Tuesday, April 15, 2025

Latest Posts

ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರ

- Advertisement -

ಇಂದು ಬೆಳಿಗ್ಗೆ 11.30 ಕರ್ನಾಟಕ ರಾಜ್ಯ ವಿದಾನಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಲಿದೆ. ರಾಜ್ಯದ 224 ಕ್ಷೇತ್ರಗಳ್ಲಿ ಒಂದೇ ಬಾರಿಗೆ ಚುನಾವಣೆ ನಡೆಸುವ ಸಾಧ್ಯತೆ ಇದ್ದು. ಈಗಾಗಲೆ ನೀತಿ ಸಂಹಿತೆ ಜಾರಿಯಾಗಿದೆ.

ಇಷ್ಟು ದಿನಗಳ ಕಾಲ ಎಲ್ಲಾ ಪಕ್ಷಗಳು ಸಭೆ ಸಮಾರಂಭ ಮಾಡುವ ಮೂಲಕ ಚುನಾವಣಾ ಪ್ರಚಾರದಲ್ಲಿ ಕೈಗೊಳ್ಳುತಿದ್ದರು.ಜೊತೆ ಜೊತೆಗೆ ಆಡಳಿತ ಪಕ್ಷದವರು ಸರ್ಕಾವನ್ನು ಸಹ ನಡೆಸುತಿದ್ದರು. ಆದರೆ ಈಗ ನೀತಿ ಸಂಹಿತೆ ಜಾರಿಯಾದ ಹಿನ್ನಲೆಲ್ಲಿ ಅಧಿಕಾರಕ್ಕೆ ಬ್ರೇಕ್ ಹಾಕಿ ತಮ್ಮ ಪಕ್ಷವನ್ನು ಗೆಲ್ಲಿಸುವ ಹುನ್ನಾರವನ್ನು ಹೊಂದಿದ್ದಾರೆ. ಇಂದು ಚುನಾವಣಾ ದಿನಾಂಕ ಘೋಷಣೆಯಾಗಲಿದ್ದು ಇಂದಿನಿಂದ ರಾಜ್ಯದ ಎಲ್ಲಾ ಪಕ್ಷಗಳು ಚುನಾವಣಾ ಪ್ರಚಾರವನ್ನು ಚುರುಕುಗೊಳಿಸಲಿವೆ. ಹಗಲು ರಾತ್ರಿ ಎನ್ನದೆ ಪ್ರಚಾರ ಮಾಡಿ ಜನರ ಮನವೊಲಿಸಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಮಾಡಬೇಕು ಎನ್ನುವುದು ಮಾತ್ರ ಅವರ ಗುರಿಯಾಗಿದೆ.

ಚುನಾವಣಾ ದಿನಾಂಕ ಇಂದು ಘೋಷಣೆಯಾಗಲಿದ್ದು ಈಗಾಗಲೆ ಕಾಂಗ್ರೆಸ್ 124 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ಇನ್ನು ಉಳಿದ100 ಕ್ಷೇತ್ರಗಳ ಅಭ್ಯರ್ಥಿಗಳನ್ನು ಚುನಾವಣಾ ನಂತರ ಬಿಡುಗಡೆ ಮಾಡಲಿದೆ.

ಅದೇ ರೀತಿ ಬಿಜೆಪಿಯವರು ಇದುವರೆಗೂ ಯಾವೊಂದು ಕ್ಷೇತ್ರದಲ್ಲಿ ಯಾವೊಬ್ಬ ಅಭ್ಯರ್ಥಿಯನ್ನು ಇದುವರೆಗೂ ಘೋಷಣೆ ಮಾಡದೆ ಇದ್ದು ಬಿಜೆಪಿ ಪಕ್ಷವೂ ಸಹ ಎಲ್ಲಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಒಂದೆ ಸಾರಿ ಬಿಡುಗಡೆ ಮಾಡಲಾಗುವುದು ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಹೇಳಿದರು.

ಮಾಡಬಾರದ್ದು ಮಾಡಿದ ಮಾಡಾಳ್ ರನ್ನು ಸೇಫ್ ಮಾಡಲು ಮುಂದಾಗಿರುವ ಕಮಲ ಪಡೆ

ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಹಾವೇರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎಂ ಎಂ ಹಿರೆಮಠ್

ನೋಡ ನೋಡುತ್ತಿದ್ದಂತೆ ಭಸ್ಮವಾದ ಕಾರ್.. ಕಾರಿನಲ್ಲಿದ್ದವರು ಸುರಕ್ಷಿತ..

- Advertisement -

Latest Posts

Don't Miss