Film News : ಕಾಂತಾರಾ ವನ್ ಜಗದಗಲ ವ್ಯಾಪಿಸಿ ಯಶಸ್ಸು ಕಂಡ ಸಿನಿಮಾ ಇದೀಗ ಚಿತ್ರ ತಂಡ ಕಾಂತಾರಾ 2 ವಿಚಾರವಾಗಿ ಮತ್ತೊಂದ್ ಬಿಗ್ ಸುದ್ದಿ ನೀಡಿದೆ. ಬಿಗ್ ಬಜೆಟ್ ನಲ್ಲಿ ಕಾಂತಾರ 2 ಚಿತ್ರತಂಡ ನಿರ್ಮಾಣಕ್ಕೆ ರೆಡಿಯಾಗಿದೆ. ಇದರ ಬಜೆಟ್ ಕೇಳಿದ್ರೆ ನೀವು ಖಂಡಿತಾ ಶಾಕ್ ಆಗ್ತೀರಾ ಹಾಗಿದ್ರೆ ಬಜೆಟ್ ಎಷ್ಟು ಗೊತ್ತಾ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್….
ಕಳೆದ ವರ್ಷ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ರುದ್ರತಾಂಡವ ನಡೆಸಿದ್ದ ಸಿನಿಮಾ ‘ಕಾಂತಾರ’. ಇದೀಗ ಈ ಸಿನಿಮಾದ ಪ್ರಿಕ್ವೇಲ್ ಕೆಲಸಗಳು ಆರಂಭವಾಗಿವೆ. ಹೊಂಬಾಳೆ ಫಿಲ್ಮ್ಸ್ ‘ಕಾಂತಾರ 2’ ಸಿನಿಮಾವನ್ನು ಮೊದಲ ಪಾರ್ಟ್‌ಗಿಂತ ಹತ್ತಾರು ಪಟ್ಟು ಅದ್ದೂರಿಯಾಗಿ ನಿರ್ಮಾಣ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದೆ. ಇದರ ಬಜೆಟ್ ಕೇಳಿದರೆ ನಿಮಗೆ ಅಚ್ಚರಿಯಾಗುವುದು ಖಚಿತ.
ಕಾಂತಾರ 2 ಚಿತ್ರದ ಬಜೆಟ್ 150 ಕೋಟಿ ರೂ. ಎನ್ನಲಾಗುತ್ತಿದೆ. ಹೌದು, ‘ಕಾಂತಾರ’ ಸಿನಿಮಾವನ್ನು 10-15 ಕೋಟಿ ರೂಪಾಯಿಗಳಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಬಾಕ್ಸ್ ಆಫೀಸ್‌ನಲ್ಲಿ ಆ ಸಿನಿಮಾ ಗಳಿಸಿದ್ದು ಭರ್ತಿ 400+ ಕೋಟಿ ರೂಪಾಯಿ. ಕನ್ನಡದಲ್ಲಿ ಮೊದಲು ತೆರೆಕಂಡರೂ, ನಂತರ ಪರಭಾಷೆಗೆ ಡಬ್ ಆಗಿ, ಅಲ್ಲಿಯೂ ತೆರೆಕಂಡು ದೊಡ್ಡ ದಾಖಲೆಯನ್ನೇ ಸೃಷ್ಟಿಸಿತ್ತು ‘ಕಾಂತಾರ’ ಸಿನಿಮಾ ಹಾಗಾಗಿ, ‘ಕಾಂತಾರ 2’ ಮೇಲೆ ಭಾರಿ ನಿರೀಕ್ಷೆಗಳಿವೆ. ಆ ಕಾರಣಕ್ಕಾಗಿಯೇ ದೊಡ್ಡಮಟ್ಟದಲ್ಲಿ ಸಿನಿಮಾ ಮಾಡಲು ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ.
ನಟ ರಿಷಬ್ ಶೆಟ್ಟಿ ಅವರು ‘ಕಾಂತಾರ 2’ ಚಿತ್ರಕ್ಕಾಗಿ ಭಾರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಅವರ ದೇಹತೂಕ ಕಮ್ಮಿ ಆಗಲಿದೆ. ಹೌದು, ‘ಕಾಂತಾರ 2’ ಚಿತ್ರದಲ್ಲಿ ರಿಷಬ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ 11 ಕೆಜಿ ದೇಹತೂಕವನ್ನು ಕಮ್ಮಿ ಮಾಡಿಕೊಳ್ಳಲಿದ್ದಾರೆ. ಇನ್ನು, ‘ಕಾಂತಾರ 2’ ಕಥೆಯು ಕ್ರಿ ಶ 400ರಲ್ಲಿ ನಡೆಯಲಿದೆಯಂತೆ. ಈ ವಿಚಾರವೇ ಈಗ ಬಹಳ ಕುತೂಹಲ ಮೂಡಿಸಿದೆ.
ಕಥೆ & ಚಿತ್ರಕಥೆ ಬರೆಯುವ ಸಲುವಾಗಿ ರಿಷಬ್ ಶೆಟ್ಟಿ ಮತ್ತು ಚಿತ್ರದ ಬರಹಗಾರರಾದ ಅನಿರುದ್ಧ್ ಮಹೇಶ್, ಶನೀಲ್ ಗುರು & ಟೀಮ್ ಈಗಾಗಲೇ ಮಂಗಳೂರಿನಲ್ಲಿ ಬೀಡುಬಿಟ್ಟಿದೆ. ಮುಖ್ಯವಾಗಿ ಮಂಗಳೂರಿನಲ್ಲೇ ವಾಸ್ತವ್ಯ ಹೂಡುವುದಕ್ಕೂ ಒಂದು ಕಾರಣವಿದೆ. ‘ಕಾಂತಾರ’ ಕಥೆಯು ಕರಾವಳಿ ಹಿನ್ನೆಲೆಯಲ್ಲಿ ಸಾಗುವುದರಿಂದ, ತಂಡ ಕೂಡ ಅಲ್ಲಿಯೇ ಉಳಿದುಕೊಂಡಿದೆ. ಸದ್ಯ ಈ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ ರಿಲೀಸ್ ಪ್ಲ್ಯಾನ್ ಏನು ಎಂಬ ಬಗ್ಗೆ ಸದ್ಯಕ್ಕಂತೂ ಮಾಹಿತಿ ಇಲ್ಲ.
Dharshan : ಐತಿಹಾಸಿಕ ಸಿನಿಮಾ ಮಾಡ್ತಾರಾ ದರ್ಶನ್..?! ಏನಿದು ಪೋಸ್ಟರ್..?!