ಕರ್ನಾಟಕ ಟಿವಿ : ಕೆ.ಆರ್ ಪುರಂ ಅಖಾಡಲ್ಲಿ ಯಾರ ಬಲ ಎಷ್ಟಿದೆ..? ಬಿಜೆಪಿಯ ಭೈರತಿ ಬಸವರಾಜು ಪ್ಲಸ್ ಪಾಯಿಂಟ್ ಏನು..? ಮೈನಸ್ ಪಾಯಿಂಟ್ ಏನು…? ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಗೆಲುವು ಸಾಧ್ಯಾನಾ..? ಕನಕಪುರದ ಬಂಡೆ, ಟಗರು ಸಿದ್ದರಾಮಯ್ಯ ಇಬ್ರು ಧೂಳೆಬ್ಬಿಸ್ತಾರಾ..? ಕುಮಾರಸ್ವಾಮಿ ಈ ಕ್ಷೇತ್ರದಲ್ಲಿ ಯಾರಿಗೆ ಒಳಗೊಳಗೆ ಸಾಥ್ ಕೊಡ್ತಾರೆ..? ಇದೆಲ್ಲದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ..
ದೋಸ್ತಿ ಸರ್ಕಾರದ ವಿರುದ್ಧ ಸಿಡಿದೆದ್ದು 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು.. ರಾಜೀನಾಮೆ ನೀಡಿದವರಲ್ಲಿ ಬೆಂಗಳೂರು ನಗರದ ಕೆ.ಆರ್ ಪುರಂ ಕ್ಷೇತ್ರದ ಭೈರತಿ ಬಸವರಾಜು ಕೂಡ ಒಬ್ಬರು.. ಸಿದ್ದರಾಮಯ್ಯ ಪಕ್ಕಾ ಶಿಷ್ಯ ಅಂತಲೇ ಗುರುತಿಸಿ ಕೊಂಡಿದ್ದ ಭೈರತಿ ಬಸವರಾಜು ರಾಜೀನಾಮೆ ನೀಡಿದ್ದು ಕಾಂಗ್ರೆಸ್ ಗೆ ಶಾಕ್ ನೀಡಿತ್ತು.. ಇದೀಗ ಉಪಚುನಾವಣೆ ಅಖಾಡ ರೆಡಿಯಾಗಿದ್ದು ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ.. ಅನರ್ಹಗೊಂಡಿರುವ ಶಾಸಕ ಭೈರತಿ ಬಸವರಾಜು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಳೆದ ಎರಡು ಚುನಾವಣೆಯಲ್ಲಿ ಭೈರತಿ ಬಸವರಾಜು ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೇ ಮಾಡಿ ಸೋಲು ಕಂಡಿದ್ದ ನಂದೀಶ್ ರೆಡ್ಡಿ ಮೊದಲು ಬಂಡಾಯವಾಗಿ ಸ್ಪರ್ಧೇ ಮಾಡುವ ಸುಳಿವು ನೀಡಿದ್ರು.. ನಂತರ ಯಡಿಯೂರಪ್ಪ ಮಾಡಿದ ಸಂಧಾನದ ಫಲವಾಗಿ ನಂದೀಶ್ ರೆಡ್ಡಿ ಬಿಎಂಟಿಸಿ ಅಧ್ಯಕ್ಷ ಸ್ಥಾನವನ್ನ ವಹಿಸಿಕೊಂಡಿದ್ದಾರೆ. ಅಲ್ಲದೇ ಭೈರತಿ ಬಸವರಾಜು ಗೆಲುವಿಗೆ ಶ್ರಮಿಸುವುದಾಗಿ ಮಾತುಕೊಟ್ಟಿದ್ದಾರೆ.. ಕಾಂಗ್ರೆಸ್ ಪಕ್ಷ ಈಗಾಗಲೇ ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿಯನ್ನಕಣಕ್ಕಿಳಿಸಿದೆ.. ಮೊದಮೊದಲು ಕೆ.ಆರ್ ಪುರಂ ಕಾರ್ಯಕರ್ತರು ನಾರಾಯಣಸ್ವಾಮಿಗೆ ವಿರೋಧ ವ್ಯಕ್ತಪಡಿಸಿದ್ರು ಸಿದ್ದರಾಮಯ್ಯ ಗದರಿದ ನಂತರ ಸುಮ್ಮನಾಗಿದ್ದಾರೆ.. ಕೆ.ಆರ್ ಪುರಂ ನಲ್ಲಿ ಬಿಜೆಪಿಯಿಂದ ಬಸವರಾಜು ಕಾಂಗ್ರೆಸ್ ನಿಂದ ನಾರಾಯಣಸ್ವಾಮಿ ನಡುವೆ ವಾರ್ ನಡೆಯೋದು ಫಿಕ್ಸ್ ಆಗಿದೆ..
