ಶಿವನಮೊಗ್ಗದ ಕುವೆಂಪು ವಿಮಾನ ನಿಲ್ಧಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಮ್ಮಅಮೃತ ಹಸ್ತದಿಂದ ಫೆಬ್ರವರಿ 27 ರಂದು ಉದ್ಘಾಟನೆ ಮಾಡಿದರು.ಆದರೆ ಅಂದಿನಿಂದ ಇವತ್ತಿನವರೆಗೂ ಕಾರ್ಯ ಆರಂಭವಾಗಿಲ್ಲ. ಆದರೆ ಈಗ ಕಾಲ ಕೂಡಿಬಂದಂತೆ ಕಾಣುತ್ತಿದೆ.
ಶಿವಮೊಗ್ಗ ವಿಮಾನ ನಿಲ್ಧಾಣದ ಕಾರ್ಯಚರಣೆ ಆಗಸ್ಟ್ 11 ರಂದು ಆರಂಬವಾಗಲಿದ್ದು ವಿಮಾನ ಹಾರಟಕ್ಕೆ ಈಗಾಗಲೆ ಸಮಯವನ್ನು ನಿಗಧಿ ಮಾಡಿದೆ. ಬೆಂಗಳೂರಿನಿಂದ ಬೆಳಗ್ಗೆ 9.50ಕ್ಕೆ ಹೊರಡಲಿರುವ ವಿಮಾನ 11.05ಕ್ಕೆ ಶಿವಮೊಗ್ಗ ತಲುಪಲಿದೆ. ಶಿವಮೊಗ್ಗದಿಂದ 11.25ಕ್ಕೆ ಹೊಡಲಿರುವ ವಿಮಾನ 12.25ಕ್ಕೆ ಬೆಂಗಳೂರು ತಲುಪಲಿದೆ ಎಂದು ಇಂಡಿಗೊ ವಿಮಾನಯಾನ ಸಂಸ್ಥೆಯ ಟಿಕೆಟ್ ಬುಕಿಂಗ್ ವಿಂಡೋದಲ್ಲಿರುವ ಮಾಹಿತಿಯಿಂದ ತಿಳಿದುಬಂದಿದೆ.
ಸದ್ಯ ಶಿವಮೊಗ್ಗ ಬೆಂಗಳೂರು ಮಧ್ಯೆ ಮೊದಲಿಗೆ ವಿಮಾನ ಹಾರಾಟ ಆರಂಭವಾಗಲಿದೆ. ಆ ನಂತರ ಉಳಿದ ಮಾರ್ಗಗಳಲ್ಲಿಯೂ ಹಾರಾಟ ಆರಂಭಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.ಆಗಸ್ಟ್ 11 ರಂದು ಕಾರ್ಯ ಚರಣೆ ಆರಂಭವಾಗಲಿರುವ ವಿಮಾನ ನಿಲ್ಧಾಣ ಸುಗಮವಾಗಿ ಮುಂದುವರಿಯಲಿ ಎಂದು ಹರಸೋಣ.
Kunigal: ಕ್ಷೇತ್ರದ ಜನರ ಪಾಲಿನ ದೇವರಾಗಿದ್ದಾರೆ ಶಾಸಕರಾದ ಡಾ ರಂಗನಾಥ್ ಅವರು
Helping Nature: ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದವನಿಗೆ ನೆರವು: ಆಸ್ಪತ್ರೆಗೆ ಸೇರಿಸಿದ ಶಿವಶಂಕರ..!