Political News: ನಿನ್ನೆ ಬೆಂಗಳೂರಿನ ಜಯನಗರದ ಎಟಿಎಂನಲ್‌ಲಿ ಹಣ ಹಾಕುವಾಗ ದರೋಡೆ ನಡೆದಿದ್ದು, ಕೋಟಿ ಕೋಟಿ ರೂಪಾಯಿ ದರೋಡೆ ಮಾಡಲಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಯತ್ನಾಳ್, ಗೃಹಸಚಿವ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 2024 : ದಾವಣಗೆರೆಯಲ್ಲಿ SBI ಬ್ಯಾಂಕ್ ದರೋಡೆ
ಜನವರಿ 2025 : ಮಂಗಳೂರಿನ ಕೋಟೆಕಾರ್ ಸಹಕಾರಿ ಸಂಘದಲ್ಲಿ ದರೋಡೆ
ಮೇ 2025 : ವಿಜಯಪುರದಲ್ಲಿಕೆನರಾ ಬ್ಯಾಂಕ್ ದರೋಡೆ
ಸೆಪ್ಟೆಂಬರ್ 2025 : ವಿಜಯಪುರದಲ್ಲಿ SBI ಬ್ಯಾಂಕ್ ದರೋಡೆ
ನಿನ್ನೆ, ಬೆಂಗಳೂರಿನ ಅಶೋಕ ಪಿಲ್ಲರ್ ಹತ್ತಿರ ಬ್ಯಾಂಕ್ ದರೋಡೆ
ಬ್ಯಾಂಕಿನಲ್ಲಿ ನಮ್ಮ ಹಣ ಸುರಕ್ಷಿತವಾಗಿರುತ್ತದೆ ಎಂದು ಸಾರ್ವಜನಿಕರು ಅಲ್ಲಿ ಹಣ ಇಡುತ್ತಾರೆ. ಅದನ್ನು ಸುರಕ್ಷಿತವಾಗಿ ಇಡಬೇಕಾದದ್ದು (safe custody) ಬ್ಯಾಂಕ್ ಹಾಗೂ ಸರ್ಕಾರದ ಕರ್ತವ್ಯ. ಅಸಮರ್ಥ ಗೃಹ ಸಚಿವರ ಆಳ್ವಿಕೆಯಲ್ಲಿ ಕರ್ನಾಟಕ ಬ್ಯಾಂಕ್ ದರೋಡೆಕಾರರಿಗೆ ನೆಚ್ಚಿನ ತಾಣವಾಗಿದೆ. ಸಾರ್ವಜನಿಕ ಹಣವನ್ನು ದೋಚುವ ದರೋಡೆಕೋರರಿಗೆ ಯಾವುದೇ ಮುಲಾಜಿಲ್ಲದೆ shoot at sight ಆದೇಶವನ್ನು ನೀಡಿ ಎಂದು ಯತ್ನಾಳ್ ಆಗ್ರಹಿಸಿದ್ದಾರೆ.
ಮಕ್ಕಳ ವಿದ್ಯಾಭ್ಯಾಸ, ಮದುವೆ, ಇತರೆ ಖರ್ಚು ವೆಚ್ಚಗಳಿಗೆ ಬ್ಯಾಂಕ್ ಗಳಲ್ಲಿ ಹಣವಿಟ್ಟರೆ ಸುರಕ್ಷಿತವಾಗಿರುತ್ತದೆ ಎಂದು ನಂಬಿ ಇಟ್ಟಿರುತ್ತಾರೆ. ಆದರೆ, ಹಾಡ ಹಗಲೇ ಜಯನಗರದಂತ ಜನನಿಭಿಡ ಪ್ರದೇಶದಲ್ಲಿ ಹಣ ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಾರೆ ಎಂದರೆ ನಮ್ಮ ಗೃಹ ಇಲಾಖೆ ಎಷ್ಟರ ಮಟ್ಟಿಗೆ ನಿಷ್ಕ್ರಿಯವಾಗಿದೆ ಎಂಬುದು ಗೊತ್ತಾಗುತ್ತದೆ. ದರೋಡೆಕಾರರಿಗೆ, ಅತ್ಯಾಚಾರಿಗಳಿಗೆ, ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಸಮಾಜಘಾತುಕರಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ವ್ಯವಹರಿಸಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.

