Friday, May 16, 2025

Latest Posts

ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಅರಿವನ್ನು ಮೂಡಿಸಬೇಕಿದೆ: ರಿಷಭ್ ಶೆಟ್ಟಿ

- Advertisement -

Karkala News:

ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಉದ್ಘಾಟನೆ ವೇಳೆ ರಿಷಭ್ ಶೆಟ್ಟಿ ಧರ್ಮದ ಕುರಿತಾದ ಸಂದೇಶ ನೀಡಿದ್ದಾರೆ.  ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಪರಶುರಾಮ ಥೀಂ ಪಾರ್ಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ರಿಷಬ್ ಶೆಟ್ಟಿ  ಧರ್ಮ ಧರ್ಮ ಅಂತ ಬಾಯಲ್ಲಿ ಹೇಳಿದರೆ ಸಾಧ್ಯವಾಗುವುದಿಲ್ಲ ನಾವು ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಅರಿವನ್ನು ಮೂಡಿಸಬೇಕಿದೆ.  ಕಾರ್ಕಳ ತಾಲೂಕಿನಲ್ಲಿ ಸಾಕಷ್ಟು ಪ್ರವಾಸಿ ತಾಣಗಳು ಧಾರ್ಮಿಕ ಕೇಂದ್ರಗಳಿವೆ.  ಇಲ್ಲಿನ ಶಿಲ್ಪಕಲೆ, ಗೊಮ್ಮಟೇಶ್ವರನ ವಿಗ್ರಹ ಈಗಾಗಲೇ ಪ್ರಸಿದ್ಧಿಯಾಗಿದೆ. ಹೊಸದಾಗಿ ನಿರದಮಾಣವಾಗಿರುವ ಪರಶುರಾಮ ಥೀಂ ಪಾರ್ಕ್, ಪರಶುರಾಮನ 33 ಅಡಿ ಎತ್ತರದ ಮೂರ್ತಿ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲಿದೆ. ಸಚಿವ ಸುನೀಲ್ ಕುಮಾರ್ ಜನ ನೆನಪಿನಲ್ಲಿ ಉಳಿಯುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

- Advertisement -

Latest Posts

Don't Miss