Monday, December 23, 2024

Latest Posts

ಕೊರೊನಾಗೆ ಕನ್ನಡಿಗನಿಂದ ಔಷಧಿ, ಮೋದಿಗೆ ಪತ್ರ ಬರೆದು ಮನವಿ

- Advertisement -

ಕರ್ನಾಟಕ ಟಿವಿ : ಕೊರನಾ ವೈರಸ್ ವಿಶ್ವದಾದ್ಯಂತ ಸಂಕಷ್ಟ ತಂದಿಟ್ಟಿದೆ. ಇನ್ನೂ ಕೊರಿನಾಗೆ ಸೂಕ್ತ ಔಷಧಿ ಸಿಕ್ಕಿಲ್ಲ. ಆದ್ರೆ ಭಾರತದಲ್ಲಿ ಹೆಚ್ಚು ಉತ್ಪಾದನೆ ಮಾಡು ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಸಿ ಅಮೆರಿಆ ಸೇರಿದಂತೆ ಹಲವು ದೇಶಗಳು ಕೊರೊನಾ ಗುಣಪಡಿಸುತ್ತಿವೆ. ಅಲ್ಲದೇ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ರಕ್ಷಣೆಯನ್ನು ಪಡೆದುಕೊಳ್ಳಲು ಭಾರತೀಯ ಪಾರಂಪರಿಕ ವೈದ್ಯಕೀಯ ಪದ್ಧತಿಗಳ ಮೂಲಕವೂ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದು ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಭಾರತೀಯ ವಿಧಾನದ ಮೂಲಕ ಹೋರಾಡುವ ಬಗ್ಗೆ ಸಲಹೆ ನೀಡಿದ್ದಾರೆ.

https://www.youtube.com/watch?v=ksUKylauCqQ

ಅಷ್ಟಕ್ಕೂ ಮೋದಿಗೆ ಬರೆದ ಪತ್ರದಲ್ಲಿ ಏನಿದೆ..?

 “ಬಜೆ ಅಥವಾ ವಚ ಗಿಡದ (ವೈಜ್ಞಾನಿಕ ಹೆಸರು : Acorus calamus) ಗಡ್ಡೆಯನ್ನು (ಕಾಂಡ) ಗೋಮೂತ್ರದಲ್ಲಿ ಅದ್ದಿ ತೇಯಬೇಕು. ಅರ್ಧ ಚಮಚದಷ್ಟು ಇದರ ರಸವನ್ನು ಅರ್ಧ ಚಮಚ ಜೇನಿನೊಂದಿಗೆ ದಿನಕ್ಕೆ ಎರಡು ಬಾರಿ ಮೂರು ದಿನಗಳ ಕಾಲ ಸೇವಿಸಿದರೆ ಕೊರೋನಾ ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಕೊರೋನಾವೈರಸ್ ಬಾಧೆಯನ್ನು ಈ ಸರಳ ಪಾರಂಪರಿಕ ಔಷಧೀಯ ವಿಧಾನದಿಂದ ಎದುರಿಸಬಹುದು” ಎಂದು ಅವರು ಮೋದಿಗೆ ಪತ್ರ ಮುಖೇನ ಸಲಹೆ ನೀಡಿದ್ದಾರೆ..

ರಾಜ್ಯ, ದೇಶ, ವಿದೇಶ ಸುದ್ದಿಗಳಿಗಾಗಿ ಕರ್ನಾಟಕ ಟಿವಿ ಯುಟ್ಯೂಬ್ ಚಾನಲ್ ನೋಡಿ

ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ, ಬೆಂಗಳೂರು

- Advertisement -

Latest Posts

Don't Miss