- Advertisement -
www.karnatakatv.net : ದೇಶದ ಆರ್ಥಿಕತೆಯನ್ನು ಮೇಲೆತ್ತಲು ಉದ್ಯೋಗಿಗಳ ಸಂಬಳ ಹೆಚ್ಚಿಸುವುದೇ ಪರಿಹಾರ ಅಂತ ಜಪಾನ್ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಫುಮಿಯೊ ಕಿಶಿಡಾ ಹೇಳಿದ್ದಾರೆ..
ದೇಶದ ಸಕಲ ಸಮಸ್ಯೆಗಳಿಗೆ ಸಂಬಳ ಏರಿಕೆಯೇ ಪರಿಹಾರ ಅಂತ ಅಭಿಪ್ರಾಯಪಟ್ಟಿರೋ ಕಿಶಿಡಾ ತಾವು ಅಧಿಕಾರ ವಹಿಸಿಕೊಂಡ ಕೂಡಲೇ ಎಲ್ಲಾ ವಲಯಗಳಲ್ಲಿನ ನೌಕರರಿಗೆ ಭತ್ಯೆ ಹೆಚ್ಚಳ ಮಾಡೋ ನಿರೀಕ್ಷೆಯಿದೆ. ಹೀಗಾಗಿ ಕಿಶಿಡಾ ಮೇಲೆ ಎಲ್ಲಾ ರಂಗದ ಉದ್ಯೋಗಿಗಳಿಂದ ಈಗಾಗಲೇ ಮೆಚ್ಚುಗೆ ವ್ಯಕ್ತವಾಗ್ತಿದೆ. ಈ ಹಿಂದಿನ ಪ್ರಧಾನಿ ಶಿಂಜೊ ಅಬೆ ಅವರು ‘ಮೇಕ್ ಜಪಾನ್ ಗ್ರೇಟ್ ಅಗೇನ್’ ಎನ್ನುವ ಅಭಿಯಾನದಡಿ ಹಲವು ಆರ್ಥಿಕ ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಆದರೆ ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಪ್ರಗತಿ ಹಳ್ಳ ಹಿಡಿದಿತ್ತು.
- Advertisement -