Saturday, July 27, 2024

Latest Posts

BREAKING NEWS ಸಿ.ಟಿ ರವಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ..!

- Advertisement -

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯರಪ್ಪ ಸಿಎಂ ಆಗ್ತಿದ್ದ ಹಾಗೆಯೇ ನೂತನ ಬಿಜೆಪಿ ರಾಜ್ಯಾಧ್ಯಕ್ಷ ಯಾರಾಗ್ತಾರೆ ಅನ್ನುವ ಪ್ರಶ್ನೆ ಮುಂದೆ ಮೂರು ಆಯ್ಕೆಗಳು ಎಲ್ಲರ ಮುಂದಿತ್ತು.. ಇದೀಗ ಎರಡು ಆಯ್ಕೆಗಳಲ್ಲಿ ಸಿ.ಟಿ ರವಿ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗೋದು ಬಹುತೇಕ ಖಚಿತವಾಗಿದೆ..

ಹೌದು ಬಿ.ಎಸ್ ಯಡಿಯೂರಪ್ಪ ಇದೀಗ ಸಂಪುಟ  ವಿಸ್ತರಣೆ ತಲೆಬಿಸಿ ನಡುವೆ ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆ ತಲೆಕೆಡಿಸಿಕೊಳ್ಳೋದನ್ನ ಬಿಟ್ಟಂತೆ ಕಾಣ್ತಿದೆ. ಈ ಮೊದಲು ಅರವಿಂದ ಲಿಂಬಾವಳಿ, ಕಾರ್ಕಳ ಸುನೀಲ್ ಕುಮಾರ್, ಸಂಸದ ನಳೀನ್ ಕುಮಾರ್ ಕಟೀಲ್, ಹಾಗೂ ಸಿಟಿ ರವಿ ಹೆಸರು ಪ್ರಬಲವಾಗಿ ಕೇಳಿ ಬರ್ತಿತ್ತು. ಆದ್ರೆ ಅರವಿಂದ್ ಲಿಂಬಾವಳಿ ಕೆಲ ಕಾರಣದಿಂದ ತಾವಾಗಿಯೇ ರೇಸ್ ನಿಂದ ದೂರ ಸರಿದಂತೆ ಕಾಣ್ತಿದ್ದಾರೆ.. ಇತ್ತ ಸುನೀಲ್ ಕುಮಾರ್ ಬಿ.ಎಸ್.ವೈ ಸಂಪುಟ ಸೇರುವ ಸಾಧ್ಯತೆ ಇದೆ. ಇನ್ನು ಸಿ.ಟಿ ರವಿ ಪರ ಸಂತೋಷ್ ಜೀ ಲಾಭಿ ಮಾಡ್ತಿರುವ ಹಿನ್ನೆಲೆ ನಳೀನ್ ಕುಮಾರ್ ಸ್ಪರ್ಧೆಯಿಂದ ಹಿಂದೆ ಸರಿದು ಸಿ.ಟಿ ರವಿ ಹಾದು ಸುಗಮ ಮಾಡಿದ್ದಾರೆ.. ಈ ಹಿನ್ನಲೆ ಶೀಘ್ರವೇ ಸಿ.ಟಿ ರವಿ ರಾಜ್ಯ ಬಿಜೆಪಿಯ ನೂತನ ಸಾರಥಿಯಾಗಲಿದ್ದಾರೆ..

- Advertisement -

Latest Posts

Don't Miss