ಗದ್ದಲದ ವಾತಾವರಣ – ಸದ್ದಿಲ್ಲದೇ ಈ ಮಸೂದೆಗಳು ಪಾಸ್!

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಭಾರಿ ಗದ್ದಲ ಸೃಷ್ಟಿಯಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದ ಆರೋಪದ ಬೆನ್ನಲ್ಲೇ, ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟುಹಿಡಿದು ವಿಪಕ್ಷಗಳು ವಿಧಾನಮಂಡಲ ಅಧಿವೇಶನದಲ್ಲಿ ತೀವ್ರ ಪ್ರತಿಭಟನೆ ನಡೆಸಿವೆ. ಸದನದಲ್ಲಿ ಗದ್ದಲದ ವಾತಾವರಣವಿದ್ದರೂ ಸರ್ಕಾರವು ಹಲವು ಪ್ರಮುಖ ಮಸೂದೆಗಳಿಗೆ ಒಪ್ಪಿಗೆ ಪಡೆದುಕೊಂಡಿದೆ.

ಎಸ್ ‘ಸೋಮವಾರ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ವಾಲ್ಮೀಕಿ ನಿಗಮದ ಹಗರಣದ ಕಾವು ಜೋರಾಗಿಯೇ ಇತ್ತು. ಸಚಿವ ಬಿ. ನಾಗೇಂದ್ರ ಅವರು ಕೂಡಲೇ ರಾಜೀನಾಮೆ ನೀಡಬೇಕು ಅಂತಾ ಆಗ್ರಹಿಸಿ ಪ್ರತಿಪಕ್ಷಗಳ ಸದಸ್ಯರು ಸದನದಾವಾಣಿಯಲ್ಲಿ ಪ್ರತಿಭಟನೆ ನಡೆಸಿದರು.

ಈ ಗದ್ದಲದ ನಡುವೆಯೇ ಸರ್ಕಾರವು ಯಾವುದೇ ಚರ್ಚೆಗೆ ಅವಕಾಶ ನೀಡದೆ ಹಲವು ಪ್ರಮುಖ ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸಿಕೊಂಡಿತು. ವಿಪಕ್ಷಗಳ ಈ ಪ್ರತಿಭಟನೆ ಹಾಗೂ ಗದ್ದಲದ ನಡುವೆ ಮಸೂದೆಗಳನ್ನು ಪಾಸ್ ಮಾಡಿಕೊಂಡಿರುವುದು ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ ಎಂದು ಪ್ರತಿಪಕ್ಷಗಳ ನಾಯಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಹಾಗಾದರೆ, ಈ ಗದ್ದಲದ ಮಧ್ಯೆ ಯಾವ್ಯಾವ ಪ್ರಮುಖ ಮಸೂದೆಗಳು ಪಾಸ್ ಆದವು ಗೊತ್ತಾ? ಇಲ್ಲಿದೆ ನೋಡಿ.

ಹೌದು ‘ ಮೊದಲನೆಯಾದಾಗಿ 2026ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ಮಸೂದೆ. 2026ನೇ ಸಾಲಿನ ಕರ್ನಾಟಕ ಕೈಗಾರಿಕೆ ಸೌಲಭ್ಯ ತಿದ್ದುಪಡಿ ಮಸೂದೆ. 2026ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ಮಸೂದೆ. ಹಾಗೇನೇ 2026ನೇ ಸಾಲಿನ ಕರ್ನಾಟಕ ಅಂಗಡಿಗಳ ಮತ್ತು ವಾಣಿಜ್ಯ ಕಾರ್ಯ ಸಂಸ್ಥೆಗಳ ತಿದ್ದುಪಡಿ ಮಸೂದೆ. ಅದರ ಜೊತೆಗೆ ‘2026ನೇ ಸಾಲಿನ ಕರ್ನಾಟಕ ಗ್ರಾಮ ಸ್ವಾರಾಜ್ ಪಂಚಾಯತ್ ರಾಜ್ ವಿಧೇಯಕ ಮತ್ತು ‘2026ನೇ ಸಾಲಿನ ಕರ್ನಾಟಕ ಸರ್ಕಾರಿ ಉದ್ಯಾನಗಳ ಸಂರಕ್ಷಣೆ ತಿದ್ದುಪಡಿ ಮಸೂದೆ ಜಾರಿಗೆ ಮಾಡಲಾಯಿತು. ಈ ಎಲ್ಲಾ ಮಸೂದೆಗಳು ಚರ್ಚೆಯಿಲ್ಲದೆ ಅಂಗೀಕಾರಗೊಂಡಿವೆ ಅಂತ ಹೇಳಲಾಗ್ತಿದ್ದು, ವಿಪಕ್ಷಗಳ ಪಟ್ಟು ಮತ್ತು ಸರ್ಕಾರದ ಮಸೂದೆ ಅಂಗೀಕಾರದ ಈ ರಾಜಕೀಯ ಹೈಡ್ರಾಮಾ ರಾಜ್ಯದಲ್ಲಿ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ ಅಂತಾನೆ ಹೇಳಬಹುದು.

About The Author