ ರಿಷಬ್ ಶೆಟ್ಟಿಗೆನಾಯಕಿ ಯಾರು ಅನ್ನೋದೆ ಈಗ ಕಾಡ್ತಿರೋ ಪ್ರಶ್ನೆ. ಕಾಂತಾರ ಸಿನಿಮಾದಲ್ಲಿ ಕಾಡು ಬೆಟ್ಟದ ಶಿವನ ತಾಯಿ ಕಮಲಾ ಪಾತ್ರದಲ್ಲಿ ಮಾನಸಿ ಸುದೀರ್ ನಟಿಸಿದ್ದರು.,ಆದ್ರೆ ಇದನ್ನ ರಿಷಬ್ ಹೇಗೆ ಮ್ಯಾಚ್ ಮಾಡ್ತಾರೆ ಅಂತ ಎಲ್ಲರ ಪ್ರಶ್ನೆ ಕಾಡ್ತಿದೆ. ಆದ್ರೆ ಕಾಂತಾರ 2 ಸಿನಿಮಾದಲ್ಲಿ ಈ ಹೀರೋಯಿನ್ ಸ್ಟೋರಿಯೇ ಟ್ವಿಸ್ಟ್ ಅಂತೆ. ಅದು ಹೇಗೆ ಅನ್ನೋದನ್ನ ಶೆಟ್ರು ಭರ್ಜರಿಯಾಗಿ ಪ್ಲಾನ್ ಮಾಡಿದ್ದಾರಂತೆ. ಆ ಟ್ವಿಸ್ಟ್ ಆ್ಯಂಡ್ ಟರ್ನ್ಗೆ ಸೂಟ್ ಆಗುವಂತಹ ನಾಯಕಿ ಹುಡುಕಾಟದಲ್ಲಿದೆಯಂತೆ ಕಾಂತಾರ2 ಟೀಂ.
ಇನ್ನು ಕಾಂತಾರ 2 ಗೆ ಮಲೆಯಾಳಿ ಬೆಡಗಿ ನಾ ಹೀರೋಯಿನ್ ಮಾಡ್ಬೇಕು ಅನ್ನೋ ಸಾಹಸದಲ್ಲಿದ್ದಾರೆ ಶೆಟ್ರು. ಆದ್ರೆ 5 ಜನರ ಹೆಸರು ಪಟ್ಟಿಯಲ್ಲಿವೆಯಂತೆ ಇನ್ನೂ ಯಾರಾಗ್ತಾರೆ ಅನ್ನೋದನ್ನು ಟೀಂ ಇದುವರೆಗೂ ರಿವೀಲ್ ಮಾಡಿಲ್ಲ. ಹಾಗೆನೆ ಒಂದು ವೇಳೆ ಮಲೆಯಾಳಿ ಹೀರೋಯಿನ್ ಸಾಧ್ಯವಾಗಿಲ್ಲ ವೆಂದರೆ ಮತ್ತೆ ಕನ್ನಡದ ನಟಿಗೆ ಮನೆ ಹಾಕ್ತಾರಂತೆ. ಆದ್ರೆ ಇನ್ನೂ ಯಾರು ಹೀರೋಯಿನ್ ಅನ್ನೋದೆ ನಿಗೂಢ.
ಒಟ್ಟಾರೆ ಕಾಂತಾರ 2 ಯಾವಾಗ ತೆರೆ ಮೇಲೆ ಬರುತ್ತೋ ಅನ್ನೋ ಕೌತುಕದಲ್ಲೇ ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ದಾರೆ.