- Advertisement -
ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅಭಿನಯದ ಕುರುಕ್ಷೇತ್ರ ಬಿಡುಗಡೆಯಾಗಿ ಭರ್ಜರಿಯಾಗಿ ಪ್ರದರ್ಶ ಕಾಣ್ತಿದೆ.. ಇದೀಗ ಡಿ ಬಾಸ್ ಅಭಿನಯದ ಮುಂದಿನ ಚಿತ್ರ ಮುಂದಿನ ತಿಂಗಳು ಬಿಡುಗಡೆಗೆ ರೆಡಿಯಾಗಿದೆ.. ಹೌದು ಸಂದೇಶ್ ನಾಗರಾಜ್ ನಿರ್ಮಾಣದ ಒಡೆಯ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗಲಿದೆ..
ಸೆಪ್ಟಂಪರ್ ಮೊದಲವಾರ ಒಡೆಯ ರಿಲೀಸ್ ಮಾಡಲು ಚಿತ್ರತಂಡ ಮೊದಲು ನಿರ್ಧಾರ ಮಾಡಿತ್ತು.. ಕುರುಕ್ಷೇತ್ರ ಸಿನಿಮಾ ರಿಲೀಸ್ ನಲ್ಲಿ ಆದ ಸಣ್ಣ ಬದಲಾವಣೆಯಿಂದ ಇದೀಗ ಸೆಪ್ಟಂಬರ್ ಎರಡು ಅಥವಾ ಮೂರನೇ ವಾರ ರಿಲೀಸ್ ಆಗೋದು ಬಹುತೇಕ ಫಿಕ್ಸ್.. ಈ ವರ್ಷದ ಮೊದಲಲ್ಲಿ ಅಂದ್ರೆ ಮಾರ್ಚ್ 1ರಂದು ಯಜಮಾನ ರಿಲೀಸ್ ಆಗಿ ಭರ್ಜರಿ ಯಶಸ್ಸು ಗಳಿಸಿತ್ತು.. ಇದೀಗ ಒಡೆಯ ಮೂಲಕ ಒಂದೇ ವರ್ಷ ಡಿ ಬಾಸ್ ಅಭಿನಯದ ಮೂರನೇ ಸಿನಿಮಾ ರಿಲೀಸ್ ಆಗ್ತಿರೋದು ಅಭಿಮಾನಿಗಳ ಭಾರೀ ಸಂಭ್ರಮಕ್ಕೆ ಕಾರಣವಾಗಿದೆ..
- Advertisement -