Tipaturu: ತಿಪಟೂರು: ತಾಲ್ಲೂಕಿನ ವಿವಿಧ ಗ್ರಾಮಗಳಾದ ಮಡೆನೂರು, ಬಿ ರಂಗಾಪುರ, ಕೊನೆಹಳ್ಳಿ, ಕರಿಕೆರೆ, ಮಾರುಗೋಡನಹಳ್ಳಿ ಗ್ರಾಮಗಳಲ್ಲಿ ಕರ್ನಾಟಕ ಬಹುಜನ ಚಳುವಳಿಯ ಗ್ರಾಮ ಶಾಖೆ ನಾಮಫಲಕಗಳನ್ನು ಸಂಸ್ಥಾಪಕ ರಾಜ್ಯಅಧ್ಯಕ್ಷರಾದ ಕನಕೆನಹಳ್ಳಿ ಕೃಷ್ಣಪ್ಪನವರು ಪುಷ್ಪಾರ್ಚನೆ ಮಾಡುವ ಮುಖಾಂತರ ಉದ್ಘಾಟನೆ ನೆರವೇರಿಸಿದರು.
ನಂತರ ಮಾತನಾಡಿದ ರಾಜ್ಯಾಧ್ಯಕ್ಷರಾದ ಕನಕೆನಹಳ್ಳಿ ಕೃಷ್ಣಪ್ಪನವರು. ಕರ್ನಾಟಕ ಬಹುಜನ ಚಳುವಳಿಯ ಉದ್ದೇಶ ಎಲ್ಲ ಜಾತಿಯ ಜನಾಂಗದವರನ್ನು ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಅಭಿವೃದ್ಧಿಗೊಳಿಸುವುದು. ಪ್ರೊ. ಬಿ ಕೃಷ್ಣಪ್ಪನವರು ಬಹುತೇಕ ಈ ನಾಡಿನಲ್ಲಿ ಸಂಘಟನೆಯನ್ನು ಕಟ್ಟಿ ಬೆಳೆಸಿದವರು ಅವರ ಹಾದಿಯಲ್ಲಿ ನಾವು ಸಹ ನಡೆಯುತ್ತಿರುವುದು. ಪ್ರತಿ ಒಂದು ಊರುಗಳಲ್ಲಿ ಸ್ವಾತಂತ್ರ ಬಂದು ಸುಮಾರು ವರ್ಷ ಹಾಗಿದ್ದರೂ ಕರ್ನಾಟಕದಲ್ಲಿ ಇಲ್ಲಿವರೆಗೂ ಕೂಡ ಯಾವ ದಲಿತ ಕಾಲೋನಿಗಳಲ್ಲಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ನೆಲೆಗಟ್ಟು ಕಾಣಲೇ ಇಲ್ಲ. ಹಾಗಾಗಿ ಮುಂದಿನ ರೂಪುರೇಷೆಗಳು ಹೇಗಿರಬೇಕು ಎಂದರೆ, ಆರ್ಥಿಕವಾಗಿ ಶೈಕ್ಷಣಿಕವಾಗಿ ನಾವು ಗಟ್ಟಿಯಾಗಬೇಕು ಎಂದರು.
ಹಾಗಾಗಿ ಎಲ್ಲಾ ಕಾಲೋನಿಗಳಲ್ಲಿ ನಮ್ಮ ಕರ್ನಾಟಕ ಬಹುಜನ ಚಳುವಳಿ ಜಾಗೃತಿ ಮೂಡಿಸುತ್ತಿದ್ದೆವೆ ಸರ್ಕಾರ ನಮ್ಮ ಸಮುದಾಯಕ್ಕೆ ಯಾವ ಯಾವ ರೀತಿ ಕೆಲಸ ಮಾಡಬೇಕು ಅಂದ್ರೆ ವ್ಯವಸಾಯ ಮಾಡುವವರಿಗೆ ಭೂಮಿ ಇಲ್ಲದವರಿಗೆ ಭೂಮಿ ಕೊಡಿಸಬೇಕು ಭೂಮಿ ಇದ್ದವರಿಗೆ ಬೋರ್ವೆಲ್ ಕೊಡಬೇಕು ಬಿತ್ತನೆ ಬೀಜಗಳನ್ನು ಕೊಡಬೇಕು ಹಾಗೆ ಹಳ್ಳಿಗಾಡಿನಲ್ಲಿ ಮೂಲಭೂತದ ಸೌಕರ್ಯ ಇಲ್ಲ ಎಜುಕೇಶನ್ ಮಾಡಲಿಕ್ಕೆ
ಹಾಗಾಗಿ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸಬೇಕಾಗಿದೆ. ನೀವೆಲ್ಲರೂ ಸಂಘಟಿತರಾಗಿ ನಿಮ್ಮ ಹಕ್ಕುಗಳನ್ನು ಪಡೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಕುಮಾರಯ್ಯ, ರಾಜ್ಯ ಯುವ ಕಾರ್ಯದರ್ಶಿ ನರಸಾಪುರ ಕಿರಣ್,
ರಾಜ್ಯ ಸಮಿತಿ ಸದಸ್ಯರುಗಳಾದ, ಸೊಂಡೆಕೊಪ್ಪ ಪ್ರಕಾಶ್ ರಾಮಣ್ಣ, ಶಿವು ಬೆಂಗಳೂರು ಗ್ರಾಮಂತರ ಪ್ರಧಾನ ಕಾರ್ಯದರ್ಶಿ, ಕೆಂಪರಾಜು ನೆಲಮಂಗಲ ಅಧ್ಯಕ್ಷರು, ಸಿದ್ದಗಂಗಪ್ಪ ಬಹುಜನ ಚಳುವಳಿ ಮುಖಂಡರು. ರಂಗಸ್ವಾಮಿ ಚಿಕ್ಕಬಿದರೆ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಕರಿಕೆರೆ ಉಮೇಶ್ ಕೆ ಆರ್, ಮಡೆನೂರ್ ಗುರುಮೂರ್ತಿ, ಲಕ್ಷ್ಮಯ್ಯ, ಮಂಜುನಾಥ್, ಜೆ ಟಿ ನರಸಿಂಹಮೂರ್ತಿ, ಗುರುಗದಹಳ್ಳಿ, ರಂಗಸ್ವಾಮಿ ಮಾರಗೋಂಡನಹಳ್ಳಿ, ಸಿದ್ದಾಪುರ ಅಶೋಕ್. ಬಿ.ರಂಗಾಪುರ ಶಾಂತಕುಮಾರ್, ಕೆಂಚಪ್ಪ ಕೊನೆಹಳ್ಳಿ ರಘು ಸೇರಿದಂತೆ ಮತಿತ್ತರರು ಉಪಸ್ಥಿತರಿದ್ದರು.