ರಾಜ್ಯದ 19 ಜಿಲ್ಲೆಗಳು ಅನ್ ಲಾಕ್

www.karnatakatv.net ರಾಜ್ಯ :ಇಂದಿನಿಂದ ಬೆಂಗಳೂರು ಸೇರಿದಂತೆ ರಾಜ್ಯದ 19 ಜಿಲ್ಲೆಗಳು ಅನ್ ಲಾಕ್ ಆಗಿವೆ. ಕೊರೊನಾ 2ನೇ ಅಲೆ ಕಡಿಮೆ ಮಾಡಲು ಕಳೆದೆರಡು ತಿಂಗಳಿಂದ ಜಾರಿ ಮಾಡಲಾಗಿದ್ದ ಲಾಕ್ ಡೌನ್ ಇಂದಿನಿಂದ ಮೊದಲ ಹಂತದ ರಿಲೀಫ್ ಸಿಕ್ಕಿದೆ. ಕೊರೋನಾ ಪಾಸಿಟೀವ್ ರೇಟ್ ಕಡಿಮೆಯಾಗಿರೋ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ 19 ಜಿಲ್ಲೆಗಳು ಅನ್ ಲಾಕ್ ಮಾಡಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಆದ್ರೆ, ಇದರ ಬೆನ್ನಲ್ಲೇ ಹೊಸ ರೂಲ್ಸ್ ಜಾರಿಯಾಗಿದ್ದು, ಅಗತ್ಯ ವಸ್ತುಗಳ ಖರೀದಿಗೆ ಸಮಯವನ್ನ ಹೆಚ್ಚಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಸಿಕ್ಕಿದೆ. ಆಟೋ, ಟ್ಯಾಕ್ಸಿ ಸೇವೆ ಲಭ್ಯವಿದ್ದು, ಕೇವಲ ಇಬ್ಬರು ಮಾತ್ರ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಆದ್ರೆ, ಬಿಎಂಟಿಸಿ, ಕೆಎಸ್ಆರ್ ಟಿಸಿ ಹಾಗೂ ಮೆಟ್ರೋ ಸಂಚಾರದ ಓಡಾಟ ಇರುವುದಿಲ್ಲ. ಇನ್ನು, ವಾರಾಂತ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಶುಕ್ರವಾರ ಸಂಜೆ 7ಗಂಟೆಯಿಂದ ಸೋಮವಾರ ಬೆಳಗ್ಗೆ 5ಗಂಟೆವರೆಗೂ ಕರ್ಫ್ಯೂ ಜಾರಿಯಾಗಿದೆ.

About The Author