ಭೈರತಿ ಬಸವರಾಜು ಪ್ಲಸ್ ಪಾಯಿಂಟ್ ಏನು..?
ಭೈರತಿ ಬಸವರಾಜು ಕ್ಷೇತ್ರದಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ.. ಕಳೆದ ಎರಡು ಬಾರಿ ಬಿಜೆಪಿಯಿಂದ ಸ್ಪರ್ಧೇ ಮಾಡಿದ್ದಾ ನಂದೀಶ್ ರೆಡ್ಡಿ ಈಗ ಬಸವರಾಜು ಬೆನ್ನಿಗೆ ನಿಂತಿದ್ದಾರೆ.. ಎಲ್ಲಕ್ಕಿಂತ ಹೆಚ್ಚಾಗಿ ಕೆ.ಆರ್ ಪುರಂ ಹಳೇ ಹುಲಿ ದಿವಂಗತ ಎಂ ಕೃಷ್ಣಪ್ಪ ಪುತ್ರಿ ಹಿರಿಯೂರಿನ ಶಾಸಕ ಪೂರ್ಣಿಮಾ ಶ್ರೀನಿವಾಸ್ ಸಹ ಬಿಜೆಪಿಯಲ್ಲಿರೋದು ಕಮಲ ಪಕ್ಷಕ್ಕೆ ಬಲತಂದುಕೊಡಲಿದೆ.. ಕೆ.ಆರ್ ಪುರಂ ನಲ್ಲಿ ಕಳೆದ 15 ವರ್ಷದಿಂದ ರಾಜಕೀಯ ಮಾಡಿದವರೆಲ್ಲಾ ಇದೀಗ ಬಿಜೆಪಿ ಪಕ್ಷದಲ್ಲೇ ಇದ್ದಾರೆ.. ಇದು ಭೈರತಿ ಬಸವರಾಜು ಪ್ಲಸ್ ಪಾಯಿಂಟ್..
ಭೈರತಿ ಬಸವರಾಜು ಮೈನಸ್ ಪಾಯಿಂಟ್ ಏನು..?
ಭೈರತಿ ಬಸವರಾಜು ಕುರುಬ ಸಮುದಾಯಕ್ಕೆ ಸೇರಿದವರು, ಕೆ.ಆರ್ ಪುರಂ ನಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಮತದಾರರ ಸಂಖ್ಯೆ ಹೆಚ್ಚಾಗಿದೆ. ಸಿದ್ದರಾಮಯ್ಯಗೆ ಉಪ ಚುನಾವಣೆ ಪ್ರತಿಷ್ಠೆಯಾಗಿರುವ ಕಾರಣ ಕುರುಬ ಸಮುದಾಯ ಕಾಂಗ್ರೆಸ್ ಅಭ್ಯರ್ಥಿ ಬೆನ್ನಿಗೆ ನಿಲ್ಲುವ ಸಾಧ್ಯತೆ ಇದೆ.. ಅಲ್ಲದೇ ಬಿಜೆಪಿ ಹೆಚ್ಚಾಗಿ ಮೇಲ್ವರ್ಗದ ಮತಗಳನ್ನ ಹೊಂದಿರೋದು ಬೈರತಿ ಬಸವರಾಜುಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಯಾಕಂದ್ರೆ ಉಪಚುನಾವಣೆಯಲ್ಲಿ ಮತಗಟ್ಟೆಗೆ ಆಗಮಿಸಿ ನಗರ ಪ್ರದೇಶದ ಮತದಾರರು ವೋಟ್ ಹಾಕೋದು ಡೌಡು.. ಹಾಗೆಯೇ ಜೆಡಿಎಸ್ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ರು ಆ ಅಭ್ಯರ್ಥಿ ಯಾರ ಗೆಲುವಿಗೆ ಮುಳುವಾಗ್ತಾರೆ ಅನ್ನೋದನ್ನ ನೋಡಬೇಕಿದೆ.. ಇದಲ್ಲದೇ ಜೆಡಿಎಸ್ ಒಳಗೊಳಗೆ ಯಾರಿಗೆ ಬೆಂಬಲ ಕೊಡ್ತಾರೆ ಅನ್ನೋದರ ಮೇಲೆ ಬಿಜೆಪಿ ಅಭ್ಯರ್ಥಿ ಗೆಲುವು –ಸೋಲು ನಿರ್ಧಾರವಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ ನ ನಾರಾಯಣಸ್ವಾಮಿ ಬಲಾಬಲ
ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿಗೆ ಉಪಚುನಾವಣೆ ಸವಾಲಾಗಿ ಪರಿಣಮಿಸಿದೆ.. ಯಾಕಂದ್ರೆ, ವಿಧಾನ ಪರಿಷತ್ ಚುನಾವಣೆ ಎದುರಿಸಿರುವ ನಾರಾಯಣಸ್ವಾಮಿಗೆ ವಿಧಾನಸಭೆ ಚುನಾವಣೆಯನ್ನ ನೇರವಾಗಿ ಸ್ಪರ್ಧೇ ಮಾಡಿ ಟಫ್ ಫೈಟ್ ಎದುರಿಸಿದ ಅನುಭವ ಇಲ್ಲ.. ಆದ್ರೆ, ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಕುರುಬ ಸಮುದಾಯದ ಮತಗಳು ಹಾಗೂ ಸಿದ್ದರಾಮಯ್ಯರನ್ನ ನೆಚ್ಚಿಕೊಂಡಿದ್ದಾರೆ.. ಇದಲ್ಲದೇ ಕನಕಪುರ ಬಂಡೆ ಜೈಲಿಗೆ ಹೋಗಿ ಬಂದಮೇಲೆ ಒಕ್ಕಲಿಗರ ನೆಚ್ಚಿನ ನಾಯಕನಾಗಿ ಬಿಂಬಿಸಿಕೊಳ್ತಿರುವುದು ಸ್ವಲ್ಪ ಪ್ಲಸ್ ಪಾಯಿಂಟ್ ಆಗಬಹುದು. ಅಭ್ಯರ್ಥಿ ನಾರಾಯಣಸ್ವಾಮಿ ಸಹ ಒಕ್ಕಲಿಗ, ಹೀಗಾಗಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಸಹ ಡಿಕೆಶಿ ಮಾತು ಕೇಳಿ ಕೆ.ಆರ್ ಪುರಂ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಸಹಾಯವಾಗುವ ಕ್ಯಾಂಡಿಡೇಟ್ ಕಣಕ್ಕಿಳಿಸುವ ಸಾಧ್ಯತೆ ಇದೆ.. ಜೊತೆಗೆ ಬೆಂಗಳೂರಿನ ಪ್ರಭಾವಿ ನಾಯಕ, ಕಾಂಗ್ರೆಸ್ ಪಕ್ಷದ ಅನ್ ಅಫಿಶಿಯಲ್ ಖಜಾಂಚಿ ಅಂತ ಕರೆಸಿಕೊಳ್ಳುವ ಕೆ.ಜೆ ಜಾರ್ಜ್ ಹಾಗೂ ಬಿಜೆಪಿ ಭೈರತಿ ಬಸವರಾಜು ಬದ್ಧ ವೈರಿಗಳು.. ಹೀಗಾಗಿ ಜಾರ್ಜ್ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವಿಗೆ ಸಕಲ ರೀತಿಯಲ್ಲೂ ಸಹಾಯ ಮಾಡಲಿದ್ದಾರೆ.. ಸದ್ಯದ ವಾತಾವರಣದ ಪ್ರಕಾರ ಕೆ.ಆರ್ ಪುರಂ ನಲ್ಲಿ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜು ಕಾಂಗ್ರೆಸ್ ನ ನಾರಾಯಣಸ್ವಾಮಿಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ..
ಯಸ್ ವೀಕ್ಷಕರೇ ನಿಮ್ಮ ಪ್ರಕಾರ ಕೆ.ಆರ್ ಪುರಂ ನಲ್ಲಿ ಗೆಲ್ಲೋದು ಯಾರು..? ಬಿಜೆಪಿನಾ..? ಕಾಂಗ್ರೆಸ್ಸಾ..? ನಿಮ್ಮಅಭಿಪ್ರಾಯ ಕಾಮೆಂಟ್ ಮಾಡಿ