- Advertisement -
Karkala News : ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು. ಅನೇಕ ರೀತಿಯ ಅವಘಡಗಳು ಕೂಡಾ ಸಂಭವಿಸಿವೆ. ಆದರೂ ಕೂಡಾ ಮಳೆಯ ಆರ್ಭಟ ಇನ್ನೂ ನಿಂತಿಲ್ಲ.
ಕಾರ್ಕಳದಲ್ಲಿ ಮನೆಯ ಮೇಲೆ ಮರವೊಂದು ಉರುಳಿ ಬಿದ್ದು ಭಾರಿ ನಷ್ಟ ಉಂಟಾಗಿದೆ.ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ನಿಂಜೂರು ಗ್ರಾಮದ ಶ್ರೀನಿವಾಸ್ ನಾಯಕ್ ಎಂಬುವರ ಮನೆಗೆ ಮರ ಬಿದ್ದು ಹಾನಿಯಾದ ಘಟನೆ ನಡೆದಿದೆ.
ಸುಮಾರು ಅಂದಾಜು ರೂ. 40,000 ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳ ಗ್ರಾಮಕರಣಿರು ಹಾಗೂ ಕಂದಾಯ ನಿರೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -