Film News : ಹೆಸರಾಂತ ನಟಿಯೊಬ್ಬರು ಕೋತಿ ಕೈಯಲ್ಲಿ ಮೊಬೈಲ್ ಕೊಟ್ಟು ಸೆಲ್ಫಿ ತೆಗೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಇದಕ್ಕೆ ಫ್ಯಾನ್ಸ್ ಗಳ ಕಮೆಂಟ್ ಗಳು ಕ್ಯೂಟ್ ಆಗಿವೆ ಮೂಡಿಬಂದಿವೆ…ಕೋತಿ ಕೈಯಲ್ಲಿ ಮೊಬೈಲ್ ಏನೋ ಕೊಟ್ರು ಮುಂದೇನಾಯ್ತು…ನೀವೇ ನೋಡಿ………
ತೆಲುಗಿನ ಹೆಸರಾಂತ ನಟಿ ಸಮಂತಾ ಸದಾ ಸೋಶಿಯಲ್ ಮೀಡಿಯಾದಲ್ಲಿ ಏಕ್ಟಿವ್ ಆಗಿರೋ ಸಮಂತಾ ಅನೇಕ ಫೋಟೋಗಳನ್ನು ಅಪ್ ಲೋಡ್ ಮಾಡ್ತಾನೆ ಇರ್ತಾರೆ, ಇತ್ತೀಚೆಗೆ ಬಾಲಿ ಪ್ರವಾಸ ಕೈಗೊಂಡ ನಟಿ ಇದೀಗ ಕೋತಿ ಜೊತೆಗಿನ ಫೋಟೋ ಶೇರ್ ಮಾಡಿ ಸುದ್ದಿಯಲ್ಲಿದ್ದಾರೆ.
ನಟಿ ಸಮಂತಾ ಇಂಡೋನೇಷಿಯಾದ ಬಾಲಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಸುಂದರ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಬಾಲಿ ಪ್ರವಾಸದ ಸಮಯದಲ್ಲಿ, ಉಲುವಾಟು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಸನ್‌ಗ್ಲಾಸ್ ಧರಿಸಿರುವ ಫೋಟೋ ಶೇರ್ ಮಾಡಿದ್ದಾರೆ. ಆದರೆ ಈ ಚಿತ್ರವನ್ನು ಸೂಕ್ಷ್ಮವಾಗಿ ನೋಡಿದರೆ ಆ ಫೋಟೋಶೂಟ್ ಮಾಡಿರುವ ಸಮಯದಲ್ಲಿ ಅವರ ಹಿಂಭಾಗದಲ್ಲಿ ಒಂದು ಕೋತಿಯನ್ನು ನೋಡಬಹುದು. ದುಬಾರಿ ಸನ್‌ಗ್ಲಾಸ್ ಜೊತೆ ಫೋಟೋಶೂಟ್ ಮಾಡಿಸುತ್ತಿದ್ದಂತೆಯೇ ಅದನ್ನು ಕೋತಿ ಕದ್ದುಕೊಂಡು ಎಸ್ಕೇಪ್ ಆಗಿದೆ .
ಇದಕ್ಕೂ ಮುನ್ನ ಕೋತಿಯ ಜೊತೆ ಸಮಂತಾ ಹಲವಾರು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಅದನ್ನು ಶೇರ್ ಮಾಡಿದ್ದಾರೆ. ಇಷ್ಟಾಗುತ್ತಿದ್ದಂತೆಯೇ ಕೋತಿ ತಮ್ಮ ಸನ್ಗ್ಲಾಸ್ನೊಂದಿಗೆ ಪರಾರಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ನಟಿ, ಮಂಗನ ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ ಕೂಡಾ. ಮಂಗನನ್ನು ಮೇಲೆ ಕೂರಿಸಿಕೊಂಡು ಗಾಗಲ್ಸ್ ಹಾಕಿ ಫನ್ನಿಯಾಗಿ ಪೋಸ್ ಕೊಟ್ಟಿದ್ದಾರೆ. ಈ ಸಂದರ್ಭ ನಟಿ ವೈಟ್ ಕ್ಯಾಪ್ ಕೂಡ ಧರಿಸಿಕೊಂಡಿದ್ದರು. ಇನ್ನೊಂದು ಚಿತ್ರದಲ್ಲಿ ಮಂಗ ತಾನೆ ಮೊಬೈಲ್ ಹಿಡಿದುಕೊಂಡು ಸೆಲ್ಫಿ ಕ್ಲಿಕ್ ಮಾಡಿದೆ. ಅದಕ್ಕೆ ಸಮಂತಾ ಸಕತ್ ಪೋಸ್ ಕೊಟ್ಟಿದ್ದಾರೆ, ಕೋತಿ ಕೂಡಾ ಕ್ಯಾಮೆರಾ ಬಟನ್ ಕ್ಲಿಕ್ ಮಾಡುತ್ತಾ ಬಾಯ್ತೆರೆದುಕೊಂಡು ಪೋಸ್ ಕೊಟ್ಟಿದೆ. ಇದಕ್ಕೆ ಅಭಿಮಾನಿಗಳ ಕಮೆಂಟ್ ಗಳೂ ಜೋರಾಗಿಯೇ ಬರುತ್ತಿದೆ. ಕೆಲವರು ಸಮಂತಾ ಗೆ ಚೆನ್ನಾಗಿದೆ ಎಂದು ಕಮೆಂಟ್ ನೀಡಿದರೆ ಮತ್ತೆ ಕೆಲವರು ಕೋತಿ ತುಂಬಾ ಲಕ್ಕಿ ಎಂದು ಕಮೆಂಟ್ ಮಾಡಿದ್ದಾರೆ.
Chamundi Hills : ಚಾಮುಂಡಿ ತಾಯಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್ ಕುಮಾರ್
Darling Krishna:ಸಿನಿಮಾ ಪ್ರಚಾರಕ್ಕೆ ಮೆಟ್ರೋ ಪ್ರಯಾಣ ಮಾಡಿದ ಡಾರ್ಲಿಂಗ್ ಕೃಷ್ಣ