Karkala News : ಶ್ರೀ ರಾಮ ಕ್ಷತ್ರೀಯ ಸಂಘ(ರಿ) ಕಾರ್ಕಳ ಇದರ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮ ಶ್ರೀ ರಾಮ ಸಭಾ ಭವನ ಭಾನುವಾರ ಬಂಡಿಮಠದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರು ವಹಿಸಿ ಮಾತನಾಡಿ ಜಾತಿ ಮೇಲೆ ಅಭಿಮಾನ, ಗರ್ವ, ಹೆಮ್ಮೆ ಇರಬೇಕು ಜತೆಗೆ ಜಾತಿಯವರು ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಬಾರದು ಎಂದು ಹೇಳಿದರು.
ಕು.ಚೈತ್ರಾ ಕುಂದಾಪುರ ಮಾತನಾಡಿ ಮೂಲ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಸಂಘಟನೆ ಅತ್ಯಗತ್ಯ, ನಮ್ಮ ಸಮುದಾಯದವರಿಗೆ, ಕುಲದವರಿಗೆ ಅವಮಾನ ನಡೆದಾಗ ಒಗ್ಗಟ್ಟಿನಿಂದ ಪ್ರತಿಭಟಿಸುವ ಗರ್ವ ನಮ್ಮಲಿ ಮೂಢಬೇಕು ಎಂದರು.
ಈ ಸಂದರ್ಭ 2022-23 ನೇ ಸಾಲಿನ ಸ್ವ-ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ, ಆರೋಗ್ಯ ಸಹಾಯಧನ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕರಾವಳಿ ಕಾವಲು ಪಡೆಯ ಪೆÇಲೀಸ್ ಇನ್ಸ್ ಫೆಕ್ಟರ್ ಪ್ರಮೋದ್ ಕುಮಾರ್ ಪಿ, ಮಾರಿಯಮ್ಮ ದೇವಸ್ಥಾನ, ಕಾರ್ಕಳ ಇದರ ಆನುವಂಶೀಯ ಆಡಳಿತ ಮೊಕ್ತೇಸರ ಸುರೇಶ್ ಹವಾಲ್ದಾರ್, ಸಂಘದ ಗೌರವಾಧ್ಯಕ್ಷ ಹಾಗೂ ನಿಕಟಪೂರ್ವಾಧ್ಯಕ್ಷ ಪ್ರಸನ್ನ ಕೆ.ಬಿ, ಸಂಘದ ಉಪಾಧ್ಯಕ್ಷ ಅಂಬಾಪ್ರಸಾದ್ ವರ್ಷದ ಉಪಸ್ಥಿತರಿದ್ದರು.
Janardhan Bhat : ಅರಿವು-ತಿಳಿವು ಕಾರ್ಯಕ್ರಮದಲ್ಲಿ ಲೂಸಿಯಾಡ್ಸ್, ಭಾರತದ ಅನ್ವೇಷಣೆ ಕುರಿತು ಉಪನ್ಯಾಸ
Pradeep Eshwar : ವರಮಹಾಲಕ್ಷ್ಮೀ ಹಬ್ಬಕ್ಕೆ ಪ್ರದೀಪ್ ಈಶ್ವರ್ ಬಂಪರ್ ಗಿಫ್ಟ್…!

