ಟ್ವೀಟ್ ನಿಂದ ಲಕ್ಷಾಂತರ ಹಣ ಕಳೆದುಕೊಂಡೆ ಎಂದ ಕಪಿಲ್ ಶರ್ಮಾ

ಕಪಿಲ್ ಶರ್ಮಾ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ, ಹಿಂದಿಯ ಟಾಕ್ ಶೋ ರಿಯಾಲಿಟಿ ಶೋ ಹಾಗು ಇನ್ನಿತರ ಹಿಂದಿಯ ಹಲವಾರು ಕಾರ್ಯಕ್ರಮಗಳಲ್ಲಿ ತುಂಬಾ ಫೇಮಸ್ ಆಗಿದ್ದಾರೆ , ಮತ್ತು ಎಲ್ಲಾ ಸೆಲೆಬ್ರಿಟಿಗಳಿಗೂ ನಗೆ ಹಬ್ಬ ಹರಿಸಿ ರಿಯಾಲಿಟಿ ಶೋಗಳನ್ನು ನಡೆಸಿಕೊಂಡು ಬಂದಿದ್ದಾರೆ. ಆದರೆ ಅವರು ಒಂದು ವಿಷಯವನ್ನು ಹೊರಹಾಕಿದ್ದಾರೆ, ಅದೇನೆಂದರೆ ಒಂದು ಟ್ವೀಟ್ ನಿಂದ ಲಕ್ಷಾಂತರ ಹಣ ಕಳೆದುಕೊಂಡೆ ಎಂದಿದ್ದಾರೆ. ಉತ್ತುಂಗಕ್ಕೇರಿದ ಕಪಿಲ್ ಶರ್ಮಾ ಮೇಲೆ ಬಿಜೆಪಿ ಬೆಂಬಲಿಗರು ಒಮ್ಮೆ ತೀವ್ರವಾಗಿ ಆಕ್ರೋಶ ಹೊರಹಾಕಿದ್ದರು. ಅದಕ್ಕೆ ಕಾರಣವಾಗಿದ್ದು ಒಂದು ಟ್ವೀಟ್ ಅಷ್ಟೆ. ಕಪಿಲ್ ಶರ್ಮಾ ಮಾಡಿದ ಒಂದು ಟ್ವೀಟ್‌ನಿಂದಾಗಿ ದೊಡ್ಡ ವಿವಾದವೇ ಆಗಿತ್ತು. ಕಪಿಲ್ ಶರ್ಮಾ ಮೇಲೆ ಬಿಜೆಪಿ ಬೆಂಬಲಿಗರು ಮಾತ್ರವಲ್ಲ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಮುಗಿಬಿದ್ದಿದ್ದರು. ಒಂದು ಟ್ವೀಟ್‌ನಿಂದ ಲಕ್ಷಾಂತರ ರುಪಾಯಿ ಹಣವನ್ನೂ ಕಪಿಲ್ ಕಳೆದುಕೊಂಡಿದ್ದರು. ಇದೀಗ ನೆಟ್‌ಫ್ಲಿಕ್ಸ್‌ಗಾಗಿ ‘ಐ ಆಮ್ ನಾಟ್ ಡನ್ ಯೆಟ್’ ಹೆಸರಿನ ಹೊಸ ಶೋ ನಡೆಸಿಕೊಡುತ್ತಿರುವ ಕಪಿಲ್ ಶರ್ಮಾ, ತಮ್ಮ ಆ ಟ್ವೀಟ್‌ ಬಗ್ಗೆ ಮಾತನಾಡಿದ್ದಾರೆ. ಈಗೆ ಹೇಳುವ ಮೂಲಕ ಒಂದು ಟ್ವೀಟ್ ನೀಂದ ಇಷ್ಟೆಲ್ಲ ರಾದ್ದಾಂತವನ್ನು ಅನುಭವಿಸಬೇಕಾಯಿತು ಎಂದು ಹೇಳಿದ್ದಾರೆ.

About The Author