Saturday, July 5, 2025

Latest Posts

‘ಕರಾಟೆ ಕಿಂಗ್’ ಶಂಕರ್ ನಾಗ್ 31ನೇ ಪುಣ್ಯಸ್ಮರಣೆ..!

- Advertisement -

www.karnatakatv.net : ಶಂಕರ್‌ನಾಗ್ ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕಲಾವಿದ, ಬರಿ ನಟನೆಯಲ್ಲಿ ಮಾತ್ರವಲ್ಲದೆ ನಿರ್ದೇಶನದ ಮೂಲಕ ಕೂಡ ಯಶಸ್ಸು ಕಂಡ ವ್ಯಕ್ತಿ. ಆ ಕಾಲಕ್ಕೆ ವಿಭಿನ್ನರೀತಿಯ ಚಿತ್ರಗಳನ್ನು ಮಾಡಿ ತಮ್ಮ ಚಿಂತನೆ ಹಾಗೂ ದೂರದೃಷ್ಟಿಯ ಬಗ್ಗೆ ಜನರಿಗೆ ತಿಳಿಸಿದ್ದರು. ಇಂತಹ ಅದ್ಭುತ ಪ್ರತಿಭೆ ನಮ್ಮನ್ನಗಲಿ ಇಂದಿಗೆ 31 ವರ್ಷಗಳು ಕಳೆದಿವೆ.

ಇಡೀ ಭಾರತಿಯ ಚಿತ್ರರಂಗದಲ್ಲೇ ಮೊದಲಬಾರಿಗೆ ಅಂಡರ್ ವಾಟರ್ ಚಿತ್ರೀಕರಣ ಮಾಡಿದ ಕೀರ್ತಿ ಶಂಕರ್ ನಾಗ್ ರವರಿಗೆ ಸಲ್ಲುತ್ತೆ.  ಅದೂ ವಿದೇಶವಾದ ಮಾಲ್ಡಿವ್ಸ ನಲ್ಲಿ ಶಂಕರ್ ನಾಗ್ ಅಂಡರ್ ವಾಟರ್ ಶೂಟಿಂಗ್ ಮಾಡಿ ಸಾಕಷ್ಟು ಕೀರ್ತಿ ಗಳಿಸಿದ್ರು.  ಕಡಿಮೆ ಅವದಿಯಲ್ಲಿ ನಟನೆ, ನಿರ್ದೇಶನ ಸೇರಿದಂತೆ ಒಟ್ಟು  91 ಸಿನಿಮಾಗಳನ್ನು ಮಾಡಿದ್ದ ಶಂಕರ್‌ನಾಗ್, ಆಕ್ಸಿಡೆಂಟ್, ಸ್ವಾಮಿ , ವಾಚ್‌ಮ್ಯಾನ್, ಚಿತ್ರಗಳಿನ ತಮ್ಮ ಅದ್ಬುತ ನಟನೆಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ರು. ಬೆಳ್ಳಿಪರದೆ ಮಾತ್ರವಲ್ಲದೆ ಕಿರುತೆರೆಯಲ್ಲೂ ಶಂಕರ್ ನಾಗ್  ನಿರ್ದೇಶನ ಮಾಡಿದ್ದಾರೆ. ಗೀತಾ,ಮಿಂಚಿನ ಓಟ, ಬೆಂಕಿ-ಬಿರುಗಾಳಿ, ಹೊಸ ಜೀವನ, ಹಾಗೂ ನೋಡಿಸ್ವಾಮಿ ನಾವಿರೋದು ಹೀಗೆ ಚಿತ್ರಗಳಲ್ಲಿನ ಶಂಕರ್ ನಾಗ್ ಪಾತ್ರ ಇಂದಿಗೂ ಜನರ ಮನದಲ್ಲಿ ಉಳಿದಿದೆ.

“ಮಾಲ್ಗುಡಿಡೇಸ್” ಎಂಬ ಕಿರುಚಿತ್ರ ಸರಣಿ ಮಾಡಿ ಪ್ರೇಕ್ಷಕರ ಗಮನ ಸೆಳೆದಿದ್ದ ಶಂಕರ್ ನಾಗ್ ಅದರವ್ವಿ ವಿಷ್ಣುವರ್ಧನ್, ಅನಂತ್‌ನಾಗ್,  ರಮೇಶ್ ಭಟ್, ಗಿರೀಶ್ ಕಾರ್ನಾಡ್ ರಂತಹ ದೈತ್ಯ ಪ್ರತಿಭೆಗಳನ್ನೂ ಕೂಡ ಕಿರುತೆರೆಗೆ  ಕರೆತಂದ ಕೀರ್ತಿ ಮತ್ತೆ ಶಂಕರ್ ನಾಗ್ ರವರಿಗೆ ಸಲ್ಲುತ್ತೆ.

ಒಂದು ನಿಮಿಷವೂ ಬಿಡುವಿಲ್ಲದಂತೆ ಕೆಲಸ ಮಾಡುತ್ತಿದ್ದ ಶಂಕರ್ ನಾಗ್ ತಮ್ಮ 36ನೇ ವಯಸ್ಸಿನಲ್ಲಿ ಕಾರು ಅಪಘಾತದಲ್ಲಿ ನಿಧನರಾದ್ರು. ಈ ಮೂಲಕ ಸ್ಯಾಂಡಲ್ ವುಡ್ ಸೇರಿದಂತೆ ಇಡೀ ಭಾರತ ಚಿತ್ರರಂಗ ಒಂದು ಅಪ್ರತಿಮ ಕಲಾವಿದ,ನಿರ್ದೇಶಕನನ್ನು ಕಳೆದುಕೊಳ್ತು.

ಇಂದಿಗೆ ಅವರು ನಮ್ಮನ್ನಗಲಿ 31 ವರ್ಷಗಳೇ ಗತಿಸಿವೆ. ಆದ್ರೂ ಕೂಡ ಶಂಕರ್ ನಾಗ್ ಇಂದಿಗೂ ಜನರ ಮನದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ.  ಆಟೋ ಚಾಲಕರ ಆರಾಧ್ಯ ದೈವವಾಗಿ ಇಂದಿಗೂ ಶಂಕರ್ ನಾಗ್ ರಾರಾಜಿಸುತ್ತಿದ್ದಾರೆ. ಇನ್ನು ಶಂಕರ್ ನಾಗ್ ನಮ್ಮನ್ನಗಲಿ 3 ದಶಕಗಳೇ ಕಳೆದ್ರೂ ಅವರ ಚಿತ್ರಗಳನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಇಂದು ಅದೆಷ್ಟೋ ಸಿನಿಮಾಗಳು ರೆಡಿಯಾಗ್ತಿವೆ.  ಹೀಗಾಗಿ ಕನ್ನಡಿಗರ ಕಣ್ಮಣಿ ಶಂಕರ್ ನಾಗ್ ಎಂದಿಗೂ ಜನಮಾನಸದಲ್ಲಿ ಅಜರಾಮರಗಾಗಿರ್ತಾರೆ.

ರೂಪೇಶ್, ಫಿಲಂ ಬ್ಯೂರೋ  ಕರ್ನಾಟಕ ಟಿವಿ,

- Advertisement -

Latest Posts

Don't Miss