ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಮ್ಮೆ ಭಾರೀ ಆಘಾತ ಎದುರಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿ ದಿನ 9 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದೆ. ಈ ಬಗ್ಗೆ ರಾಜ್ಯದಲ್ಲಿ ಮತ್ತೆ ರಾಜಕೀಯ ಹಾಗೂ ರೈತಪರ ಸಂಘಟನೆಗಳ ಆಕ್ರೋಶ ಭುಗಿಲೆದ್ದಿದೆ.
ಕಾವೇರಿ ನೀರು ಹಂಚಿಕೆ ವಿಚಾರವಾಗಿ ಇಂದು ನಡೆದ CWRC ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿಂದೆ 12 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಲಾಗಿತ್ತು, ಈಗ ಅದನ್ನು ಸ್ವಲ್ಪ ಇಳಿಕೆ ಮಾಡಿ 9 ಸಾವಿರ ಕ್ಯೂಸೆಕ್ ನೀರು ಬಿಡಲು ತಿಳಿಸಲಾಗಿದೆ. ಮೊದಲು 3 ಸಾವಿರ ಕ್ಯೂಸೆಕ್, ಆಮೇಲೆ 12 ಸಾವಿರ ಕ್ಯೂಸೆಕ್, ಈಗ ಮೂರನೇ ಬಾರಿಗೆ 9 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚಿಸಿರುವುದು ಕರ್ನಾಟಕಕ್ಕೆ ತೀವ್ರ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ನಾಳೆ CWRC ಸಭೆ ಹಾಗೂ ಮುಂದಿನ ಸೋಮವಾರ ಸುಪ್ರೀಂ ಕೋರ್ಟ್ನಲ್ಲಿ ಈ ಬಗ್ಗೆ ವಿಚಾರಣೆ ಇರೋದ್ರಿಂದ ರಾಜ್ಯ ಸರ್ಕಾರಕ್ಕೆ ಇದು ಸವಾಲಿನ ಪರಿಸ್ಥಿತಿಯಾಗಿದೆ. ಈ ಸಭೆಯಲ್ಲಿ ಕರ್ನಾಟಕದ ವಾದವೇನು ಗೊತ್ತಾ? ನಮ್ಮ ಜಲಾಶಯಗಳಿಗೆ ಒಳಹರಿವು ಸುಮಾರು ಶೇಕಡಾ 49ರಷ್ಟು ಕುಸಿದಿದೆ. ಕುಡಿಯುವ ನೀರಿಗೇ ಕಷ್ಟವಾಗ್ತಿರೋವಾಗ ತಮಿಳುನಾಡಿಗೆ ನಿರಂತರವಾಗಿ ನೀರು ಬಿಡುವುದು ಅಸಾಧ್ಯ ಅಂತಾ ನಮ್ಮ ಅಧಿಕಾರಿಗಳು ಅಂಕಿ-ಅಂಶಗಳ ಸಮೇತ ಮನವಿ ಮಾಡಿದ್ದಾರೆ.
ಈ ಸಂಕಷ್ಟದ ಹೊರೆ ಕೇವಲ ಕರ್ನಾಟಕದ ಮೇಲೆ ಮಾತ್ರ ಬೀಳಬಾರದು ಅನ್ನೋದು ನಮ್ಮ ವಾದ. ಆದ್ರೆ ತಮಿಳುನಾಡಿನವರೋ, ಬಾಕಿ ಇರುವ 17.49 ಟಿಎಂಸಿ ಸೇರಿ ಒಟ್ಟು 28 ಟಿಎಂಸಿಗೂ ಅಧಿಕ ನೀರು ಹರಿಸಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಕೊನೆಗೆ ಎರಡೂ ರಾಜ್ಯಗಳ ಪರಿಸ್ಥಿತಿ ಪರಿಗಣಿಸಿ, ಬಿಳಿಗುಂಡ್ಲುವಿನಲ್ಲಿ ಸೆಕೆಂಡ್ಗೆ 9 ಸಾವಿರ ಕ್ಯೂಸೆಕ್ ಹರಿವು ಖಚಿತಪಡಿಸುವಂತೆ CWRC ಆದೇಶಿಸಿದೆ.
ಅದರಂತೆ ಮುಂದಿನ 15 ದಿನಗಳ ಕಾಲ ಬಿಳಿಗುಂಡ್ಲುವಿನಲ್ಲಿ ಸುಮಾರು 11.66 ಟಿಎಂಸಿ ನೀರು ಹರಿಯುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಮಳೆಯಿಲ್ಲದೆ ಕಂಗಾಲಾಗಿರುವ ಕನ್ನಡಿಗರಿಗೆ ಹಾಗೂ ರೈತರಿಗೆ ಈ ಆದೇಶ ಮತ್ತಷ್ಟು ಸಂಕಷ್ಟ ತಂದಿದೆ. ಇದರ ಜೊತೆಗೆ ‘ಸುಪ್ರೀಂ ಕೋರ್ಟ್ನಲ್ಲಿ ಮುಂದಿನ ವಾರ ಬರುವ ತೀರ್ಪು ಏನಿರುತ್ತೆ ಅಂತಾ ಕಾದು ನೋಡಬೇಕು..
